ನಿವೃತ್ತ ಮುಖ್ಯೋಪಧ್ಯಾಯ ವೈ. ಚಂದ್ರಶೇಖರ ಶೆಟ್ಟಿ ನಿಧನ

Click Here

Call us

Call us

Death-news

Call us

Call us

Click Here

Visit Now

Y Chandrashekhara shettyಕುಂದಾಪುರ: ತಾಲೂಕಿನ ಉಳ್ಳೂರು11ನೇ ಯರುಕೋಣೆ ಭಂಡಾರರ ಕುಟುಂಬದವರಾದ ವೈ. ಚಂದ್ರಶೇಖರ ಶೆಟ್ಟಿ (80) ಇಂದು ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

Click here

Click Here

Call us

Call us

ನಿವೃತ್ತ ಮುಖ್ಯೋಪಧ್ಯಾಯರು, ಪ್ರಗತಿಪರ ಕೃಷಿಕರೂ ಆದ ಚಂದ್ರಶೇಖರ ಶೆಟ್ಟಿಯವರು ಧಾರ್ಮಿಕ, ಸಾಮಾಜಿಕ, ರಾಜಕೀಯ, ಸಹಕಾರಿ ಕ್ಷೇತ್ರಗಳಲ್ಲಿ ಹಲವಾರು ವರ್ಷಗಳ ಕಾಲ ತಮ್ಮನ್ನು ತೊಡಗಿಸಿಕೊಂಡವರು.

ಸರಕಾರಿ ಪ್ರೌಢಶಾಲೆ ಖಂಬದಕೋಣೆ, ಬೈಂದೂರು, ಉಪ್ಪುಂದಲ್ಲಿ ಮುಖ್ಯೋಪಧ್ಯಾಯರಾಗಿ ಸೇವೆಸಲ್ಲಿಸಿದ್ದ ಅವರು, ಬಳಿಕ ಹೇರೂರು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ, ಖಂಬದಕೋಣೆ ಸಿ.ಎ ಬ್ಯಾಂಕ್‌ನ ಅಧ್ಯಕ್ಷರಾಗಿ, ಕುಂದಾಪುರ ಕೃಷಿಕ ಸಮಾಜದ ಅಧ್ಯಕ್ಷರಾಗಿ, ಜನತಾದಳ ಬೈಂದೂರು ಬ್ಲಾಕ್ ಅಧ್ಯಕ್ಷರಾಗಿ, ಮಣಿಪಾಲ ಕೆನರಾ ಮಿಲ್ಕ್ ಯೂನಿಯನ್ ನಿರ್ದೇಶಕರಾಗಿ, ಮೇಕೋಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಧರ್ಮದರ್ಶಿಯಾಗಿ, ಮೇಕೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಥಾಪಕ ಅಧ್ಯಕ್ಷರಾಗಿ ದುಡಿದಿದ್ದರು.

ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಸೇರಿದಂತೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿರುವ ಚಂದ್ರಶೇಖರ ಶೆಟ್ಟಿ ಅವರ ನಿಧನಕ್ಕೆ, ಅವರ ಅಪಾರ ಬಂಧು-ಮಿತ್ರರು ಹಾಗೂ ಶಿಷ್ಯವೃಂದ ಸಂತಾಪ ಸೂಚಿಸಿದ್ದಾರೆ. (ಕುಂದಾಪ್ರ ಡಾಟ್ ಕಾಂ ಸುದ್ದಿ) Link to share – http://kundapraa.com/?p=5444

Leave a Reply

Your email address will not be published. Required fields are marked *

5 × one =