ನಿವೃತ್ತ ಯೋಧ ಮೇಜರ್ ನಾರಾಯಣ ನಿಧನ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಭಾರತದ ಪರ ಪ್ರಮುಖ ಮೂರು ಯುದ್ಧಗಳಲ್ಲಿ ಹೋರಾಟ ನಡೆಸಿದ ಹಾಗೂ ಪ್ರಥಮ ರಾಷ್ಟ್ರಧ್ಯಕ್ಷ ಬಾಬು ರಾಜೇಂದ್ರ ಪ್ರಸಾದ್ ಅಂಗ ರಕ್ಷಕರಾಗಿ ಸೇವೆ ಸಲ್ಲಿಸಿದ್ದ ನಿವೃತ್ತ ಯೋಧ ಸಾಸ್ತಾನ ನಿವಾಸಿ ಮೇಜರ್ ನಾರಾಯಣ(೮೫)ಗುರುವಾರದಂದು ಅಸೌಖ್ಯದಿಂದ ನಿಧನರಾಗಿದ್ದಾರೆ.

Call us

Call us

Call us

ಮೃತರು ಪತ್ನಿ ಮತ್ತು ಇರ್ವರು ಪುತ್ರಿಯರನ್ನು ಅಗಲಿದ್ದಾರೆ. ೧೯೫೨ರಲ್ಲಿ ಸೇನೆಗೆ ಸೇರ್ಪಡೆಗೊಂಡು ೧೯೬೨ ರ ಭಾರತ ಚೀನ ಯುದ್ಧ, ೧೯೭೧ ರ ಭಾರತ ಪಾಕಿಸ್ಥಾನ ಯುದ್ಧ ಹಾಗೂ ಭಾರತ ಬಾಂಗ್ಲಾ ಯುದ್ಧದಲ್ಲಿ ಹೋರಾಟ ನೆಡೆಸಿ ವೀರ ಪದಕ ಫಡೆದಿದ್ದರು ಮತ್ತು ನಾಗಲ್ಯಾಂಡ್ ಬಂಡುಕೋರರನ್ನು ಹಿಮ್ಮೆಟ್ಟಿಸಿದ ತಂಡದಲ್ಲಿ ಪ್ರಮುಖರಾಗಿದ್ದು ಕಿಂಗ್ ಆಫ್ ನಾಗ ಹಿಲ್ಸ್ ಬಿರುದು ಪಡೆದಿದ್ದರು. ಸೇನೆಯಲ್ಲಿರುವಾಗ ಪ್ರಥಮ ರಾಷ್ಟ್ರಾಧ್ಯಕ್ಷ ಬಾಬು ರಾಜೇಂದ್ರ ಪ್ರಸಾದ್ ಅವರ ಅಂಗರಕ್ಷಕರಾಗಿ ಸೇವೆ ಸಲ್ಲಿಸಿದ್ದರು. ೧೯೭೨ ರಲ್ಲಿ ಸೇನೆಯಿಂದ ನಿವೃತ್ತಿ ಪಡೆದು ಮಾಜಿ ಸೈನಿಕರ ಸಂಘದ ಪದಾಧಿಕಾರಿಯಾಗಿ, ಹವ್ಯಾಸಿ ಲೇಖಕರಾಗಿ ನಿವೃತ್ತ ಜೀವನ ನಡೆಸುತ್ತಿದ್ದರು.ಪ್ರಶಸ್ತಿ, ಪುರಸ್ಕಾರಗಳಿಗೆ ಆಸೆ ಪಡದ ಅವರನ್ನು ಸಾಸ್ತಾನದಲ್ಲಿ ಯುವಬ್ರಿಗೇಡ್ ವತಿಯಿಂದ ನಡೆದ ನಾನು ಮತ್ತು ನನ್ನ ಭಾರತ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಗಿತ್ತು.

Leave a Reply

Your email address will not be published. Required fields are marked *

four × two =