ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಎಮ್.ಐ.ಟಿ ಕುಂದಾಪುರ ಇದರ ಪ್ರಥಮ ವರ್ಷದ ಎಂಬಿಎ ವಿದ್ಯಾರ್ಥಿಗಳಿಗೆ ಕೋಟದ ಕಾರಂತ ಥೀಮ್ ಪಾರ್ಕ್‌ನಲ್ಲಿ ಆಯೋಜಿಸಿದ ಪಂಚಾಯತ್‌ಗೆ ಎಂಬಿಎ ವಿದ್ಯಾಥಿಗಳ ಕೊಡುಗೆ ಎಂಬ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಾಗಾರ ನಡೆಯಿತು.
ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಆಪ್ತ ಸಹಾಯಕ ಹರೀಶ್ ಕುಮಾರ್ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಯಾವುದೇ ಕಠಿಣ ಪರಿಸ್ಥಿತಿಯಲ್ಲಿ ಕುಗ್ಗದೇ ಆತ್ಮವಿಶ್ವಾಸ ಮೈಗೂಡಿಸಿಕೊಂಡಾಗ ಬದುಕಿನ ಯಶಸ್ಸಿನ ಜೀವನದ ಮೈಲಿಗಲ್ಲು ಏರಲು ಸಾಧ್ಯ ಎಂದು ತಿಳಿಸಿದರು.
ತಮ್ಮ ವಿದ್ಯಾರ್ಥಿ ಜೀವನದಲ್ಲೇ ನಾಯಕತ್ವ ಗುಣ ಬೆಳೆಸಿಕೊಂಡು, ಸಮಾಜಕ್ಕೆ ತಮ್ಮಿಂದಾದ ಸೇವೆಯನ್ನು ಸಲ್ಲಿಸುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು, ಪಂಚಾಯತ್ ಮಟ್ಟದಲ್ಲಿ ತಮ್ಮಿಂದ ಅನಾಗರಿಕರಿಗೆ, ಅನಕ್ಷರಸ್ಥರಿಗೆ ನಾವು ಹೇಗೆ ನೆರವಾಗಬಹುದೆಂಬ ಮಾಹಿತಿ ನಮ್ಮಲ್ಲಿ ಇದ್ದು ಸದೃಢ ಸಮಾಜದ ನಿರ್ಮಾಣದ ಪರಿಕಲ್ಪನೆ ನಮ್ಮಲ್ಲಿರಬೇಕು ಎಂದರು.
ಈ ಸಂದರ್ಭದಲ್ಲಿ ಕಾರಂತ ಥೀಮ್ ಪಾರ್ಕ್‌ನ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮ, ಕಾಲೇಜಿನ ಡೀನ್ ಮತ್ತು ವಿಭಾಗದ ಮುಖ್ಯಸ್ಥೆ ಡಾ. ಪ್ರತಿಭಾ ಪಾಟೇಲ್, ಪ್ರಾಧ್ಯಪಕರಾದ ಪ್ರೊ.ಅಮೃತ್‌ಮಲ, ಪ್ರೊ. ಕಾವ್ಯ ಉಪಸ್ಥಿತರಿದ್ದರು.