ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇತ್ತೀಚೆಗೆ ಜರಗಿದ ನಾವುಂದ ಶ್ರೀಗುರು ನಿತ್ಯಾನಂದ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಆಡಳಿತ ಮಂಡಳಿ ಪದಾಧಿಕಾರಿಗಳ ಚುನಾವಣೆಯಲ್ಲಿ ಎಲ್ಲಾ 13 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿರುತ್ತದೆ. ಜೂನ್ 24ರಂದು ಕರೆದ ನೂತನ ಆಡಳಿತ ಸಮಿತಿಯ ಸಭೆಯಲ್ಲಿ ಅಧ್ಯಕ್ಷರಾಗಿ ಡಾ. ಎನ್. ಕೆ. ಬಿಲ್ಲವ ಮತ್ತು ಉಪಾಧ್ಯಕ್ಷರಾಗಿ ರಾಜೀವ ಎಂ. ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ಮಂಜು ಪೂಜಾರಿ, ಶೇಖರ ಎಂ. ಪೂಜಾರಿ, ಸಾವಿತ್ರಿ ಪೂಜಾರಿ, ಸುರೇಶ ಕೆ. ಪೂಜಾರಿ, ಶುಭದಾ ಎನ್. ಬಿಲ್ಲವ, ಸುಧಾಕರ ಪಿ. ಪೂಜಾರಿ, ರೇವತಿ ನಾಯ್ಕ್, ಈಶ್ವರ ಖಾರ್ವಿ, ಸುಜನ ಆರ್. ಬಿಲ್ಲವ, ವೆಂಕಟೇಶ ಗಾಣಿಗ, ಯೋಗೀಶ ಕಾರಂತ ಅವರು ನಿರ್ದೇಶಕರಾಗಿ ನೂತನ ಆಡಳಿತ ಮಂಡಳಿಗೆ ಅವಿರೋಧವಾಗಿ ಆಯ್ಕೆಗೊಂಡಿರುತ್ತಾರೆ. ಲೆಕ್ಕಪರಿಶೋಧನಾ ಉಪನಿರ್ದೇಶಕರ ಕಛೇರಿಯ ನಿರ್ವಾಚನಾಧಿಕಾರಿ ಕೆ. ಎಸ್. ಜಗದೀಶ್ ಆಯ್ಕೆಯನ್ನು ಘೋಷಿಸಿರುತ್ತಾರೆ. ಮುಖ್ಯಕಾರ್ಯನಿರ್ವಹಣಾಧಿಕಾರಿ ತಿಮ್ಮಪ್ಪ ಪೂಜಾರಿ ಉಪಸ್ಥಿತರಿದ್ದರು.