ನಾಪತ್ತೆ ಪ್ರಕರಣ: ಬೈಕ್ ಪತ್ತೆ, ವಿಶ್ವನಾಥ ಗೌಡನ ಸುಳಿವಿಲ್ಲ

Call us

Call us

ಕುಂದಾಪುರ: ಕಳೆದ ಶುಕ್ರವಾರ ಬೆಳ್ಳಂಬೆಳ್ಳಗೆ ಉತ್ತರ ಕನ್ನಡ ಜಿಲ್ಲೆಯ ಗುಣವಂತೆ ಗ್ರ್ರಾಮದಿಂದ ತನ್ನ ಹೀರೊ ಶೈನ್ ಬೈಕ್ ಸಹಿತ ನಾಪತ್ತೆಯಾದ ವಿಶ್ವನಾಥ ಗೌಡ (36) ಎಂಬವರ ಬೈಕ್ ಹೆಮ್ಮಾಡಿ ಸಮಿಪದ ತೊಪ್ಲುವಿಗೆ ಹೋಗುವ ತಿರುವಿನಲ್ಲಿ ಅದೇ ದಿನ ಸಂಜೆ ಪತ್ತೆ ಯಾಗಿದ್ದು ಅದರೆ ವಿಶ್ವನಾಥ ಅವರ ಸುಳಿವೇ ಇಲ್ಲವಾಗಿದೆ. ಕ್ರಷಿಕರಾಗಿದ್ದ ವಿಶ್ದವನಾಥರಿಗೆ ಹೆಂಡತಿ ಎರಡು ಮಕ್ಕಳ ಪುಟ್ಟ ಸಂಸಾರವಿದ್ದು, ಅವರ ನಾಪತ್ತೆಯಿಂದಾಗಿ ಇಡೀ ಕುಟುಂಬ ಕಳವಳಕ್ಕೀಡಾಗಿದೆ.

Call us

Call us

Visit Now

ಶುಕ್ರವಾರ ಮದ್ಯಾಹ್ನದ ಸುಮಾರಿಗೆ ತ್ರಾಸಿ ಬಳಿಯ ವೈನ್ ಶಾಪ್ ಸಮೀಪ ಅವರನ್ನು ಅವರದ್ದೇ ಊರಿನವರು ಕಂಡು ಮಾತನಾಡಿಸಿದ್ದೇ ಕೊನೆ ತದನಂತರ ಅಲ್ಲಿಂದಲೂ ಅವರು ನಾಪತ್ತೆಯಾಗಿದ್ದರೆನ್ನಲಾಗಿದೆ. ಸಂಜೆ ವೇಳೆಗೆ ಅವರ ಬೈಕ್ ಮಾತ್ರ ಅನಾಥ ಸ್ಥಿತಿಯಲ್ಲಿ ಹೆಮ್ಮಾಡಿ ಹೆದ್ದಾರಿ ಸಮೀಪ ತೊಪ್ಲುವಿನ ಬಳಿ ಪತ್ತೆಯಾಗಿದ್ದು ಗಂಗೊಳ್ಳಿ ಪೋಲಿಸರು ಅದನ್ನು ತಮ್ಮ ಸುಪರ್ದಿಗೆ ಪಡೆದು ಕೊಂಡಿದ್ದಾರೆ. ಈಗಾಗಲೇ ಅವರ ನಾಪತ್ತೆ ಪ್ರಕರಣ ಮಂಕಿ ಪೋಲೀಸ್ ಠಾಣೆಯಲ್ಲಿ ದಾಖಲಿಸಲಾಗಿದ್ದರೂ ಪರಿಣಾಮ ಮಾತ್ರ ಶೂನ್ಯ ವಾಗಿದ್ದರಿಂದ ಅವರ ಸ್ನೇಹಿತ ಬಳಗದವರು ಪತ್ತೆ ಕಾರ್ಯಕ್ಕೆ ಇಳಿದಿದ್ದು ಕುಂದಾಪುರ, ಸೇರಿದಂತೆ ಉಡುಪಿ ಮಣಿಪಾಲದ ತನಕವೂ ಹುಡುಕಾಟದಲ್ಲಿ ತೊಡಗಿದ್ದಾರೆ. ಇತ್ತೀಚಿನ ದಿನಗಳಿಂದ ಕೊಂಚ ಖಿನ್ನತೆಗೆ ಒಳಗಾಗಿದ್ದ ವಿಶ್ವನಾಥರು ಅದೇ ಅಸ್ವಸ್ಥತೆಯಲ್ಲಿ ಮನೆ ಬಿಡಲು ಕಾರಣ ಎನ್ನಲಾಗುತ್ತಿದೆ. ಇವರನ್ನು ಗುರ್ತಿಸಿದವರು ದಯವಿಟ್ಟು ಮಾಹಿತಿ ನೀಡಬೇಕೆಂದು ವಿನಂತಿಸಿಕೊಂಡಿರುವ ಅವರ ಕಟುಂಬಿಕರು ಈ ಕೆಳಗಿನ ಮೊಬೈಲ್ ಸಂಖ್ಯೆಗಳನ್ನು ನೀಡಿದ್ದಾರೆ. 9972711941,9902961910

Click here

Call us

Call us

Leave a Reply

Your email address will not be published. Required fields are marked *

twenty − 7 =