ನಿವೃತ್ತ ಬ್ಯಾಂಕ್ ಉದ್ಯೋಗಿ ಉಪ್ಪುಂದ ಕೇಶವ ಪ್ರಭು ನಿಧನ

Call us

news Nayak Keshav Nidhana

Call us

Call us

ಬೈಂದೂರು: ಇಲ್ಲಿಗೆ ಸಮೀಪದ ಉಪ್ಪುಂದದಲ್ಲಿ ನಿವೃತ್ತ ಬ್ಯಾಂಕ್ ಉದ್ಯೋಗಿ ಯು. ಕೇಶವ ಪ್ರಭು (65) ತಮ್ಮ ಸ್ವಗೃಹದಲ್ಲಿ ನಿಧನರಾದ ಘಟನೆ ವರದಿಯಾಗಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತರಾಗಿದ್ದ ಕೇಶವ ಪ್ರಭ್ರು ತಮ್ಮ ನಿವೃತ್ತಿಯ ನಂತರ ಉಪ್ಪುಂದ ಗ್ರಾಮವಿಕಾಸ ಸಮಿತಿಯ ಗೌರವಾಧ್ಯಕ್ಷರಾಗಿ ಮತ್ತು ಸೇವಾ ಸಂಗಮ ಶಿಶುಮಂದಿರದ ವ್ಯವಸ್ಥಾಪಕರಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಉಪ್ಪುಂದ ಶ್ರೀ ಮೂಡುಗಣಪತಿ ಶಿಶುಮಂದಿರದ ನೂತನ ಕಟ್ಟಡ ನಿರ್ಮಾಣಕ್ಕೆ ಸ್ಥಳದಾನ ಮಾಡಿದ್ದರು. ಕಳೆದ ಒಂದು ವಾರದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಇವರು ಆತ್ಮಹತ್ಯೆಗೆ ಶರಣಾಗಿದ್ದಾರೆನ್ನಲಾಗಿದೆ. ಮೃತರು ಪತ್ನಿ, ಪುತ್ರರನ್ನು ಅಗಲಿದ್ದಾರೆ.

Call us

Call us

Leave a Reply

Your email address will not be published. Required fields are marked *

2 × 5 =