ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಪಿ. ಗಣಪತಿ ಭಟ್ (61ವರ್ಷ) ಅವರು ಭಾನುವಾರ ನಿಧನರಾಗಿದ್ದಾರೆ.
ದಕ್ಷಿಣಕನ್ನಡದ ಪುತ್ತೂರು ತಾಲೂಕಿನ ಪಾದೆಕಲ್ಲಿನವರಾದ ಪಿ. ಗಣಪತಿ ಭಟ್ ಉಡುಪಿಯ ಮಹಾತ್ಮಗಾಂಧಿ ಕಾಲೇಜು, ಕಲ್ಯಾಣಪುರದ ಮಿಲಾಗ್ರೀಸ್ ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದ ಅವರು, ಮೂಲ್ಕಿಯ ವಿಜಯ ಕಾಲೇಜಿನಲ್ಲಿ ಖಾಯಂ ಉಪನ್ಯಾಸಕರಾಗಿ ನೇಮಕಗೊಂಡರು. ಬಳಿಕ ಕುಂದಾಪುರದ ಭಂಡಾರ್ಕಾರ‍್ಸ್ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಎಂ.ಫಿಲ್ ಪದವಿಯನ್ನು ಮುಗಿಸಿದ್ದರು.
ಅವರು ಪುತ್ರ ನವೀನ, ಮಗಳು ಶ್ರೀರಕ್ಷಾ, ಪತ್ನಿ ಮತ್ತು ಕುಟುಂಬವನ್ನು ಅಗಲಿದ್ದಾರೆ. ಅವರು ಪಾದೆಕಲ್ಲು ವಿಷ್ಣುಭಟ್ ಅವರ ಸಹೋದರಾಗಿದ್ದರು.