ನೆರಳಕಟ್ಟೆ: ಉದ್ಯಮಿ ಶ್ರೀಪತಿ ಬಾಳಿಗ ಆತ್ಮಹತ್ಯೆಗೆ ಶರಣು. ಕಾರಣ ನಿಗೂಡ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ನೇರಳಕಟ್ಟೆಯ ಖ್ಯಾತ ಉದ್ಯಮಿಯೋರ್ವರು ತನ್ನ ಅಂಗಡಿಯ ಗೋದಾಮಿನಲ್ಲಿ ಆತ್ಮಹತ್ಯೆಗೆ ಶರಣಾದ ಘಟನೆ ವರದಿಯಾಗಿದೆ. ನೇರಳಕಟ್ಟೆ ನಿವಾಸಿ ಬಾಲಕೃಷ್ಣ ಬಾಳಿಗಾ ಅವರ ಪುತ್ರ ಶ್ರೀಪತಿ ಬಾಳಿಗಾ (40) ನೇಣು ಬಿಗಿದು ಮೃತಪಟ್ಟವರು.

Call us

Call us

ಘಟನೆಯ ವಿವರ:
ಇಂದು ಬೆಳಿಗ್ಗೆ ನೆರಳಕಟ್ಟೆಯ ತಮ್ಮ ಅಂಗಡಿಗೆ ಬಂದಿದ್ದ ಶ್ರೀಪತಿ ಎಂದಿನಂತೆ ಸಹಜವಾಗಿ ವ್ಯವಹಾರ ನಡೆಸಿದ್ದರು. ಮಧ್ಯಾಹ್ನದ ಸುಮಾರಿಗೆ ಅಂಗಡಿಯ ನೌಕರನೋರ್ವ ಅಡಿಕೆ ಚೀಲವನ್ನು ಹೊತ್ತು ಪಕ್ಕದಲ್ಲಿದ್ದ ಗೋದಾಮಿಗಿಡಲು ತೆರಳಿದಾಗ ಅಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶ್ರೀಪತಿ ಅವರ ದೇಹ ಪತ್ತೆಯಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಿದರಾದರೂ ಅಷ್ಟರಲ್ಲಿ ಪ್ರಾಣಪಕ್ಷಿ ಹಾರಿಹೋಗಿತ್ತು. ಕುಂದಾಪ್ರ ಡಾಟ್ ಕಾಂ ಸುದ್ದಿ.

ನೇರಳಕಟ್ಟೆಯಲ್ಲಿ ಸ್ವಂತ ಅಂಗಡಿಯನ್ನು ಹೊಂದಿದ್ದ ಶ್ರೀಪತಿ ಬಾಳಿಗ ವಾಣಿಜ್ಯ ಕೃಷಿ ಉತ್ಪನ್ನಗಳ ವ್ಯವಹಾರ ಹೊಂದಿದ್ದರು. ಸ್ವಂತ ಪರಿಶ್ರಮದಿಂದ ಯಶಸ್ವಿ ಉದ್ಯಮಿಯಾಗಿ ಬೆಳೆದಿದ್ದ ಶ್ರೀಪತಿಯವರು ಇತ್ತೀಚೆಗೆ ಭೂ ವ್ಯವಹಾರದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರೆನ್ನಲಾಗಿದೆ. ಇವರ ಕುರಿತು ನೆರಳಕಟ್ಟೆ ಪರಿಸರದಲ್ಲಿಯೂ ಒಳ್ಳೆಯ ಅಭಿಪ್ರಾಯವಿದ್ದು,  ಬಡವರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುತ್ತಿದ್ದರೆನ್ನಲಾಗಿದೆ. ಕುಟುಂಬದೊಂದಿಗೂ ಉತ್ತಮವಾಗಿದ್ದ ಇವರು ಯಾವುದೇ ಸಮಸ್ಯೆಗಳಿಲ್ಲದೆ ಏಕಾಏಕಿ ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಬಂದಿರುವುದು ಹಲವು ಗುಮಾನಿಗಳನ್ನು ಹುಟ್ಟು ಹಾಕಿದೆ. ಮೃತರು ಮಡದಿ ಸೇರಿದಂತೆ ಎರಡು ಪುಟ್ಟ ಮಕ್ಕಳನ್ನು ಅಗಲಿದ್ದಾರೆ. / ಕುಂದಾಪ್ರ ಡಾಟ್ ಕಾಂ ಸುದ್ದಿ./

Call us

Call us

Leave a Reply

Your email address will not be published. Required fields are marked *

2 − two =