ನಾವುಂದ ಲಯನ್ಸ್ ಕ್ಲಬ್‌ಗೆ ಲಯನ್ಸ್ ಜಿಲ್ಲಾ ಗವರ್ನರ್ ಭೇಟಿ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಸಮಾಜಮುಖಿ ಚಿಂತನೆಯ ಜೊತೆಗೆ ಕಷ್ಟದಲ್ಲಿರುವ ಬಡವರ, ಅಸಾಯಕರ, ರೋಗಿಗಳ, ಅಂಗವಿಕಲರ ಮುಖದಲ್ಲಿ ನಗು ಕಾಣಬೇಕಾದರೆ ನಾವು ಅಂತವರನ್ನು ಗುರುತಿಸಿ ತಕ್ಷಣ ಸ್ಪಂದಿಸಬೇಕು. ಹೃದಯಪೂರ್ವಕವಾಗಿ ಮಾಡಿದ ಸೇವೆಗಿಂತ ದೊಡ್ಡ ಯಜ್ಞ ಮತ್ತೊಂದಿಲ್ಲ ಎಂದು ಲಯನ್ಸ್ ಜಿಲ್ಲಾ ಗವರ್ನರ್ ಹೆರ್ಗ ವಿಶ್ವನಾಥ ಶೆಟ್ಟಿ ಹೇಳಿದರು.

Call us

Call us

ನಾವುಂದ ಲಯನ್ಸ್ ಕ್ಲಬ್‌ಗೆ ಅಧಿಕೃತ ಭೇಟಿ ನೀಡಿ, ಸಂಜೆ ಮಾಲಸಾ ಆರ್ಕೆಡ್‌ನಲ್ಲಿ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಆರಂಭಗೊಂಡ ಕೇವಲ ಎರಡು ವರ್ಷಗಳಲ್ಲಿ ನಾವುಂದ ಕ್ಲಬ್ ಕಳೆದ ಡಿಸೆಂಬರ್‌ನಲ್ಲಿ ಟಾಪ್ ೧೦ ಕ್ಲಬ್‌ಗಳಲ್ಲಿ ೫ನೇ ಸ್ಥಾನ ಪಡೆದುಕೊಂಡ ಬಗ್ಗೆ ತುಂಬಾ ಹೆಮ್ಮೆಯಾಗುತ್ತದೆ. ಸೇವಾ ಮನೋಭಾವನೆಯಿರುವ ಯುವಕರನ್ನು ಕ್ಲಬ್‌ಗೆ ಸೇರಿಸಿಕೊಂಡು ಗ್ರಾಮೀಣಾಭಿವೃದ್ಧಿಯತ್ತ ಗಮನ ಹರಿಸಬೇಕು. ಸೇವೆಯೇ ನಮ್ಮೆಲ್ಲರ ಪ್ರಮುಖ ಅಜೆಂಡವಾಗಬೇಕು. ಸಹೋದರತೆಯ ಮನೋಭಾವನೆಯಿಂದ ಎಲ್ಲರೂ ಪರಸ್ಪರ ಸಂತೋಷ ಹಂಚಿಕೊಂಡು ಜೀವನ ಸಾಗಿಸುವಂತಾಗಬೇಕು ಎಂದರು.

Call us

Call us

ಲಯನ್ಸ್ ಅಧ್ಯಕ್ಷ ನರಸಿಂಹ ದೇವಾಡಿಗ ಅಧ್ಯಕ್ಷತೆವಹಿಸಿದ್ದರು. ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು. ಐದು ನೂತನ ಸದಸ್ಯರಿಗೆ ಲಯನ್ಸ್ ದ್ವಿತೀಯ ಗವರ್ನರ್ ನೇರಿ ಕರ್ನೇಲಿಯೋ ಪ್ರತಿಜ್ಞಾವಿಧಿ ಬೋಧಿಸಿದರು. ಲಯನ್ಸ್‌ನ ವಿವಿಧ ಸ್ಥರದ ಪದಾಧಿಕಾರಿಗಳಾದ ವಿಶ್ವನಾಥ ಶೆಟ್ಟಿ ಗಾಯಾಡಿ, ತಲ್ಲೂರು ಬಾಲಕೃಷ್ಣ ಶೆಟ್ಟಿ, ವಕ್ವಾಡಿ ಭಾಸ್ಕರ ಶೆಟ್ಟಿ, ಜಯಪ್ರಕಾಶ ಭಂಡಾರಿ, ಕೆದೂರು ಸೀತಾರಾಮ ಶೆಟ್ಟಿ, ಕುದ್ರುಕೋಡು ಜಗದೀಶ ಶೆಟ್ಟಿ, ಖಜಾಂಚಿ ಕೃಷ್ಣನಂದ ಕಾಮತ್ ಉಪಸ್ಥಿತರಿದ್ದರು. ಶಶಿಧರ ಶೆಟ್ಟಿ ನಿರೂಪಿಸಿ, ಕಾರ್ಯದರ್ಶಿ ರಾಜು ಬಿ. ದೇವಾಡಿಗ ವಂದಿಸಿದರು.

ಸೋಮವಾರ ಬೆಳಿಗ್ಗೆ ನಾವುಂದಕ್ಕೆ ಆಗಮಿಸಿದ ಲಯನ್ಸ್ ಜಿಲ್ಲಾ ಗವರ್ನರ್ ಹೆರ್ಗ ವಿಶ್ವನಾಥ ಶೆಟ್ಟಿ, ನಾವುಂದದ ಶ್ರೀ ಮಹಾಗಣಪತಿ ಮತ್ತು ಯಕ್ಷೇಶ್ವರಿ ದೇವಸ್ಥಾನಕ್ಕೆ ಭೇಟಿನೀಡಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ವಿವಿಧ ದಾನಿಗಳ ನೆರವಿನಿಂದ ಲಯನ್ಸ್ ಕ್ಲಬ್ ನಿರ್ಮಿಸಿದ ಅರೆಹೊಳೆ ಕ್ರಾಸ್ ಮತ್ತು ಕಿರಿಮಂಜೇಶ್ವರದಲ್ಲಿ ೧.೮೦ ಲಕ್ಷ ರೂ. ವೆಚ್ಚದ ತಂಗುದಾಣ, ೧.೩೫ ಲಕ್ಷ ರೂ. ವೆಚ್ಚದ ಮಸ್ಕಿ ತಂಗುದಾಣ, ನಾವುಂದದಲ್ಲಿ ೧.೩೫ ಲಕ್ಷ ರೂ. ವೆಚ್ಚದ ತಂಗುದಾಣ, ಸುಮಾರು ೨ಲಕ್ಷ ರೂ. ವೆಚ್ಚದ ದಿ. ಪುನಿತ್ ರಾಜ್‌ಕುಮಾರ್ ವೃತ್ತ ಇವುಗಳನ್ನು ಲೋಕಾರ್ಪಣೆಗೊಳಿಸಿದರು. ಸುಮಾರು ೫.೫ ಲಕ್ಷ ರೂ. ವೆಚ್ಚದಲ್ಲಿ ಅರೆಹೊಳೆಯಲ್ಲಿ ನಿರ್ಮಾಣಗೊಂಡ ನೂತನ ಗೃಹ ಉದ್ಘಾಟಿಸಿ ಇದರ ಫಲಾನುಭವಿ ಚಂದ್ರಕಲಾ ಇವರಿಗೆ ಮನೆಯ ಕೀಲಿಕೈ ಹಸ್ತಾಂತರಿಸಿದರು.

Leave a Reply

Your email address will not be published. Required fields are marked *

14 − 8 =