ನಾಲಂದಾದಿಂದ ಕ್ರೈಸ್ತರ ಪವಿತ್ರ ಕ್ಷೇತ್ರಗಳಿಗೆ ಪ್ರವಾಸ

Call us

Call us

ಕುಂದಾಪುರ: ಸ್ವಾಮಿ ಏಸು ಕ್ರಿಸ್ತರು ಬದುಕಿ. ನಡೆದಾಡಿದ, ತಮ್ಮ ಅನುಯಾಯಿಗಳಿಗೆ ಬೋಧನೆಗಳನ್ನು ಮಾಡಿದ ಹಲವಾರು ಸ್ಥಳಗಳಿಗೆ ಪ್ರವಾಸವನ್ನು ನಾಲಂದಾ ಟ್ರಾವೆಲ್ಸ್ ಹಮ್ಮಿಕೊಂಡಿದೆ. ಈ ವಿಶೇಷ ಪ್ರವಾಸದಲ್ಲಿ ಜೋರ್ಡಾನ್, ಇಸ್ರೇಲ್, ಪ್ಯಾಲೆಸ್ಟೈನ್ ಮತ್ತು ಈಜಿಪ್ಟ್ ದೇಶಗಳ ಅನೇಕ ಸ್ಥಳಗಳನ್ನು ಸಂದರ್ಶಿಸಲಾಗುವುದು. ಇದರಲ್ಲಿ ವಿಶ್ವವಿಖ್ಯಾತ ಈಜಿಪ್ಟಿನ ಪಿರಮಿಡ್ ಮತ್ತು ನೈಲ್ ನದಿ ಯಾನವೂ ಸೇರಿದೆ. ಝಿಯಾನ್ ಪರ್ವತ, ಮೃತ ಸಮುದ್ರ, ಜೆರಿಕೊ, ಬೆಥನಿ, ಕೆಂಪು ಸಮುದ್ರ, ನೆಬೊ ಪರ್ವತ, ನಝರೆತ್, ಸಂತ ಪೀಟರ್ ಚರ್ಚ್, ಗಲಿಲೇ ಸಮುದ್ರ, ಹೈಫಾ, ಟೆಲ್ ಅವಿವ್ ಮತ್ತು ಜಫ್ಫಾಗಳಲ್ಲಿ ವಿಸ್ತೃತ ಪ್ರವಾಸವಿರುತ್ತದೆ.

Call us

Call us

Visit Now

ಹತ್ತು ದಿನಗಳ ಈ ಪ್ರವಾಸವು ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ಇದ್ದು, ರಿಯಾಯ್ತಿ ದರದಲ್ಲಿ ಅತ್ಯುತ್ತಮ ಸೌಲಭ್ಯಗಳನ್ನು ಒದಗಿಸುವುದಾಗಿ ನಾಲಂದಾ ಟ್ರಾವೆಲ್ಸ್‌ನ ಮಾಲಿಕ ಮುನಿಯಾಲ್ ಗಣೇಶ್ ಶೆಣೈ ತಿಳಿಸಿದ್ದಾರೆ. ಪ್ರವಾಸದಲ್ಲಿ ಇವರೂ ಸಹ ಮಾರ್ಗದರ್ಶಕರಾಗಿ ಬರಲಿದ್ದಾರೆ. ಸೀಮಿತ ಸೀಟುಗಳಿರುವ ಈ ಪ್ರವಾಸದಲ್ಲಿ ಪಾಲ್ಗೊಳ್ಳಲು ಬಯಸುವವರು ನಾಲಂದಾ ಟ್ರಾವೆಲ್, ನಾಲಂದಾ, ಶ್ರೀ ವೆಂಕಟರಮಣ ದೇವಸ್ಥಾನದ ಬಳಿ, ಮುಖ್ಯ ರಸ್ತೆ, ಕುಂದಾಪುರ- ಇಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.

Click here

Call us

Call us

Leave a Reply

Your email address will not be published. Required fields are marked *

fifteen − fourteen =