ನಾಗರಿಕ ಹಿತರಕ್ಷಣಾ ವೇದಿಕೆ: ಬೈಂದೂರು ಪಟ್ಟಣ ಪಂಚಾಯತ್ ಅನುಷ್ಟಾನಕ್ಕೆ ಮನವಿ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರಾಜ್ಯ ಸರ್ಕಾರದ ಸಂಪುಟ ಸಭೆಯಲ್ಲಿ ತಿರ್ಮಾನ ಕೈಗೊಂಡಂತೆ ಬೈಂದೂರು ಪಟ್ಟಣ ಪಂಚಾಯತ್ ಘೋಷಿಸಿದರೂ ಈ ವರೆಗೂ ರಾಜ್ಯ ಪತ್ರದಲ್ಲಿ ಅಧಿಸೂಚನೆ ಪ್ರಕಟಣೆ ಆಗಿಲ್ಲ. ಪಟ್ಟಣ ಪಂಚಾಯತ್‌ಗೆ ಅಗತ್ಯ ಕಾರ್ಯವನ್ನು ಶೀಘ್ರ ಅನುಷ್ಠಾನಕ್ಕೆ ತರುವಂತೆ ಒತ್ತಾಯಿಸಿ ಬೈಂದೂರು ಶಾಸಕ ಬಿ ಎಮ್ ಸುಕುಮಾರ್ ಶೆಟ್ಟಿ ಅವರಿಗೆ ಮನವಿ ಸಲ್ಲಿಸಲಾಯಿತು.

Click Here

Call us

Call us

ಈ ಬಗ್ಗೆ ಶಾಸಕರು ಪ್ರತಿಕ್ರಿಯಿಸಿ ಇನ್ನು ಕೆಲವೇ ದಿನಗಳಲ್ಲಿ ಸರಕಾರ ಅಧಿಸೂಚನೆ ಹೊರಡಿಸಲಿದೆ. ಅಲ್ಲದೇ ಅಗ್ನಿಶಾಮಕ ಠಾಣೆಗೆ ಬೈಂದೂರಿನಲ್ಲಿ ಈ ಹಿಂದೆ ಸ್ಥಳ ಗುರುತಿಸಿದ್ದು, ಶೀಘ್ರ ಆರಂಭಿಸುವುದು, ಮಿನಿವಿಧಾನ ಸೌಧ, ತಾಲೂಕು ಪಂಚಾಯತ್, ನ್ಯಾಯಾಲಯಗಳಿಗೆ ಸ್ಥಳವನ್ನು ಗುರುತಿಸಲಾಗಿದ್ದು ಎಲ್ಲಾ ಕೆಲಗಳು ಶೀಘ್ರ ಆಗಲಿದೆ ಎಂದು ಭರವಸೆ ನೀಡಿದ್ದಾರೆ.

Click here

Click Here

Call us

Visit Now

ಈ ನಿಯೋಗದಲ್ಲಿ ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಜಗದೀಶ್ ಪಟವಾಲ್, ಕಾರ್ಯದರ್ಶಿ ಪ್ರಕಾಶ್ ಬೈಂದೂರು, ಸದಸ್ಯರಾದ ಸುಬ್ರಹ್ಮಣ್ಯ ಶೇಟ್, ನಾಗರಾಜ್ ಕಾರಂತ್ ಬಿ. ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *

6 − six =