ನೈಜ ಸುದ್ದಿಯಿಂದ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ: ಕೆ. ಜಯಪ್ರಕಾಶ ಹೆಗ್ಡೆ

Click Here

Call us

Call us

ಕುಂದಾಪುರ  ದಿಗ್ವಿಜಯ ಚಾನೆಲ್ ಕಚೇರಿ ಉದ್ಘಾಟನೆ

Call us

Call us

Visit Now

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಾಧ್ಯಮಕ್ಕೆ ಭಾಷೆ ಮೇಲಿನ ಹಿಡಿತ ಬಹುಮುಖ್ಯವಾದುದು. ಉತ್ತಮ ಭಾಷೆ ಬಳಕೆ ಹಾಗೂ ಅದರ ಸಮರ್ಪಕ ಪ್ರಯೋಗ, ಓದುಗರ ಆಕರ್ಷಿಸುವ ಹೆಡ್ಡಿಂಗ್, ನೋಡುಗರಿಗೆ ಹಿತ ನೀಡುವ ದೃಶ್ಯಗಳ ವೀಕ್ಷಕರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಮಾಧ್ಯಗಳ ನಡುವೆ ಆರೋಗ್ಯಕರ ಸ್ಪರ್ಧೆ ಇರಬೇಕು. ಟಿಆರ್‌ಪಿ ಹೆಚ್ಚಿಸುವ ಉದ್ದೇಶಕ್ಕಾಗಿ ಸತ್ಯಕ್ಕೆ ದೂರವಾದ, ವೈಯಕ್ತಿಕ ತೇಜೋವಧೆಗೆ ಹೆಚ್ಚು ಒತ್ತುಕೊಡದೆ, ನೈಜ ಸುದ್ದಿಗಳಿಗೆ ಆದ್ಯತೆ ನೀಡಿದರೆ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಅಭಿಪ್ರಾಯಪಟ್ಟರು.

Click here

Click Here

Call us

Call us

ಕುಂದಾಪುರ ಆರ್.ಎನ್. ಶೆಟ್ಟಿ ಸಭಾಭವನ ಮಿನಿ ಸಭಾಂಗಣದಲ್ಲಿ ನಡೆದ ದಿಗ್ವಿಜಯ 24×7 ಚಾನೆಲ್ ಕಚೇರಿ ಉದ್ಘಾಟಿಸಿ, ಮಾಧ್ಯಮ ಕೇತ್ರದಿಂದ ಆರಂಭವಾದ ವಿಜಯ ಸಂಕೇಶ್ವರ ಅವರ ವಿಜಯಯಾತ್ರೆ ದೃಶ್ಯ ಮಾಧ್ಯಮಕ್ಕೂ ವಿಸ್ತರಿಸಿದ್ದು, ದಿಗ್ವಿಜಯ ಟಿವಿ ಚಾಲನ್ ದಶದಿಕ್ಕುಗಳಲ್ಲಿ ದಿಗ್ವಿಜಯದ ದುಂದುಬಿ ಮೊಳಗಿಸಲಿ ಎಂದು ಆಶಿಸಿದರು.

ಜವಾಬ್ದಾರಿಯುತ ಓದುಗರ ಹಾಗೂ ನೋಡುಗರ ಸೃಷ್ಟಿಸುವ ಜವಾಬ್ದಾರಿ ಮಾಧ್ಯಮಗಳ ಮೇಲಿದ್ದು, ಜವಾಬ್ದಾರಿಯುತ ಓದುಗರ ಅವಶ್ಯಕತೆ ಇದೆ. ಜವಾಬ್ದಾರಿ ರೀಡರ್, ಹೊಣೆಗಾರಿಕೆ ಸುದ್ದಿಗಳ ಕೊಟ್ಟು, ಜವಾಬ್ದಾರಿಯುತ, ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಸಾದ್ಯ ಎಂದು ಅವರುಅಭಿಪ್ರಾಯಪಟ್ಟರು.

ಮಾಧ್ಯಮ ಕ್ಷೇತ್ರದಲ್ಲಿ ಪತ್ರಕರ್ತರ ಜವಾಬ್ದಾರಿ ಬಹಳಷ್ಟಿದೆ. ಪತ್ರಕರ್ತರಿಗೆ ಹಾಗೂ ಪತ್ರಿಕೆಗಳು ಸುದ್ಧಿ ವಿಮರ್ಶಿಸಿ ವಾಸ್ತವಾಂಶ ಜನರ ಮುಂದಿಡುವ ಪ್ರಯತ್ನ ಮಾಧ್ಯಮದ ಮೂಲಕ ನಡೆಯಬೇಕು. ಪತ್ರಿಕೆಗಳ ಮೂಲಕ ಜನಾಭಿಪ್ರಾಯ ಮೂಡಿಸುವ ಮಹತ್ತರ ಜವಾಬ್ದಾರಿ ಪತ್ರಕರ್ತರ ಮೇಲಿದೆ. ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಗಮನ ಕೇಂದ್ರಿಕರಿಸದೆ ಕ್ರೀಡೆ, ಕಲೆ, ಶಿಕ್ಷಣ ಹಾಗೂ ಸ್ಥಳೀಯ ವಿಚಾರಗಳ ಬಗ್ಗೆ ಹೆಚ್ಚು ಗಮನ ಹರಿಸಿ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಕಾರಣೀಭೂತರಾಗಬೇಕು ಎಂದರು.

ವಿಜಯ ಸಂಕೇಶ್ವರ ಅವರು ಮಾಧ್ಯಮ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತರುವ ಮೂಲಕ ಪ್ರತಿಯೊಬ್ಬರೂ ಪತ್ರಿಕೆ ಓದಲು ಸಹಕಾರಿಯಾಗಿದ್ದು, ಅವರು ಇದೀಗ ದೃಶ್ಯ ಮಾಧ್ಯಮಕ್ಕೆ ಕಾಲಿಡುತ್ತಿರುವುದು ಸಂತಸ ಮೂಡಿಸಿದೆ. ದಿಗ್ವಿಜಯ ಚಾನಲ್ ಮೂಲಕ ದಿಗ್ವಿಜಯ ಸಾಧಿಸಲು ಹೊರಟಿದೆ. ಸ್ಪರ್ಧೆಯು ಆರೋಗ್ಯಕರವಾಗಿರಲಿ, ಮುಂದಿನ ದಿನಗಳಲ್ಲಿ ದಿಗ್ವಿಜಯ ನಂ.1 ಚಾನೆಲ್ ಆಗಿ ಮೂಡಿ ಬರಲಿ ಎಂದು ಆಶಿಸಿದರು.

Click Here

ಪ್ರದೇಶಿಕ ಭಾಷೆ, ಗ್ರಾಮೀಣ ಭಾರತದ ಆಚಾರ-ವಿಚಾರಗಳ ಕಡೆ ಹೆಚ್ಚು ಒತ್ತು ನೀಡಿದರೆ, ಹೆಚ್ಚು ಹೆಚ್ಚು ಜನರ ಮುಟ್ಟಲು ಸಾಧ್ಯ, ಗ್ರಾಮಣ ಭಾಗದ ಪ್ರತಿಭೆಗಳಿಗೆ ಅಕಾಶ, ಕಲೆ, ಸಾಹಿತ್ಯ ಕ್ರೀಡೆಗಳಿಗೆ ಹೆಚ್ಚು ಒತ್ತು ದಿಗ್ವ್ವಿಜಯ ನೀಡಬೇಕು. ಜವಾಬ್ದಾರಿಯುತ ಓದುಗ, ಹೊಣೆಗಾರಿಕೆ ಮಾಧ್ಯಮ ಒಟ್ಟಾಗಿ ಪ್ರಜ್ಞಾವಂತ ಸಮಾಜ ನಿರ್ಮಾಣ ಸಾಧ್ಯ ಎಂದು ಬಣ್ಣಿಸಿದರು.

ಹಿರಿಯ ಕೃಷಿಕ ಎ.ಜಿ.ಕೊಡ್ಗಿ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಪುರಸಭೆ ಅಧ್ಯಕ್ಷೆ ವಸಂತಿ ಮೋಹನ್ ಸಾರಂಗ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರಿ ಅಧ್ಯಕ್ಷ ವಿಕಾಶ್ ಹೆಗ್ಡೆ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಮಾಜಿ ಆಡಳಿತ ಮೊಕ್ತೇಸರ ಬಿ.ಎಂ.ಸುಕುಮಾರ್ ಶೆಟ್ಟಿ, ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪಾ ನಾಗ್, ಹಿರಿಯ ಉಪ ಸಂಪಾದಕ ಶೇಣಿ ಬಾಲಮುರಳಿ ಇದ್ದರು.

ಕಾರ‍್ಯಕ್ರಮಕ್ಕೂ ಮುನ್ನಾ ಆಕಾಶವಾಣಿ ಕಲಾವಿದ ಗಣೇಶ್ ಗಂಗೊಳ್ಳಿ ಅವರಿಂದ ಸುಗಮ ಸಂಗೀತ ಕಾರ‍್ಯಕ್ರಮ ನಡೆಯಿತು. ಪತ್ರಕರ್ತರಾದ ಶ್ರೀಪತಿ ಹೆಗಡೆ ಹಕ್ಲಾಡಿ ಸ್ವಾಗತಿಸಿದರು. ಅಶ್ವಥ ಆಚಾರ್ಯ ಯಡಬೆಟ್ಟು, ನರಸಿಂಹ ನಾಯಕ್ ಬೈಂದೂರು, ಜನ್ನಾಡಿ ಮಂಜುನಾಥ ಶೇಣೈ, ಆರ್ಡಿ ಸಂಜೀವ ಅತಿಥಿಗಳ ಗೌರವಿಸಿದರು. ಉಪಸಂಪಾದಕ ಹರೀಶ್ ರೈ ಪ್ರಾಸ್ತಾವಿಕ ಮಾತನಾಡಿ, ನಿರೂಪಿಸಿದರು. ಮುಖ್ಯಸಂಪಾದಕ ವಿಶ್ವೇಶ್ವರಯ್ಯ ಹಿರೇಮಠ ವಂದಿಸದರು. ಪ್ರಸರಣ ವಿಭಾಗ ವೀರೇಶ್. ಬಸವರಾಜು, ಜಾಹಿರಾತು ವಿಭಾಗ ನವೀನ್ ಹಾಗೂ ಸಚಿನ್ ಸಹಕರಿಸಿದರು.

ಕುಂದಾಪುರ, ಕೋಟೇಶ್ವರ ರೋಟರಿ ಹಾಗೂ ಲಯನ್ಸ್ ಕ್ಲಬ್, ಯುವ ಮೆರಿಡಿಯನ್ ಕೋಟೇಶ್ವರ, ಕನ್ನಡ ವೇದಿಕೆ ಕುಂದಾಪುರ, ಕಲಾಕ್ಷೇತ್ರ ಕುಂದಾಪುರ, ಸಾಹಿತ್ಯ ಪರಿಷತ್, ಗುರುಕುಲ ಪಬ್ಲಿಕ್ ಸ್ಕೂಲ್ ವಕ್ವಾಡಿ ಸಹಕಾರದಲ್ಲಿ ಕಾರ್ಯಕ್ರಮ ಜರುಗಿತು.

ವಿಜಯ ಸಂಕೇಶ್ವರ ಉತ್ತಮ ಉಧ್ಯಮಿಯಾಗಿದ್ದು, ಸಂಸದರಾಗಿ, ಮೇಲ್ಮನೆ ಸದಸ್ಯರಾಗಿ ಯಶಸ್ವೀ ರಾಜಕಾರಣ ಆಗಿದ್ದರು. ಮಾಧ್ಯಮ ಕೇತ್ರದಲ್ಲೂ ಯಶಸ್ಸಿನ ಮೆಟ್ಟಿಲೇರಿದ್ದು, ಈ ಯಶಸ್ಸಿನ ಹಿಂದೆ ಪಕ್ಕಾ ಲೆಕ್ಕಾಚಾರದ ಗುಟ್ಟಿದೆ. ಸಂದಿಗ್ಧ ಕಾಲಘಟ್ಟದಲ್ಲಿ ದಿಗ್ವಿಜಯ ಚಾನಲ್ ಆರಂಭವಾಗುತ್ತಿದ್ದು, ಆರೋಗ್ಯಕರ ಸುದ್ದಿಗಳ ಮೂಡಿಬರಲಿ. ಜನಪರ ಕಾಳಜಿ, ಅವರ ಭಾವನೆ, ಸಮಸ್ಯೆಗಳ ಎತ್ತಿಹಿಡಿದು, ಸಮತೋಲನ ಕಾಯ್ದುಕೊಂಡು, ಸ್ಪಂದಿಸುವ, ಒತ್ತು ಕೊಡುವ ಜೊತೆ ಉತ್ತಮ ಚಾನಲ್ ಆಗಿ ಮೂಡಿಬರುವ ಎಲ್ಲಾ ಅವಕಾಶ ದಿಗ್ವಿಜಯಕ್ಕೆ ಇದೆ. – ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸದಸ್ಯರು

ಮಾಧ್ಯಮ ಮತ್ತು ಅಧಿಕಾರಿಗಳ ನಡುವೆ ಉತ್ತಮ ಹೊಂದಾಣಿಕೆ ಇರಬೇಕು. ಮಾಧ್ಯಮದಲ್ಲಿ ಬಂದ ವರದಿಗಳ ಆಡಳಿತ ಇಲಾಖಾ ಅಧಿಕಾರಿಗಳು ಗಂಭೀರವಾಗಿ ತೆಗೆದುಕೊಳ್ಳುವ ತನ್ಮೂಲಕ ಸಾಮಾಜಿಕ ನ್ಯಾನ ನೀಡಲು ಸಾಧ್ಯ. ನೂತನ ಚಾನಲ್ ದಿಗ್ವಿಜಯ ಹೆಸರೇ ಫವರ್ ಫುಲ್ಲಾಗಿದ್ದು, ಮುಂದಿನ ದಿನಗಳಲ್ಲಿ ದಿಗ್ವಿಜಯ ಚಾಲನೆ ಪ್ರಭಲ ಮಾಧ್ಯಮವಾಗಿ ದಿಗ್ವಿಜಯ ಸಾಧಿಸಲಿದೆ. – ಶಿಲ್ಪಾ ನಾಗ್, ಉಪವಿಭಾಗಾಧಿಕಾರಿ, ಕುಂದಾಪುರ

ಪತ್ರಿಕೆಗಳ ಕೊಂಡು ಓದದೇ ಇರುವ ಕಾಲಘಟ್ಟದಲ್ಲಿ ವಿಜಯ ಸಂಕೇಶ್ವರ ಪತ್ರಿಕೆ ಹೊರತಂದು ಒಂದು ರೂಗೆ ಪತ್ರಿಕೆ ಕೊಡುವ ಮೂಲಕ ಓದಗರ ಸೃಷ್ಟಿಸರು ಎನ್ನೋದು ಉಲ್ಲೇಖಾರ್ಹ. ಶಾಸಕಾಂಗ, ಕಾರ‍್ಯಾಂಗ, ನ್ಯಾಯಾಂಗ ತಪ್ಪು ಮಾಡಿದಾಗ ತಿದ್ದುವ ಕೆಲಸ ಮಾಧ್ಯಮ ರಂಗ ಮಾಡುತ್ತಿದೆ. ಕಟ್ಟಕಡೆಯ ಜನರಿಗೂ ಸಾಮಾಜಿಕ ನ್ಯಾಯ, ಸಾಮಾಜಿಕ ಅಭಿವೃದ್ಧಿ ಹೆಚ್ಚು ಒತ್ತುಕೊಡದೆ ಮಾಧ್ಯಮಗಳ ದೃಷ್ಟಿ ಬದಲಾಗುತ್ತಿದೆ. ಇಂತಾ ಕಾಲಘಟ್ಟದಲ್ಲಿ ದಿಗ್ವಿಜಯ ಆರಂಭವಾಗುತ್ತಿದ್ದು, ದಿಟ್ಟ ನಿಲುವಿನ ಮೂಲಕ ಸಾಮಾಜಿಕ ಅಭಿವೃದ್ಧಿಗೆ ಒತ್ತು ಕೊಡುವ ಹೊಸ ಆಶಾದಾಯಕವಾಗಿ ದಿಗ್ವಿಜಯ ಮೂಡಿಬರಲಿ – ವಿಕಾಸ್ ಹೆಗ್ಡೆ, ಅಧ್ಯಕ್ಷ, ನಗರ ಯೋಜನಾ ಪ್ರಾಧಿಕಾರಿ ಕುಂದಾಪುರ.

Leave a Reply

Your email address will not be published. Required fields are marked *

4 × 3 =