ನ.17: ಗಂಗೊಳ್ಳಿ ಸವಿನುಡಿಹಬ್ಬಕ್ಕೆ ಜಯಂತ ಕಾಯ್ಕಿಣಿ

Call us

ಗಂಗೊಳ್ಳಿ: ಸಾಹಿತ್ಯ ವೇದಿಕೆ, ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ರಾಜೋತ್ಸವ ಸಂಭ್ರಮದ ಸವಿನುಡಿ ಹಬ್ಬ2015 ಮತ್ತು ಗಂಗೊಳ್ಳಿ ಯು ಶೇಷಗಿರಿ ಶೆಣೈ ಸ್ಮರಣಾರ್ಥ ಕುಂದಪ್ರಭ ಪತ್ರಿಕೆಯ ಸಹಭಾಗಿತ್ವದೊಂದಿಗೆ ಆಯೋಜಿಸಲಾಗಿರುವ ಉಡುಪಿ ಜಿಲ್ಲಾ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಕವಿಗೋಷ್ಠಿ ಮತ್ತು ಕಥಾ ಗೋಷ್ಠಿ ಕಾರ‍್ಯಕ್ರಮವು ನವೆಂಬರ್ 17 ರಂದು ಬೆಳಿಗ್ಗೆ ಹತ್ತು ಗಂಟೆಯಿಂದ ಸಂಜೆ ನಾಲ್ಕು ಗಂಟೆಯ ತನಕ ಕಾಲೇಜಿನ ಆವರಣದಲ್ಲಿ ನಡೆಯಲಿದೆ.

Call us

Call us

ಉತ್ಸವದ ಉದ್ಘಾಟನೆಯನ್ನು ಕನ್ನಡದ ಖ್ಯಾತ ಸಾಹಿತಗಳಾದ ಜಯಂತ ಕಾಯ್ಕಿಣಿ ಅವರು ನೆರವೇರಿಸಲಿದ್ದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅದ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಡಾ.ಕಾಶೀನಾಥ ಪೈ, ಯು.ಎಸ್.ಶೆಣೈ, ಪ್ರಶಾಂತ್ ಕುಂದರ್, ದತ್ತಾನಂದ ಜಿ. ಪ್ರಾಂಶುಪಾಲ ಆರ್ ಎನ್ ರೇವಣ್ ಕರ್ ಮತ್ತು ಎನ್ ಸದಾಶಿವ ನಾಯಕ್ ಉಪಸ್ಥಿತರಿರುವರು. ಆ ಬಳಿಕ ಕವಿಗೋಷ್ಠಿ ಅಧ್ಯಕ್ಷತೆಯನ್ನು ಕೋಟ ವಿವೇಕ ಪದವಿಪೂರ್ವ ಕಾಲೇಜಿನ ಸುವ್ರತಾ ಅಡಿಗ ವಹಿಸಲಿದ್ದಾರೆ. ಕಥಾ ಗೋಷ್ಠಿ ಅಧ್ಯಕ್ಷತೆಯನ್ನು ಕಿದಿಯೂರು ಶ್ಯಾಮಿಲಿ ಪದವಿಪೂರ್ವ ಕಾಲೇಜಿನ ವಿಜೇತಾ ಶೆಟ್ಟಿ ವಹಿಸಲಿದ್ದಾರೆ. ವಿವಿಧ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಕನ್ನಡ ಸಿರಿ ಭಾವಗಾನ ವರ್ಣಚಿತ್ತಾರ ಕಾರ‍್ಯಕ್ರಮವೂ ಈ ದಿನ ನಡೆಯಲಿದ್ದು ಕನ್ನಡ ಮನಸ್ಸುಗಳಿಗೆ ಆತ್ಮೀಯ ಸ್ವಾಗತವನ್ನು ಸರಸ್ವತಿ ವಿದ್ಯಾಲಯದ ಬಳಗ ಕೋರಿದೆ.

Leave a Reply

Your email address will not be published. Required fields are marked *

five × four =