ನಾಪತ್ತೆಯಾದ ವಿದ್ಯಾರ್ಥಿ ದೆಹಲಿಯಲ್ಲಿ ಪತ್ತೆ

Call us

ಕೋಟ: ಇಲ್ಲಿನ ತೆಕ್ಕಟ್ಟೆ ಕನ್ನುಕೆರೆ ನಿವಾಸಿ ಅಬ್ದುಲ್‌ ರೆಹಮಾನ್‌ ಅವರ ಪುತ್ರ ಮಹಮದ್‌ ಸಾಹೀಲ್‌ (17) ಕಳೆದ ಮೇ 23 ಶನಿವಾರದಂದು ನಾಪತ್ತೆಯಾಗಿದ್ದು 6 ದಿನಗಳ ನಂತರ ಈತ ಮೇ 28 ಗುರುವಾರ ದೆಹಲಿಯಲ್ಲಿ ಪತ್ತೆಯಾಗಿದ್ದಾನೆ .

Call us

Call us

ಮೇ 28 ಗುರುವಾರ ಬೆಳಿಗ್ಗೆ ಗಂಟೆ 6:30 ಕ್ಕೆ ಸಾಹೀಲ್‌ ತನ್ನ ತಂದೆ ಅಬ್ದುಲ್‌ ರೆಹಮಾನ್‌ ಅವರ ಮೊಬೈಲ್‌ಗೆ ಕರೆ ಮಾಡಿ ನಾನು ದೆಹಲಿಯ ನಿಜಾಮುದ್ದೀನ್‌ ರೈಲ್ವೇ ನಿಲ್ದಾಣದಲ್ಲಿ ಇದ್ದೇನೆ ಎಂದು ಹೇಳಿದ್ದಾನೆ ಕೂಡಲೇ ಮನೆಯವರು ಸಂಬಂಧಪಟ್ಟವರನ್ನು ಸಂಪರ್ಕಿಸಿ ಸಾಹೀಲ್‌ ರಕ್ಷಣೆ ಮುಂದಾಗಿದ್ದು ಮೇ 28ರಂದು ದೆಹಲಿಯಿಂದ ಮಂಗಳೂರಿಗೆ ವಿಮಾನದ ಮೂಲಕ ರಾತ್ರಿ ಮನೆಗೆ ತಲುಪಿದ್ದಾನೆ

ಬ್ರಹ್ಮಾವರ ಎಸ್‌ಎಮ್‌ಎಸ್‌ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಸಾಹೀಲ್‌ ಮೇ 23ರಂದು ಸಂಜೆ ಮನೆಯ ಸಮೀಪದಲ್ಲಿಯೇ ತನ್ನ ಸ್ನೇಹಿತರೊಂದಿಗೆ ಕ್ರಿಕೆಟ್‌ ಆಡಲು ಹೋಗುತ್ತೇನೆ ಎಂದು ಹೇಳಿ ಹೋದವನು ಸಂಜೆ 7 ಗಂಟೆಯಾದರೂ ಮನೆಗೆ ವಾಪಾಸಾಗದ ಹಿನ್ನೆಲೆಯಲ್ಲಿ ಎಲ್ಲೆಡೆಯಲ್ಲಿ ಹುಡುಕಾಟ ನಡೆಸಲಾಯಿತು ನಂತರ ಯಾವುದೇ ರೀತಿಯ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಕೆ. ಅಣ್ಣಾಮಲೈ ನಿರ್ದೇಶನದಂತೆ ನಾಪತ್ತೆ ಪ್ರಕರಣವನ್ನು ಭೇಧಿಸುವ ನಿಟ್ಟಿನಿಂದ ಪೋಲಿಸ್‌ ವಿಶೇಷವಾಗಿ ಮೂರು ತಂಡಗಳನ್ನಾಗಿ ತನಿಖಾ ಕಾರ್ಯ ಚುರುಕುಗೊಳಿಸಿದ್ದರು.

Call us

Call us

Leave a Reply

Your email address will not be published. Required fields are marked *

3 × 3 =