ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ವಿಶ್ವ ಹಿಂದೂ ಪರಿಷತ್ ಬಜರಂಗದಳ ನಾವುಂದ ಘಟಕ ಇದರ ನೂತನ ಜವಾಬ್ದಾರಿ ಘೋಷಣೆ ಕಾರ್ಯಕ್ರಮ ಮತ್ತು ಭಾರತ್ ಮಾತಾ ಪೂಜನಾ ಕಾರ್ಯಕ್ರಮ ನಾವುಂದದ ಮಹಾಗಣಪತಿ ಮಾಂಗಲ್ಯ ಕಲ್ಯಾಣ ಮಂಟಪದಲ್ಲಿ ಜರಗಿತು,
ಉಡುಪಿ ಜಿಲ್ಲಾ ವಿಶ್ವ ಹಿಂದೂ ಪರಿಷತ್ ಉಪಾಧ್ಯಕ್ಷರಾದ ಶ್ರೀಧರ್ ಬಿಜೂರ್, ಜಿಲ್ಲಾ ಬಜರಂಗದಳ ಸಂಚಾಲಕರಾದ ಸುರೇಂದ್ರ ಕೋಟೇಶ್ವರ, ಜಿಲ್ಲಾ ಧರ್ಮ ಪ್ರಚಾರ ಪ್ರಮುಖ್ ಆದ ಗುರುಪ್ರಸಾದ್ ಶೆಟ್ಟಿ ಮತ್ತು ತಾಲೂಕು ಸುರಕ್ಷಾ ಪ್ರಮುಖ್ ಮಹೇಶ್ ಕಿರಿಮಂಜೇಶ್ವರ ಭಾಗಹಿಸಿದ್ದರು, ಸಭೆಯ ಅಧ್ಯಕ್ಷತೆಯನ್ನು ಅಶೋಕ್ ಆಚಾರ್ ವಹಿಸಿದ್ದರು
ಭಾರತ ಮಾತೆಯ ಭಾವ ಚಿತ್ರಕ್ಕೆ ಪುಷ್ಪಾಅರ್ಚನೆ ಮತ್ತು ದೀಪ ಬೆಳಗಿಸುವ ಮೂಲಕ ಭಾರತ್ ಮಾತಾ ಪೂಜನ ಕಾರ್ಯಕ್ರಮ ನೆರವೇರಿಸಲಾಯಿತು, ಸಭೆಯ ನಿರೂಪಣೆಯನ್ನು ತಾಲುಕು ಸಾಪ್ತಾಹಿಕ ಮಿಲನ್ ಪ್ರಮುಖ್ ಶರತ್ ಮೋವಾಡಿ ನಿರ್ವಹಿಸಿದರು, ಸ್ವಾಗತವನ್ನು ತಾಲುಕು ಸಂಪರ್ಕ ಪ್ರಮುಖ್ ಸತೀಶ್ ನಾವುಂದ ನೆರವೇರಿಸಿದರು,
ಹೊಸ ಜವಾಬ್ಧಾರಿಯನ್ನು ತಾಲುಕು ಕಾರ್ಯದರ್ಶಿ ಪ್ರಶಾಂತ್ ಬೈಂದೂರು ಅವರು ಘೋಷಿಸಿದರು, ವಿಶ್ವ ಹಿಂದೂ ಪರಿಷತ್ ನಾವುಂದ ಘಟಕದ ಅಧ್ಯಕ್ಷರಾಗಿ ಮುತ್ತ ಎಂ. ಅವರನ್ನು, ಕಾರ್ಯದರ್ಶಿಯಾಗಿ ಅಜಿತ್, ಬಜರಂಗದಳ ಸಂಚಾಲಕರಾಗಿ ಜಗದೀಶ್, ಸೇವಾ ಪ್ರಮುಖ್ ಆಗಿ ಕೇಶವ ಎಂ ಅವರನ್ನು ಆಯ್ಕೆ ಮಾಡಲಾಯಿತು, ಸಭೆಯು ಓಂಕಾರದೊಂದಿಗೆ ಮುಕ್ತಾಯ ಗೊಂಡಿತು.