ನೀಟ್ ಪರೀಕ್ಷೆಯಲ್ಲಿ ಕುಂದಾಪುರ ವೆಂಕಟರಮಣ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಸಾಧನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಲಭ್ಯವಿರುವ ನೀಟ್ ಕೋಚಿಂಗ್‌ನ ಸದುಪಯೋಗವನ್ನು ಪಡೆದುಕೊಂಡು ಸೆ.20 ರಾಷ್ಟ್ರಮಟ್ಟದಲ್ಲಿ ಜರುಗಿದ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಸಾಧನೆ ಮೆರೆದ ವಿದ್ಯಾರ್ಥಿಗಳನ್ನು ಶ್ರೀ ವೆಂಕಟರಮಣ ದೇವ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್‌ನ ಆಡಳಿತ ಮಂಡಳಿ, ಕಾಲೇಜು ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದ ಅಭಿನಂದಿಸಿದ್ದಾರೆ.

ಅಂಕಗಳ ವಿವರ:
ಭುವನ್ -525
ಸೋಹನ್ ಕುಮಾರ್ ಶೆಟ್ಟಿ – 443
ಅಪೇಕ್ಷಾ – 437
ವಿಜೇತಾ ಎಮ್ – 395
ಶಿಲ್ಪಾ ಎಸ್ ಪಿ – 359
ಮೊಹಮ್ಮದ್ ಅನ್ಫಾಲ್ – 316
ರೋಶನ್ – 330

Leave a Reply

Your email address will not be published. Required fields are marked *

eleven − one =