ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಲ್ಲಿನ ಪಂಚವರ್ಣ ಯುವಕ ಮಂಡಲದ ವತಿಯಿಂದ ಪ್ರತಿವರ್ಷ ನವೆಂಬರ್ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಕೊಡಮಾಡುವ ಪ್ರತಿಷ್ಠಿತ ಪಂಚವರ್ಣ ರಾಜ್ಯೋತ್ಸವ ಪುರಸ್ಕಾರ ಈ ಬಾರಿ ಯಕ್ಷಗಾನ ಕ್ಷೇತ್ರದಲ್ಲಿ ಅಗಾಧ ಸಾಧನೆಗೈದ ಹಿರಿಯ ಯಕ್ಷಗುರು, ವಿಶ್ವವಿಖ್ಯಾತ ಸಾಲಿಗ್ರಾಮ ಮಕ್ಕಳ ಮೇಳ ಯಜಮಾನ ಎಚ್. ಶ್ರೀಧರ ಹಂದೆ ಅವರನ್ನು ಆಯ್ಕೆಗೊಳಿಸಲಾಗಿದೆ.
ಕೋಟದ ವರುಣ ತೀರ್ಥಕೆರೆ ಸಮೀಪ ಅಮೃತೇಶ್ವರಿ ಪಾರ್ಕಿಂಗ್ ಪ್ರದೇಶದಲ್ಲಿ ನಡೆಯುವ ಕಾರ್ಯಕ್ರಮ ಈ ಬಾರಿ ಕೋವಿಡ್ ದಿಸೆಯಲ್ಲಿ ಕೋಟದ ವಾಸುದೇವ ಮಂಟಪದಲ್ಲಿ ಕೋವಿಡ್ ನಿಯಮದಂತೆ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಇದೇ ಬರುವ ನ.5ರ ಸಂಜೆ5.3೦ಕ್ಕೆ ಪುರಸ್ಕಾರ ಸಮಾರಂಭ ನಡೆಯಲಿದ್ದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರದಾನ ಮಾಡಲಿದ್ದಾರೆ.
ಕುಂದಾಪುರ ತಾಲೂಕಿನ ಕ್ರೀಯಾಶೀಲ ಯುವಕ ಮಂಡಲ ಗೋಪಾಡಿ ಇವರಿಗೆ ಪಂಚವರ್ಣ ವಿಶೇಷ ಪುರಸ್ಕಾರ, ಉಡುಪಿಯ ಸಮಾಜಿಕ ಕಾರ್ಯಕರ್ತ ನಿತ್ಯಾನಂದ ವಳಕಾಡು ಇವರಿಗೆ ವಿಶೇಷ ಅಭಿನಂದನೆ, ಕೋಟದ ಕದ್ರಿಕಟ್ಟು ಯುವ ಕೃಷಿಕ ಶೀಲರಾಜ ಕಾಂಚನ್ ಇವರಿಗೆ ಯುವ ಕೃಷಿಕ ಗೌರವ, ಖೇಲೋ ಇಂಡಿಯಾ ಖ್ಯಾತಿಯ ಅಥ್ಲೆಟಿಕ್ ಪಟು ಅಖಿಲೇಷ್ ಇವರಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ.
ಸಾಂಸ್ಕ್ರತಿಕ ಕಾರ್ಯಕ್ರಮದ ಸಲುವಾಯ ರಾತ್ರಿ 8ಕ್ಕೆ ಭಾಸ್ಕರ ಕೃಪಾ ಯಕ್ಷಕಲಾ ತಂಡ ಬಸ್ರೂರು ಪುಟಾಣಗಳಿಂದ ’ಕದಂಬ ಕೌಶಿಕೆ’ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಎಂದು ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.