ನಿಧನ : ವಿ. ಪರಮೇಶ್ವರ ನಾವಡ

ಕುಂದಾಪುರ: ನಾವಡರಕೇರಿ ನಿವಾಸಿ ವಿ. ಪರಮೇಶ್ವರ ನಾವಡ(80) ಸ್ವಗೃಹದಲ್ಲಿ ಅ.29ರಂದು ನಿಧನರಾದರು. ಮೃತರು ಕೃಷಿಕರಾಗಿದ್ದು ಪರಿಸರದಲ್ಲಿ ಪೌರೋಹಿತ್ಯವನ್ನು ನಡೆಸಿಕೊಂಡು ಜನಾನುರಾಗಿಯಾಗಿದ್ದರು. ಮೃತರು ಪತ್ನಿ, ಗೆಲಾಕ್ಸಿ ಸ್ಪೋರ್ಟ್ಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸದಾನಂದ ನಾವಡ ಸೇರಿದಂತೆ ನಾಲ್ವರು ಪುತ್ರರು, ಇರ್ವರು ಪುತ್ರಿಯರನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಕರ್ನಾಟಕ ಬಿಜೆಪಿ ಮೀನುಗಾರರ ಪ್ರಕೋಷ್ಠದ ರಾಜ್ಯ ಸಂಚಾಲಕ ಬಿ. ಕಿಶೋರ್‌ಕುಮಾರ್, ಭಾರತೀಯ ಜೇಸಿಐನ ವಲಯದ ಪದಾಧಿಕಾರಿಗಳು, ಹತ್ತು ಹಲವು ಸಂಘ ಸಂಸ್ಥೆ, ಸಂಘಟನೆಯ ಪ್ರಮುಖರು ಮೃತರ ಅಂತಿಮ ದರ್ಶನ ಪಡೆದರು.

Leave a Reply

Your email address will not be published. Required fields are marked *

eight − 1 =