ನಿರ್ಮಲ ದೇಗುಲ: ಡಾ. ಬಿ. ಬಿ. ಹೆಗ್ಡೆ ಕಾಲೇಜಿನಿಂದ ಸ್ವಚ್ಛತಾ ಕಾರ್ಯ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಡಾ. ಬಿ. ಬಿ. ಹೆಗ್ಡೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ಇತಿಹಾಸ ಪ್ರಸಿದ್ಧ ಬಸ್ರೂರಿನ ಮೂಡ್ಕೇರಿಯ ನಾಥ ಪರಂಪರೆಯ ಪ್ರಾಚೀನ ಶ್ರೀ ಕಾಲಭೈರವ ದೇವಸ್ಥಾನದಲ್ಲಿ ‘ನಿರ್ಮಲ ದೇಗುಲ’ ಕಾರ್ಯಕ್ರಮದಡಿ ಸ್ವಚ್ಛತಾ ಕಾರ್ಯ ನಡೆಯಿತು.

ಕಾಲೇಜಿನ ಉಪ ಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ, ಸಾರ್ವಜನಿಕ ಸಂಪರ್ಕಾಧಿಕಾರಿ ನಾಗರಾಜ್ ಶೆಟ್ಟಿ ನೈಕಂಬ್ಳಿ, ನಿಕಟಪೂರ್ವ ಎನ್.ಎಸ್.ಎಸ್ ಯೋಜನಾಧಿಕಾರಿ ಸತೀಶ್ ಶೆಟ್ಟಿ, ಉಪನ್ಯಾಸಕರಾದ ಸುಕುಮಾರ ಶೆಟ್ಟಿ, ಕಮಲಶಿಲೆ, ರಸಿಕ್ ಶೆಟ್ಟಿ, ಹಾಗೂ ದೇವಾಲಯದ ಅರ್ಚಕರಾದ ದಯಾನಂದ ಜೋಗಿ ಮತ್ತು ಕುಟುಂಬಸ್ಥರು, ಸ್ವರಾಜ್ಯ 75 ಕಾರ್ಯಕ್ರಮದ ಸಂಚಾಲಕ ಪ್ರದೀಪ್ ಕುಮಾರ್ ಬಸ್ರೂರು ಮತ್ತು ತಂಡದ ಸದಸ್ಯರಾಸ ಸಂತೋಷ ನೇರಳಕಟ್ಟೆ, ಸಂತೋಷ ಬಳ್ಳೂರು, ಭಾರ್ಗವ ಜೋಗಿ, ಸತೀಶ್ ಗುಂಡ್ಮಿ, ಭರತ್ ಗುಡಿಗಾರ್, ಪ್ರಶಾಂತ್ ಖಾರ್ವಿ, ರಾಘವೇಂದ್ರ ಬಳ್ಳೂರು, ಹಿರಿಯರಾದ ನಾಗಪ್ಪ ಬಿಲ್ಲವ, ಸುರೇಶ್ ಬಳ್ಕೂರು ಶಿಬಿರದಲ್ಲಿ ಭಾಗಿಯಾಗಿ ಕಾಲೇಜಿನ ಎನ್.ಎಸ್.ಎಸ್ ಘಟಕದ ಸ್ವಯಂ ಸೇವಕರ ಜೊತೆ ಸ್ವಚ್ಚತಾ ಕಾರ್ಯದಲ್ಲಿ ಭಾಗವಹಿಸಿದ್ದರು.

ಎನ್.ಎಸ್.ಎಸ್ ವಿದ್ಯಾರ್ಥಿ ನಾಯಕಿ ಸುಷ್ಮಾ ಶೆಟ್ಟಿ, ಸ್ವಯಂಸೇವಕರು ಹಾಗೂ ಹಿರಿಯ ಎನ್.ಎಸ್.ಎಸ್ ಸ್ವಯಂಸೇವಕರು ದೇವಾಲಯದ ಸ್ವಚ್ಚತಾ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಎನ್.ಎಸ್.ಎಸ್. ಸಹಯೋಜನಾಧಿಕಾರಿ ರೇಷ್ಮಾ ಶೆಟ್ಟಿ ಸ್ವಾಗತಿಸಿ, ಯೋಜನಾಧಿಕಾರಿ ಪ್ರವೀಣ್ ಗಂಗೊಳ್ಳಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *

20 + 6 =