ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದಿಂದ ವಿವಿಧ ಸೌಲಭ್ಯಗಳು

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: 2020-21ನೇ ಸಾಲಿಗೆ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದಿಂದ ಹಿಂದುಳಿದ ವರ್ಗಗಳ ಪ್ರವರ್ಗ-(1)ರ ಕೋಲಿ, ಗಂಗಾಮತ, ಬೆಸ್ತ, ಕಬ್ಬಲಿಗ, ಮೊಗವೀರ, ಅಂಬಿಗ/ಅಂಬಿ, ಬರ್ಕಿ/ಬಾರಿಕ, ಬೆಸ್ತರ್, ಭೋಯಿ, ರಾಜಬೋಯಿ, ಬುಂಡೆ-ಬೆಸ್ತರ್, ದಾಲ್ಚಿ, ದಾವತ್, ಗಬಿಟ್, ಗಲಾಡಕೊಂಕಣಿ, ಗಂಗೆಮಕ್ಕಳು, ಗಂಗಾಕುಲ, ಗಂಗಾಮತಸ್ಥ, ಗಂಗಾಪುತ್ರ, ಗೌರಿಮತ, ಬುಂಡೆಬೆಸ್ತ/ಗುAಡೆಬೆಸ್ತ, ಹರಿಕಂತ್ರ, ಜಲಗಾರ, ಕಬ್ಬೇರ/ಕಬ್ಬೇರ್, ಕಬ್ಬಿಲಿ, ಕಹರ್, ಖಾರ್ವಿ/ಕೊಂಕಣಿಖಾರ್ವಿ, ಕೋಳಿಮಹದೇವ್, ಮಡ್ಡರ್,ಮೀನಗಾರ್, ಮಗೇರ್, ಮುಕ್ಕವಾನ್, ಪರಿವಾರ, ಸಿವಿಯರ್, ಸುಣಗಾರ್, ಸುಣಗಾರ, ತೊರೆಯ ಜಾತಿಗೆ ಸೇರಿದವರಾಗಿರಬೇಕು.

Call us

ಸರ್ಕಾರದ/ಯಾವುದಾದರೂ ನಿಗಮಗಳ ಯಾವುದಾದರೂ ಯೋಜನೆಯಡಿಯಲ್ಲಿ ಕುಟುಂಬದ ಯಾರೇ ಆಗಲಿ ಈಗಾಗಲೇ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಪಡೆಯಲು ಅರ್ಹರಿರುವುದಿಲ್ಲ. ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಒಂದು ಕುಟುಂಬದಲ್ಲಿ ಒಬ್ಬರಿಗಿಂತ ಹೆಚ್ಚಿನವರಿಗೆ ಸೌಲಭ್ಯ ಒದಗಿಸಲಾಗುವುದಿಲ್ಲ.

Call us

ನಿಗಮದ ಯೋಜನೆಗಳ ವಿವರ: 1. ಬ್ಯಾಂಕ್ಗಳ ಸಹಯೋಗದೊಂದಿಗೆ ಸ್ವಯಂ ಉದ್ಯೋಗ ಸಾಲ ಯೋಜನೆ, 2. ಸ್ವಯಂ ಉದ್ಯೋಗ ಸಾಲ ಯೋಜನೆ, 3. ಸ್ವಸಹಾಯ ಗುಂಪುಗಳ ಮೂಲಕ ಸಾಲ ಮತ್ತು ಸಹಾಯಧನ, 4. ಅರಿವು ಶೈಕ್ಷಣಿಕ ಸಾಲ ಯೋಜನೆ, 5. ಗಂಗಾಕಲ್ಯಾಣ ನೀರಾವರಿ ಯೋಜನೆ, 6. ಕೌಶಲ್ಯಾಭಿವೃಧ್ಧಿ/ಉದ್ಯಮಶೀಲತಾ ತರಬೇತಿ ಗಳಲ್ಲಿ ಸಹಾಯಧನ ಹಾಗೂ ಸಾಲ ಸೌಲಭ್ಯ ಒದಗಿಸಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಈ ಯೋಜನೆಯಲ್ಲಿ ಸೌಲಭ್ಯ ಪಡೆಯಲು ಇಚ್ಚಿಸುವವರು ಉಚಿತವಾಗಿ ಅರ್ಜಿ ನಮೂನೆಯನ್ನು ಜಿಲ್ಲಾ ಕಛೇರಿಯಲ್ಲಿ ಅಥವಾ ನಿಗಮದ ವೆಬ್ಸೈಟ್ https://ambigaradevelopment.karnataka.gov.in ನಲ್ಲಿ ಅರ್ಜಿಯೊಂದಿಗೆ ಜಾತಿ ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಫೋಟೋ ಮತ್ತು ಇತರೆ ದಾಖಾಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಅಥವಾ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದೇ ಇದ್ದಲ್ಲಿ ಭರ್ತಿ ಮಾಡಿದ ಅರ್ಜಿಯನ್ನು ದಾಖಾಲಾತಿಗಳೊಂದಿಗೆ ಜಿಲ್ಲಾ ವ್ಯವಸ್ಥಾಪಕರು, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ (ನಿ), ಉಡುಪಿ ಜಿಲ್ಲಾ ಕಛೇರಿಗೆ ಆಗಸ್ಟ್ 12 ಅಪರಾಹ್ನ 4.30 ಗಂಟೆ ಒಳಗಾಗಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ನಿಗಮದ ದೂರವಾಣಿ ಸಂ.0820-2574882 ಅಥವಾ ವೆಬ್ ಸೈಟ್ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

four × five =