ನಿಸಾರ್ ಕಾವ್ಯದಲ್ಲಿ ಸಾಮಾಜಿಕ ಸಮನ್ವಯತೆಯ ಸೂತ್ರವಿದೆ: ಡಾ.ಪಾರ್ವತಿ ಐತಾಳ್

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಾಮಾಜಿಕ ಬದುಕಿನ ಸಮನ್ವಯತೆಯ ಸೂತ್ರವನ್ನು ತಮ್ಮ ಕಾವ್ಯದ ಮೂಲಕ ಸಾಧಿಸಿ ತೋರಿಸಿದವರು ಕವಿ ನಿಸಾರ್ ಅಹಮ್ಮದ್ ಅವರು. ಜೀವನದಲ್ಲಿ ಕಾಣುವ ಒಳಿತು-ಕೆಡುಕುಗಳನ್ನು ತಮ್ಮದೇ ಆದ ಕಾವ್ಯಭಾಷೆಯ ಮೂಲP, ಮಾಂತ್ರಿಕ ಶಕ್ತಿಯುಳ್ಳ ಸುಂದರ ಪದಪುಂಜಗಳ ಮೂಲಕ, ಪ್ರಾಸಾನುಪ್ರಾಸಯುಕ್ತ ಪದವಿನ್ಯಾಸದ ಮೂಲಕ, ಹೊಸ ಹೊಸ ಪದಗಳನ್ನು ಟಂಕಿಸಿ ಕನ್ನಡ ಸಾಹಿತ್ಯಕ್ಕೆ ಕೊಡುವ ಮೂಲಕ ಒದಗಿಸಿ ಕೊಟ್ಟವರು ಎಂದು ಡಾ. ಪಾರ್ವತಿ ಜಿ.ಐತಾಳ ಹೇಳಿದರು.

Call us

Call us

Click Here

Visit Now

ಅವರು ಹೈದರಾಬಾದಿನ ಕರ್ನಾಟಕ ಸಾಹಿತ್ಯ ಮಂದಿರದಲಿ ನಡೆದ ನಿಸಾರ್ ಅಹಮದ್-ಬದುಕು ಬರಹದ ಕುರಿತು ನಡೆದ ಒಂದು ದಿನದ ವಿಚಾರ ಸಂಕಿರಣzಲ್ಲಿ ’ನಿಸಾರ್ ಕಾವ್ಯದಲಿ ವ್ಯಕ್ತವಾಗುವ ಜೀವನ ದರ್ಶನ’ ಎಂಬ ವಿಷಯದ ಕುರಿತು ಮಾತನಾಡಿದರು.

Click here

Click Here

Call us

Call us

ಮನುಷ್ಯನ ಹುಟ್ಟಿನಿಂದ ಸಾವಿನವರೆಗೂ ಅವನ ಬದುಕು ಒಳಗೊಳ್ಳುವ ನೂರಾರು ಸನ್ನಿವೇಶಗಳನ್ನು ನೆಪವಾಗಿಸಿಕೊಂಡು ಅಲ್ಲಿ ಕಾಣುವ ಸೌಖ್ಯ ಸೌಂದರ್ಯಗಳಿಗೆ, ಲೋ-ದೋಷಗಳಿಗೆ ಪ್ರತಿಮೆ ರೂಪಕಗಳ ಮೂಲಕ ಸಮಾಂತರಗಳನ್ನು ಸೃಷ್ಟಿಸಿ ಜೀವನದ ಸಮಗ್ರ ದರ್ಶನವನ್ನು ನಿಸಾರರು ತಮ್ಮ ಕವಿತೆಗಳಲ್ಲಿ ಒಂದಿಲ್ಲೊಂದು ರೀತಿಯಲ್ಲಿ ನೆಯ್ದು ಕೊಟ್ಟಿದ್ದಾರೆ. ಪ್ರೀತಿ-ವಂಚನೆ, ಸ್ನೇಹ-ಅಸೂಯೆ, ಪ್ರಾಮಾಣಿಕತೆ-ಬೂಟಾಟಿಕೆ, ಶೋಷಣೆ-ಪ್ರೋತ್ಸಾಹ, ನ್ಯಾಯ-ಅನ್ಯಾಯಗಳ ದ್ವಂದ್ವಗಳು ಅವರ ಕವಿತೆಗಳಲ್ಲಿ ಸದಾ ಅನುರಣಿಸುತ್ತದೆ. ವೋದಯಮತ್ತು ನವ್ಯ ಶೈಲಿಗಳಲ್ಲಿ ಕಾವ್ಯ ನಿರ್ಮಿತಿ ನಡೆಸಿದ ನಿಸಾgರು ತಮ್ಮ ಸುತ್ತಲ ಜಗತ್ತನ್ನು ಬಗೆದು ಶೋಧಿಸಿ, ಒಂದು ಬೃಹತ್ ಕಾವ್ಯ ಲೋಕವನ್ನು ಸೃಷ್ಟಿಸಿದ್ದಾರೆ. ಅವರ ಕಾವ್ಯದಲ್ಲಿ ವ್ಯಕ್ತವಾಗುವ ಜೀವನ ದರ್ಶನದ ಹರಹು ಬಹಳ ದೊಡ್ಡದು ಎಂದರು.

ಸಾಹಿತಿ ಡಾ.ಸಂಧ್ಯಾ ರೆಡ್ಡಿ ಮತ್ತು ಬೈರಮಂಗಲ ರಾಮೇಗೌಡರು ಉಪಸ್ಥಿತರಿದ್ದು ನಿಸಾರ್ ಕಾವ್ಯದ ವಿಭಿನ್ನ ಮುಖಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು. ಕನ್ನಡದ ಹಿರಿಯ ಕವಿ ಪ್ರೊ. ಕೆ.ವಿ.ತಿರುಮಲೇಶ್ ಗೋಷ್ಠಿಯ ಅಧ್ಯಕ್ಷ ಸ್ಥಾನದಿಂದ ನಿಸಾರ್ ಜೊತೆಗಿನ ತಮ್ಮ ಅನುಭವಗಳನ್ನು ಹಂಚಿಕೊಂಡರು. ಉಪನ್ಯಾಸ ನೀಡಿದವರಿಗೆ ಸಂಘಟನೆಯ ಪದಾಧಿಕಾರಿಗಳು ಒಟ್ಟುಸೇರಿ ಶಾಲು ಫಲಕಗಳನ್ನು ನೀಡಿ ಸಮ್ಮಾನಿಸಿದರು.ಕರ್ನಾಟಕ ಸಾಹಿತ್ಯ ಮಂದಿರದ ಅಧ್ಯಕ್ಷರಾದ ವಿಟ್ಠಲ್ ಜೋಷಿಯವರು ವಂದಿಸಸಸಿದರು.

Leave a Reply

Your email address will not be published. Required fields are marked *

four + ten =