ನೀರಿನ ಹಕ್ಕನ್ನು ಸಮರ್ಥಿಸಲು ರಾಜ್ಯ ಸರಕಾರ ವಿಫಲ: ವಿಕಾಸ್ ಸೊಪ್ಪಿನ್

Call us

ಮೂಡುಬಿದಿರೆ: ಎಲ್ಲರೂ ಕಪ್ಪು ಎಂದು ಅಶುಭದ ಸಂಕೇತವೆಂದು ಭಾವಿಸುತ್ತಾರೆ ಆದರೆ ನಮ್ಮ ಜನ ಕಪ್ಪು ಮೋಡವಾಗಿ ಯಾವಾಗ ಆಗುತ್ತದೆ ಎಂದು ಕಾಯುತ್ತಾರೆ. ನೀರಿನ ಸಮಸ್ಯೆ ದಿನವೂ ನಮ್ಮನ್ನು ಕಾಡುತ್ತಿದೆ. ಕುಡಿಯಲು, ಸ್ನಾನಕ್ಕೆ ನೀರಿಲ್ಲ. ನಮ್ಮೂರಿನವರಿಗೆ ಹೆಣ್ಣು ಕೊಡಲ್ಲ. ಸರಕಾರಿ ನೌಕರರು ಇಲ್ಲಿ ಉಳಿಯೋಲ್ಲ. ಇಂತಹ ದುಸ್ಥರ ಬದುಕು ನಮ್ಮದು. ಮಹದಾಯಿಯ ಅಗತ್ಯತೆಯನ್ನು ವಿಕಾಸ್ ಸೊಪ್ಪಿನ್ ನರಗುಂದ ವಿವರಿಸಿದ್ದು ಹೀಗೆ.

Call us

Call us

ಆಳ್ವಾಸ್ ನುಡಿಸಿರಿಯ ರತ್ನಾಕರವರ್ಣಿ ವೇದಿಕೆಯ ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ‘ನೀರಿನ ಬಳಕೆ ಮತ್ತು ಹಂಚಿಕೆ ಎಂಬ ವಿಚಾರಗೋಷ್ಠಿಯಲ್ಲಿ ಮಹದಾಯಿ ಯೋಜನೆಯ ಕುರಿತು ಮಾತನಾಡುತ್ತಾ ಕರ್ನಟದಲ್ಲಿ ಬಳಕೆಯಾಗದೇ ಉಳಿಯುತ್ತಿದ್ದ ನೀರನ್ನು ಡ್ಯಾಂ ಮುಖಾಂತರ ನಾಲ್ಕು ಜಿಲ್ಲೆಗಳಿಗೆ ತಲುಪಿಸಲು ಮಲಪ್ರಭಾ ಡ್ಯಾಂ ಕಟ್ಟಲಾಯಿತು. ಆದರೆ ಆ ಡ್ಯಾಂ ತುಂಬಿತ್ತಿಲ್ಲ ಎಂಬ ಕಾರಣಕ್ಕೆ ಹತ್ತಿರದಲ್ಲೇ ಇದ್ದ ಮಹದಾಯಿಯನ್ನು ಮಲಪ್ರಭೆಗೆ ಸೇರಿಸುವ ಪ್ರಯತ್ನ ನಡೆಯಿತು. ಆದರೆ ಗೋವಾ ಇದಕ್ಕೆ ತಗಾದೆ ತೆಗೆಯಿತು. ಅದು ಇಂದಿಗೂ ಮುಂದುವರಿದಿದೆ. ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಎಲ್ಲಾ ಸರಕಾರಗಳೂ ನೀರಿನ ಮೇಲೆ ನಮ್ಮ ಹಕ್ಕಿದೆ ಎಂಬ ವಾದವನ್ನು ಮಂಡಿಸಲು ವಿಫಲವಾದವು. ಜನರಿಗೆ ಬೇಡದ ಯೋಜನೆ ಸರಕಾರಕ್ಕೆ ಮುಖ್ಯವಾದವು. ರೈತರ ಭೂಮಿ ಹೋದದ್ದಕ್ಕಿಂತ ರಾಜಕಾರಣಿಗಳಿಗೆ ಕಮಿಷನ್ ಸಿಕ್ಕದ್ದಕ್ಕೇ ಹೆಮ್ಮ ಪಡುವಂತಾಯಿತು ಎಂದು ಅವರು ತಮ್ಮ ವಿಷಾದ ವ್ಯಕ್ತಪಡಿಸಿದರು.

ಎಲ್ಲಾ ಯೋಜನೆಗಳೂ ಕೆಟ್ಟ ರಾಜಕೀಯದಿಂದಾಗಿ ವಿಮುಖವಾಗುತ್ತಿದೆ. ಒಂದಿಷ್ಟು ನೀರಿನಿಂದ ಬದುಕು ಕಟ್ಟಿಕೊಳ್ಳಬೇಕಿದ್ದ ಜನ ಇಂದು ಬೀದಿಗಿಳಿಯುವಂತಾಗಿದೆ. ಇದಕ್ಕೊಂದು ತಾರ್ಕಿಕ ಅಂತ್ಯ ಕಾಣಿಸುವುದೇ ಮಹದಾಯಿ ಯೋಜನೆ ಉದ್ದೇಶ ಎಂದವರು ಹೇಳಿದರು.

Call us

Call us

Leave a Reply

Your email address will not be published. Required fields are marked *

3 + fourteen =