ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ನಡುವೆ ನೂತನ ಒಡಂಬಡಿಕೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ:
ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ದೇಶದ ಪ್ರತಿಷ್ಠಿತ ಬಹುಆಯಾಮಗಳ ಸಂಶೋಧನೆಯಲ್ಲಿ ತೊಡಗಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ನಡುವೆ ನೂತನ ಒಡಂಬಡಿಕೆಗೆ ಸಹಿ ಹಾಕಲಾಯಿತು. ಆಳ್ವಾಸ್ ಸಂಸ್ಥೆಯ ಪರವಾಗಿ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಹಾಗೂ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಸಂಸ್ಥೆಯ ನಿರ್ದೇಶಕರಾದ ಡಾ. ಶೈಲೇಶ್ ನಾಯಕ್, ಎನ್‌ಐಎಎಸ್ ಇಸ್ರೋ ಚೇರ್ ಪ್ರೊಫೆಸರ್ ಡಾ. ಪಿ.ಜಿ.ದಿವಾಕರ್ ಮತ್ತು ಎನ್‌ಐಎಎಸ್ ಆಡಳಿತ ಮುಖ್ಯಸ್ಥರು ಪಿ. ಶ್ರೀನಿವಾಸ್ ಐತಾಳ್ ಸಮ್ಮುಖದಲ್ಲಿ ಬೆಂಗಳೂರಿನ ಎನ್‌ಐಎಎಸ್ ಕೇಂದ್ರ ಕಚೇರಿಯಲ್ಲಿ ಒಡಂಬಡಿಕೆಯ ಒಪ್ಪಂದಕ್ಕೆ ಬರಲಾಯಿತು.

Call us

Call us

ಐದು ವರ್ಷಗಳ ಈ ಒಪ್ಪಂದವು, ವಿವಿಧ ಆಯಾಮಗಳಲ್ಲಿ ಎರಡು ಸಂಸ್ಥೆಗಳ ನಡುವೆ ಪರಸ್ಪರ ಸಹಕಾರವನ್ನು ಒದಗಿಸಲು ಉದ್ದೇಶಿಸಲಾಗಿದೆ. ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಪಾಂಡಿತ್ಯವನ್ನು ಉತ್ತೇಜಿಸಲು ಎರಡೂ ಸಂಸ್ಥೆಗಳ ನಡುವೆ ಸಹಯೋಗ ಮತ್ತು ತಾಂತ್ರಿಕ ವಿನಿಮಯ ಮಾಡುವುದು, ಎನ್‌ಐಎಎಸ್ ಹಾಗೂ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ಜಂಟಿಯಾಗಿ ಸಂಶೋಧನೆಯಲ್ಲಿ ತೊಡಗಿಕೊಳ್ಳುವುದು, ಶಿಕ್ಷಣ ಮತ್ತು ಸಂಶೋಧನೆಗೆ ಪೂರಕವಾಗಿ ಮಾಹಿತಿಗಳ ವಿನಿಮಯ ಮಾಡಿ, ಈ ಮೂಲಕ ವಿದ್ಯಾರ್ಥಿಗಳಿಗೂ ಸಮಕಾಲೀನ ತಂತ್ರಜ್ಞಾನಗಳನ್ನು ಪರಿಚಯಿಸಿ, ಸಂಶೋಧನೆಯಲ್ಲಿ ಆಸಕ್ತಿ ಬೆಳೆಸುವುದು ಈ ಒಪ್ಪಂದದ ಮುಖ್ಯ ಉದ್ದೇಶವಾಗಿದೆ.

Call us

Call us

ಈ ಒಪ್ಪಂದವು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಹಾಗೂ ಆಳ್ವಾಸ್ ಪದವಿ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಸಂಶೋಧನಾ ರಂಗದಲ್ಲಿ ವಿಫುಲ ಅವಕಾಶ ನಿರ್ಮಿಸಿ ಕೊಡಲಿದೆ. ಎನ್‌ಐಎಎಸ್ ಸಂಸ್ಥೆ ತೆಗೆದುಕೊಳ್ಳುವ ಸರ್ಕಾರಿ ಹಾಗೂ ಸರ್ಕಾರೇತರ ಪ್ರಾಜೆಕ್ಟ್ ಗಳನ್ನು ಆಳ್ವಾಸ್ ವಿದ್ಯಾರ್ಥಿಗಳೊಂದಿಗೆ ಸೇರಿ ಜಂಟಿಯಾಗಿ ಕೆಲಸ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಹಂತದಲ್ಲೇ ಸಂಶೋಧನೆಯಲ್ಲಿ ಆಸಕ್ತಿ ಮತ್ತು ಅನುಭವ ಪಡೆಯಲು ಅನುಕೂಲವಾಗಲಿದೆ.

ಇವಗಳ ಜೊತೆಗೆ, ಆಧುನಿಕ ತಂತ್ರಜ್ಞಾನಗಳು, ಡಿಜಿಟಲ್ ಇಮೇಜ್ ಪ್ರೊಸೆಸಿಂಗ್ ಉಪಕರಣಗಳು ಮತ್ತು ತಂತ್ರಗಳ ಕುರಿತು ಸಮ್ಮೇಳನಗಳು, ಕೋರ್ಸ್ಗಳು ಮತ್ತು ತರಬೇತಿ ಕಾರ್ಯಾಗಾರಗಳನ್ನು ಜಂಟಿಯಾಗಿ ಆಯೋಜಿಸುವುದು, ಎನ್‌ಐಎಎಸ್ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್ ಮತ್ತು ಪ್ರಾಜೆಕ್ಟ್ಗಳಿಗೆ ಅವಕಾಶ ಕಲ್ಪಿಸಿ ಕೊಡುವುದು, ಆಳ್ವಾಸ್ ವಿದ್ಯಾರ್ಥಿಗಳಿಗೆ ಸ್ಪೇಸ್ ಟೆಕ್ನಾಲಜಿ ಹಾಗೂ ಐಸಿಟಿ ಟೂಲ್ಸ್ಗಳ ಬಗ್ಗೆ ಎನ್‌ಐಎಎಸ್ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ನೀಡುವುದುವಿದ್ಯಾರ್ಥಿಗಳಲ್ಲಿ ಕೋಡಿಂಗ್ ಕೌಶಲ್ಯಗಳನ್ನು ಬೆಳೆಸುವ ಉದ್ದೇಶವನ್ನೂ ಹೊಂದಲಾಗಿದೆ.

ಆಳ್ವಾಸ್ ಹಾಗೂ ಎನ್‌ಐಎಎಸ್, ಎರಡೂ ಸಂಸ್ಥೆಗಳಿಗೆ ಕಾರ್ಯಗಾರ, ಸಮ್ಮೇಳನ ಹಾಗೂ ಯಾವುದೇ ಪ್ರಾಜೆಕ್ಟ್ಗಳನ್ನು ಕೈಗೆತ್ತಿಕೊಳ್ಳುವ ಸಂಪೂರ್ಣ ಸ್ವಾತಂತ್ರö್ಯ ಇರಲಿದೆ.

ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್‌ಸ್ಡ್ ಸ್ಟಡೀಸ್:
ವಿವಿಧ ಸಂಶೋಧನೆಗಳನ್ನು ನಡೆಸಲು ಪ್ರೋತ್ಸಾಹಿಸುವ ಉದ್ದೇಶದಿಂದ ಜೆ.ಆರ್.ಡಿ ಟಾಟಾ ಅವರು, ೧೯೮೮ರಲ್ಲಿ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್‌ಸ್ಡ್ ಸ್ಟಡೀಸ್ (ಎನ್‌ಐಎಎಸ್) ಸಂಸ್ಥೆಯನ್ನು ಹುಟ್ಟುಹಾಕಿದರು. ಎನ್‌ಐಎಸ್ ಒಂದು ಉನ್ನತ ಸಂಶೋಧನಾ ಸಂಸ್ಥೆಯಾಗಿದ್ದು, ಇಸ್ರೋ, ಡಿಆರ್‌ಡಿಒ ಇತ್ಯಾದಿ ಸಂಸ್ಥೆಗಳ ಪರಿಣಿತರು ಈ ಸಂಸ್ಥೆಯ ಭಾಗವಾಗಿದ್ದಾರೆ. ಈ ಸಂಸ್ಥೆಯು ವಿವಿಧ ವಿಷಯಗಳಲ್ಲಿ ಪರಿಣತಿ ಹೊಂದಿರುವ, ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಂಪನ್ಮೂಲ ವ್ಯಕ್ತಿಗಳನ್ನು ಒಟ್ಟುಗೂಡಿಸುವ ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ. ಈ ಸಂಸ್ಥೆಯಲ್ಲಿ, ಉದ್ಯಮಿಗಳು, ಸರ್ಕಾರಿ ಅಧಿಕಾರಿಗಳಿಂದ ಹಿಡಿದು, ಸಾರ್ವಜನಿಕ ವ್ಯವಹಾರಗಳಲ್ಲಿ ಗುರುತಿಸಿಕೊಂಡಿರುವ ನಾಯಕರು, ಸಮಾಜದ ಪ್ರಖ್ಯಾತ ವ್ಯಕ್ತಿಗಳು ಮತ್ತು ಜೀವ ವಿಜ್ಞಾನ, ಮಾನವಿಕ ಮತ್ತು ಸಾಮಾಜಿಕ ವಿಜ್ಞಾನಗಳಲ್ಲಿ ಪರಿಣತಿ ಪಡೆದಿರುವ ಶಿಕ್ಷಣತಜ್ಞರು ಕಾರ್ಯನಿರ್ವಹಿಸುತ್ತಿದ್ದಾರೆ. ಸಮಕಾಲೀನ ಯುಗದಲ್ಲಿ, ಭಾರತ ಸೇರಿದಂತೆ ಜಾಗತಿಕ ಸಮಾಜ ಎದುರಿಸುತ್ತಿರುವ ಸಂಕೀರ್ಣ ಸವಾಲುಗಳಿಗೆ ಒಳನೋಟ, ಸೂಕ್ಷ್ಮತೆ, ವಿಶ್ವಾಸ ಮತ್ತು ಸಮರ್ಪಣೆಯೊಂದಿಗೆ ಪ್ರತಿಕ್ರಿಯಿಸುವ ವಿದ್ವಾಂಸರನ್ನು ಬೆಳೆಸುವ ಮತ್ತು ಇವರ ನೆಲೆಯನ್ನು ಪೋಷಿಸುವ ಕೆಲಸ ಮಾಡುತ್ತಿದೆ.

ಈ ಒಡಂಬಡಿಕೆ ಕಾರ್ಯಕ್ರಮದಲ್ಲಿ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ಲಾನಿಂಗ್ ಡೀನ್ ಡಾ. ದತ್ತಾತ್ರೇಯ ಹಾಗೂ ನಿತಿನ್ ಕೆ. ಆರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

10 − eight =