ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನಾಡ ಗ್ರಾಮದ ಪಡುಕೋಣೆಯ ನಿವೃತ್ತ ಶಿಕ್ಷಕಿ ಪಾವ್ಲೀನ್ ಫೆನಾಂಡೀಸ್ (82) ಮಂಗಳವಾರ ಮನೆಯಲ್ಲಿ ನಿಧನರಾದರು. ಶಿರೂರು, ನಾವುಂದ ಮತ್ತು ಪಡುಕೋಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಒಟ್ಟು ೩೪ ವರ್ಷ ಸುದೀರ್ಘ ಸೇವೆ ಸಲ್ಲಿಸಿ, ವಿದ್ಯಾರ್ಥಿಗಳ ಪ್ರೀತಿಯ ಶಿಕ್ಷಕಿ ಎನಿಸಿದ್ದರು. ಅವಿವಾಹಿತರಾಗಿದ್ದ ಅವರು ತಮ್ಮ ಹಲವು ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಸಹಾಯ ಮಾಡಿದ್ದರು. ಪಡುಕೋಣೆ ಚರ್ಚ್‌ನ ಪಾಲನಾ ಮಂಡಳಿಯ ಸದಸ್ಯರಾಗಿ, ಬಡವರ ಆರೋಗ್ಯ, ಶಿಕ್ಷಣದ ಬಗೆಗೆ ನೆರವಾಗುವ ಸ್ಥಳೀಯ ಸಂಘಟನೆ ಎಸ್.ವಿ.ಪಿಯ ಕಾರ್ಯದರ್ಶಿಯಾಗಿ ದೀರ್ಘಕಾಲ ದುಡಿದಿದ್ದರು.
ನಿವೃತ್ತ ಶಿಕ್ಷಕಿ ಪಾವ್ಲೀನ್ ಫೆರ್ನಾಂಡೀಸ್ ನಿಧನ
