ನಾವುಂದ: ಲಾರಿ ಮುಖಾಮುಖಿ ಢಿಕ್ಕಿ. ಓರ್ವ ಚಾಲಕ ಮೃತ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು, ಮಾ.13: ಸಮೀಪದ ನಾವುಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಗಳೆರಡು ಮುಖಾಮುಖಿ ಡಿಕ್ಕಿಯಾಗಿ ಓರ್ವ ಚಾಲಕ ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ವರದಿಯಾಗಿದೆ. ಮೃತ ಚಾಲಕನನ್ನು ಕೇರಳದ ಕ್ಯಾಲಿಕಟ್ ನಿವಾಸಿ ಮೊಹಮ್ಮದ್ ಅಫ್ಜಲ್ (35) ಎಂದು ಗುರುತಿಸಲಾಗಿದೆ.

Call us

Call us

Call us

ಘಟನೆಯ ವಿವರ:
ಭಟ್ಕಳ ಕಡೆಯಿಂದ ಕುಂದಾಪುರ ಮಾರ್ಗವಾಗಿ ಸಾಗುತ್ತಿದ್ದ ಕಬಿಣ್ಣದ ಸರಳು ತಂಬಿದ್ದ ಲಾರಿ ಹಾಗೂ ಭಟ್ಕಳ ಮಾರ್ಗವಾಗಿ ಸಾಗುತ್ತಿದ್ದ ಔಷಧಿ ಸಾಗಾಟದ ಲಾರಿಯ ನಾವುಂದದ ವಿನಾಯಕ ಹೋಟೆಲ್ ಬಳಿಯ ರಾಷ್ಟೀಯ ಹೆದ್ದಾರಿಯಲ್ಲಿ ಮುಖಾಮುಖಿ ಢಿಕ್ಕಿಯಾಗಿತ್ತು. ಅಫಘಾತದ ತೀವ್ರತೆಗೆ ಎರಡೂ ಲಾರಿಗಳು ಸಂಪೂರ್ಣ ಜಖಂಗೊಂಡು, ಔಷಧಿ ತುಂಬಿದ ಲಾರಿಯ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಮತ್ತೊಂದು ಲಾರಿಯ ಚಾಲಕ, ಕ್ಲೀನರ್‌ಗಳು ಗಾಯಗೊಂಡಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ

ಸ್ವಲ್ಪ ಹೊತ್ತಿನ ಬಳಿಕ ವಿಷಯ ತಿಳಿದ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದರು. ಲಾರಿಯ ಮಧ್ಯೆ ಸಿಲುಕಿದ್ದ ಮೃತದೇಹವನ್ನು ಹೊರತೆಗೆಯಲು ಹರಸಾಹಸ ಪಡಬೇಕಾಯಿತು. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Navunda Accident (3) Navunda Accident (4) Navunda Accident (1)

Leave a Reply

Your email address will not be published. Required fields are marked *

5 − 2 =