ನಾಗೂರು ಬಾರ್ : ಜನರ ಪರ ತೀರ್ಪು ನೀಡಿದ ಡಿಸಿ ನ್ಯಾಯಾಲಯ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು : ಕಿರಿಮಂಜೇಶ್ವರ ಗ್ರಾಮದ ನಾಗೂರಿನ ಹೆದ್ದಾರಿ ಬದಿಯಲ್ಲಿದ್ದು, ಕಳೆದ ವರ್ಷ ಕೊಡೇರಿ ರಸ್ತೆಯ ಕಟ್ಟಡಕ್ಕೆ ಸ್ಥಳಾಂತರಗೊಂಡು ಅಲ್ಲಿನ ನಿವಾಸಿಗಳ ತೀವ್ರ ವಿರೋಧ ಮತ್ತು ಕಾನೂನು ಹೋರಾಟದ ವಸ್ತುವಾದ ಬಾರ್ ಎಂಡ್ ರೆಸ್ಟೊರಂಟ್ ಪ್ರಕರಣದಲ್ಲಿ ಇದೀಗ ಜಿಲ್ಲಾಧಿಕಾರಿಗಳ ನ್ಯಾಯಾಲಯ ಜನರಪರ ತೀರ್ಪು ನೀಡಿದೆ.

Click Here

Call us

Call us

Visit Now

ಹೆದ್ದಾರಿ ಬದಿಯ ಬಾರ್‌ಗಳನ್ನು ತೆರವುಗೊಳಿಸುವಂತೆ ಸರ್ವೋಚ್ಛ ನ್ಯಾಯಾಲಯ ನೀಡಿದ ನಿರ್ದೇಶದನ್ವಯ ಈ ಬಾರನ್ನು ಸ್ಥಳಾಂತರಿಸಲು ಅವಕಾಶ ನೀಡಲಾಗಿತ್ತು. ಅದಕ್ಕೆ ಸ್ಥಳೀಯರಿಂದ ಪ್ರಬಲ ಪ್ರತಿರೋಧ ವ್ಯಕ್ತವಾಗಿತ್ತು. ಅದನ್ನು ಪರಿಗಣಿಸದೆ ಅಧಿಕಾರಿಗಳು ನೀಡಿದ ಅನುಮತಿಯ ವಿರುದ್ಧ ಜಿಲ್ಲಾ ಉಪ ಅಬಕಾರಿ ಆಯುಕ್ತರಿಗೆ, ಆ ಬಳಿಕ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಇವು ತಿರಸ್ಕೃತವಾದ ಹಿನ್ನೆಲೆಯಲ್ಲಿ ಬಾರ್ ಸ್ಥಳಾಂತರಗೊಂಡು, ವ್ಯವಹಾರ ಆರಂಭಿಸಿತ್ತು.

Click here

Click Here

Call us

Call us

ಇದರಿಂದ ನೊಂದ ಗಿರಿಜಾ ರಾಜೇಶ್ ಮತ್ತು ೪೧ ಜನರು ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೇಲ್ಮನವಿ ಸಲ್ಲಿಸಿದ್ದರು. ಅದನ್ನು ಪರಿಗಣಿಸಿದ ನ್ಯಾಯಾಲಯವು ’ಮೇಲ್ಮನವಿದಾರರ ಕೋರಿಕೆಯನ್ನು ಮಾನ್ಯ ಮಾಡುವುದಕ್ಕೆ ಯಾವುದೇ ಕಾನೂನಾತ್ಮಕ ತೊಡಕು ಇಲ್ಲವಾದ್ದರಿಂದ ಪ್ರಕರಣವನ್ನು ಮರುಪರಿಗಣನೆ ಮಾಡಬೇಕು’ ಎಂದು ನಿರ್ದೇಶಿಸಿತ್ತು. ಇದೀಗ ಜಿಲ್ಲಾಧಿಕಾರಿಗಳ ನ್ಯಾಯಾಲಯ ಪ್ರಕರಣದ ಮರು ವಿಚಾರಣೆ ನಡೆಸಿ ಸ್ಥಳಾಂತರದ ಆದೇಶವನ್ನು ರದ್ದುಪಡಿಸಿದೆ. ಮತ್ತು ಅಬಕಾರಿ ಉಪ ಆಯುಕ್ತರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತೀರ್ಪು ನೀಡಿದೆ. ತೀರ್ಪಿನಲ್ಲಿ ಬಾರ್ ಸ್ಥಳಾಂತರಕ್ಕೆ ವಿವಿಧ ಸಂಘಟನೆಗಳು, ಗ್ರಾಮ ಪಂಚಾಯಿತಿ ವ್ಯಕ್ತಪಡಿಸಿದ ವಿರೋಧ ಮತ್ತು ಮೇಲ್ಮನವಿಗೆ ಪರವಾಗಿರುವ ಹಲವು ಆಂಶಗಳನ್ನು ಉಲ್ಲೇಖಿಸಿರುವ ಜಿಲ್ಲಾಧಿಕಾರಿಗಳ ನ್ಯಾಯಾಲಯವು ಬಾರ್ ಸ್ಥಳಾಂತರಕ್ಕೆ ಅನುಮತಿ ನೀಡಲು ಅನುಕೂಲವಾಗುವಂತೆ ಕುಂದಾಪುರ ಅಬಕಾರಿ ನಿರೀಕ್ಷಕರು ಸಿದ್ಧಪಡಿಸಿದ ಪಂಚನಾಮೆಯಲ್ಲಿ ಸುಳ್ಳುಸಹಿಯನ್ನು ಪಡೆದಿರುವುದರಿಂದ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕೆಂದು ಸೂಚಿಸಿದೆ.

Leave a Reply

Your email address will not be published. Required fields are marked *

nineteen − sixteen =