ನೆಂಪು: ದೇವಸ್ಥಾನ ಸ್ವಚ್ಛತಾ ಕಾರ್ಯಕ್ರಮ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶ್ರೀ ವಿನಾಯಕ ಯುವಕ ಸಂಘ ರಿ., ನೆಂಪು ಮತ್ತು ಭಟ್ ಬಳಗದ ವತಿಯಿಂದ ನೆಂಪು ಗ್ರಾಮಸ್ಥರ ಸಹಯೋಗದಲ್ಲಿ ನೆಂಪು ಶ್ರೀ ವಿನಾಯಕ ದೇವಸ್ಥಾನದ ೨೫ನೇ ವರ್ಷದ ಪ್ರತಿಷ್ಠಾ ವರ್ಧಂತಿಯ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

Call us

Call us

ದೇವಳದ ಆಡಳಿತ ಮೊಕ್ತೇಸರ ರಾಮಕೃಷ್ಣ ಭಟ್ ನೆಂಪು ಶುಭ ಹಾರೈಸಿದರು. ಶ್ರೀ ವಿನಾಯಕ ಯುವಕ ಸಂಘದ ಅಧ್ಯಕ್ಷರಾದ ಸಂತೋಷ ಮಂಗಲ್ಸನಕಟ್ಟೆ, ಗೌರವಾಧ್ಯಕ್ಷರಾದ ಸುಕುಮಾರ ಶಾರಾಳ, ಉಪಾಧ್ಯಕ್ಷರಾದ ಪ್ರಶಾಂತ ಮಂಗಲ್ಸನಕಟ್ಟೆ, ಹರೀಶ ಆಚಾರ‍್ಯ ಹೆರ್ಜಾಡಿ, ಜೊತೆ ಕಾರ್ಯದರ್ಶಿ ರಾಜೇಂದ್ರ ಹರ್ಜಿಮನೆ, ನೆಂಪು ಫ್ರೆಂಡ್ಸ್ ಅಧ್ಯಕ್ಷರಾದ ರಾಘವೇಂದ್ರ ನೆಂಪು, ಉಪನ್ಯಾಸಕ ಮಂಜುನಾಥ ಚಂದನ್ ನೀರ್‌ಕೊಡ್ಲು, ಭಟ್ ಬಳಗದ ವೆಂಕಟರಾಮ್ ಭಟ್, ಪ್ರಶಾಂತ್ ಭಟ್ ಮತ್ತಿತ್ತರು ಉಪಸ್ಥಿತರಿದ್ದರು. ಬೆಳಿಗ್ಗೆ ೮ ಗಂಟೆಯಿಂದ ಮಧ್ಯಾಹ್ನ ೨ ಗಂಟೆಯ ತನಕ ದೇವಳ ಪರಿಸರ, ಕೆರೆ ಹಾಗೂ ಸ್ಥಳೀಯ ಅಂಗನವಾಡಿ ಪರಿಸರವನ್ನು ಸ್ವಚ್ಚಗೊಳಿಸಲಾಯಿತು.

Leave a Reply

Your email address will not be published. Required fields are marked *

5 × 2 =