ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಖಂಬದಕೋಣೆ ನಿರ್ಮಲಾ ಸಭಾಭವನ ದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆ ನಡೆಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ನಾಯ್ಕನಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ರಮೇಶ ಪೈ, ಹೈನುಗಾರರು ಹಾಲಿನ ಗುಣಮಟ್ಟ ಕಾಪಾಡುವುದರ ಜತೆಗೆ, ಸ್ವಚ್ಛತೆ ಕಡೆಗೆ ಹೆಚ್ಚು ಗಮನ ನೀಡಬೇಕು ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಉಪಾಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ವೈಜ್ಞಾನಿಕ ಹೈನುಗಾರಿಕೆ ಮತ್ತು ಹೈನುರಾಸು ವಿಮೆ ಕುರಿತು ಮಾಹಿತಿ ನೀಡಿದರು. ಒಕ್ಕೂಟದ ವಿಸ್ತರಣಾಧಿಕಾರಿ ರಾಜಾರಾಮ ಒಕ್ಕೂಟದಿಂದ ದೊರೆಯುವ ಸೌಲಭ್ಯಗಳನ್ನು ವಿವರಿಸಿದರು. ಸಂಘ ಕಳೆದ ವರ್ಷ ₹2 ಲಕ್ಷ ನಿವ್ವಳ ಲಾಭ ಗಳಿಸಿದ ಪ್ರಯುಕ್ತ ಸದಸ್ಯರಿಗೆ ಶೇ 12 ಲಾಭಾಂಶ ಮತ್ತು ಬೋನಸ್ ವಿತರಿಸಲು ನಿರ್ಧರಿಸಲಾಯಿತು.
ಉಪಾಧ್ಯಕ್ಷ ಹೆರಿಯ ಪೂಜಾರಿ, ಕಾರ್ಯದರ್ಶಿ ದಿವ್ಯಾ ಭಟ್ , ಪ್ರಮೋದಾ ಪೈ , ನಿರ್ದೇಶಕರಾದ ಗೋಪಾಲ ಗಾಣಿಗ, ರಾಮ ಪೂಜಾರಿ, ಕೃಷ್ಣಮೂರ್ತಿ ಹೆಬ್ಬಾರ್, ವಿಜಯಾ ಪ್ರಭು, ರುಕ್ಕು ಪೂಜಾರಿ, ಕಮಲಾಕ್ಷಿ ಕೊಠಾರಿ, ಗಂಗೆ ದೇವಾಡಿಗ, ಕೃಷ್ಣಿ ದೇವಾಇಗ, ಗೋವಿಂದು ಕೆ., ಹಾಲು ಪರೀಕ್ಷಕಿ ಭಾರತಿ ಇದ್ದರು.