ಪಂಚಗಂಗಾವಳಿ ವಿದ್ಯಾನಿಧಿ ಯೋಜನೆಯ ವಿದ್ಯಾರ್ಥಿವೇತನ ವಿತರಣೆ

Call us

Call us

ಕುಂದಾಪುರ: ವಿದ್ಯೆಗೆ ಜಾತಿ ಮತ, ಬಡವ ಬಲ್ಲಿದ ಎಂಬ ಬೇಧಭಾವವಿಲ್ಲ. ಬಾಲ್ಯದಲ್ಲಿ ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ನೀಡಿ ವಿದ್ಯಾವಂತರಾಗಬೇಕು. ಆ ಮೂಲಕ ಸಮಾಜದ ದೀನದಲಿತರ ಸೇವೆ ಮಾಡುವಂತಾಗಬೇಕು. ವಿದ್ಯಾರ್ಥಿಗಳು ಜೀವನದಲ್ಲಿ ಒಳ್ಳೆತನವನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು. ಭವಿಷ್ಯದಲ್ಲಿ ಬೇರೆ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದಾಗ ಮಾತ್ರ ವಿದ್ಯಾರ್ಥಿವೇತನ ನಿಜವಾದ ಪ್ರಯೋಜನ ಪಡೆದಂತಾಗುತ್ತದೆ ಎಂದು ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಆರ್.ಎನ್.ರೇವಣಕರ್ ಹೇಳಿದರು.
ಅವರು ಇತ್ತೀಚಿಗೆ ಗಂಗೊಳ್ಳಿಯ ಶ್ರೀ ವಿಜಯವಿಠಲ ಮಂಟಪದಲ್ಲಿ ಸ್ಥಳೀಯ ಪಂಚಗಂಗಾವಳಿ ಬಳಗ ಪ್ರಾಯೋಜಿತ ಪಂಚಗಂಗಾವಳಿ ವಿದ್ಯಾನಿಧಿ ಯೋಜನೆಯ ೧೧ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿವೇತನ ವಿತರಿಸಿ ಮಾತನಾಡಿದರು.

Call us

Call us

Call us

ಕುಂದಾಪುರ ರೋಟರಿ ಕ್ಲಬ್ ಸನ್‌ರೈಸ್‌ನ ಅಧ್ಯಕ್ಷ ದಿನಕರ ಪಟೇಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಉಪಾಧ್ಯಕ್ಷ ಪ್ರಕಾಶ ಆರ್.ಖಾರ್ವಿ ಶುಭ ಹಾರೈಸಿದರು.

ವಿದ್ಯಾನಿಧಿ ಯೋಜನೆಯ ಸಂಚಾಲಕ ಜಿ.ಪುರುಷೋತ್ತಮ ಆರ್ಕಾಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಚೇತನ ಖಾರ್ವಿ ಸಂದೇಶ ವಾಚಿಸಿದರು. ಯೋಜನೆಯ ಗೌರವ ಕಾರ್ಯದರ್ಶಿ ಜಿ.ಎನ್.ಸತೀಶ ಖಾರ್ವಿ ವರದಿ ವಾಚಿಸಿದರು. ಸಜಿತ್ ಬಿ. ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಉಪನ್ಯಾಸಕ ನರೇಂದ್ರ ಎಸ್.ಗಂಗೊಳ್ಳಿ ಕಾರ್ಯಕ್ರಮ ನಿರೂಪಿಸಿದರು. ಗೌರವ ನಿರ್ದೇಶಕ ಸೌಪರ್ಣಿಕ ಬಸವ ಖಾರ್ವಿ ವಂದಿಸಿದರು.

Leave a Reply

Your email address will not be published. Required fields are marked *

eighteen + four =