ನೀರಿನ ಬವಣೆ ತಗ್ಗಿಸಲು ಚಿಂತನೆ ಅಗತ್ಯ: ರಾಜಶೇಖರ ವಿ. ಪಾಟೀಲ್

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಶಂಕರನಾರಾಯಣ: ತಾಲೂಕು ಕಾನೂನು ಸೇವಾ ಸಮಿತಿ ಕುಂದಾಪುರ, ಕುಂದಾಪುರ ಬಾರ್ ಅಸೋಸಿಯೇಷನ್ (ರಿ.) ಕುಂದಾಪುರ, ಅಭಿಯೋಗ ಇಲಾಖೆ ಕುಂದಾಪುರ ಮತ್ತು ಸರಕಾರಿ ಪ್ರಥಮ ದರ್ಜೇ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ ಶಂಕರನಾರಾಯಣ ಇವರ ಸಂಯಕ್ತ ಆಶ್ರಯದಲ್ಲಿ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮ ಸರಕಾರಿ ಪ್ರಥಮ ದರ್ಜೇ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ ಶಂಕರನಾರಾಯಣದಲ್ಲಿ ಜರುಗಿತು.

Call us

Call us

Call us

ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜಶೇಖರ ವಿ. ಪಾಟೀಲ್ ಇವರು ಉದ್ಘಾಟಸಿ, ಇಂದಿನ ದಿನದಲ್ಲಿ ನೀರಿನ ಬವಣೆ ಹೆಚ್ಚಾಗುತ್ತಿದ್ದು, ನೀರಿನ ಬಳಕೆ ಕಡಿಮೆ ಮಾಡುತ್ತಾ, ನೀರಿನ ಭವಣೆಯಿಂದ ತೊಂದರೆಗೊಳಗಾಗದಂತೆ ಜಾಗೃತಿ ಮೂಡಿಸಬೇಕಾಗಿರುವುದು ಅತೀ ಅಗತ್ಯ ಎಂದು ಹೇಳಿದರು.

ಕುಂದಾಪುರ ಬಾರ್ ಅಸೋಸಿಯೇಷನ್ (ರಿ.) ಕುಂದಾಪುರ ಇದರ ಅಧ್ಯಕ್ಷರಾದ ಬನ್ನಾಡಿ ಸೋಮನಾಥ ಹೆಗ್ಡೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷದ ತಾಪಮಾನ ಅತೀ ಹೆಚ್ಚಾಗಿದ್ದು, ನಮ್ಮ ರಾಜ್ಯದ ಹಲವು ಭಾಗಗಳಲ್ಲಿ ನೀರಿನ ಕ್ಷಾಮ ಹೆಚ್ಚಾಗಿದ್ದು ಬಿಸಿಲಿನ ತಾಪದಿಂದಾಗಿ ಹಲವು ಪ್ರಾಣಿ ಪಕ್ಷಿಗಳ ಜೊತೆಗೆ ಮಾನವನ ಸಾವು ಕೂಡಾ ಆಗಿದ್ದು ಈ ಬಗ್ಗೆ ಇಂದಿನ ಜನಾಂಗ ಚಿಂತಿಸಬೇಕಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಡಾ ಉದಯ ಕುಮಾರ ಶೆಟ್ಟಿ, ಪ್ರಾಂಶುಪಾಲರು, ಸರಕಾರಿ ಪ್ರಥಮ ದರ್ಜೇ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ ಶಂಕರನಾರಾಯಣ, ಎಚ್. ರವೀಶ್ಚಂದ್ರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ, ಕುಂದಾಪುರ ಬಾರ್ ಅಸೋಸಿಯೇಷನ್ (ರಿ.) ಕುಂದಾಪುರ, ಶ್ರೀಮತಿ ಸುಮಂಗಲಾ ನಾಯ್ಕ, ಸಹಾಯಕ ಸರಕಾರಿ ಅಭಿಯೋಜಕರು ಕುಂದಾಪುರ ಮುಂತಾದವರು ಉಪಸ್ಥಿತರಿದ್ದರು.

ಕುಂದಾಪುರದ ವಕೀಲರಾದ ಹಂದಕುಂದ ಅಶೋಕ ಶೆಟ್ಟಿ ಇವರು ಜಲ ಸಂಪ್ಮನೂಲದ ಬಗ್ಗೆ ಮಾಹಿತಿ ನೀಡಿ ಭೂಮಿಯ ಪ್ರತಿಶತ ೭೦ ಭಾಗ ನೀರಿನಿಂದ ಆವರಿಸಿದ್ದರೂ ಕೂಡಾ ಪ್ರಪಂಚದಲ್ಲಿ ೧೦ರಲ್ಲಿ ೨% ಜನ ನೀರಿನ ಅಭಾವದಿಂದ ಸಾವನ್ನಪ್ಪುತ್ತಿದ್ದಾರೆ, ಇತ್ತೀಚಿನ ದಿನಗಳಲ್ಲಿ ಜನರು ನೀರನ್ನು ದುರ್ಬಳಕೆ ಮಾಡುತ್ತಿದ್ದು, ನೀರಿನ ಸದ್ಭಳಕೆ ಅಗತ್ಯ ಎಂದು ಹೇಳಿದರು.

Leave a Reply

Your email address will not be published. Required fields are marked *

two − one =