ಪಂಚಾಯತ್ ಚುನಾವಣೆ: ಪೋಲಿಸರು, ಚುನಾವಣಾ ಸಿಬ್ಬಂದಿಗಳು ರೆಡಿ

Call us

Call us

ಕುಂದಾಪುರ: ಗ್ರಾಮ ಪಂಚಾಯತ್ ಚುನಾವಣೆಯ ಪೂರ್ವ ತಯಾರಿಗಳು ಭರದಿಂದ ಸಾಗಿದ್ದು ಸುವ್ಯವಸ್ಥಿತಗಾಗಿ ಚುನಾವಣೆ ನಡೆಸಲು  ಚುನಾವಣಾಧಿಕಾರಿಗಳು ಸಜ್ಜಾಗಿ ನಿಂತಿದ್ದಾರೆ. ಶಾಂತಿಯುವ ಮತದಾನಕ್ಕಾಗಿ ನಡೆಸಲು ಪೊಲೀಸ್ ಇಲಾಖೆ ನಿನ್ನೆ ಸಂಜೆಯಿಂದಲೇ ಸಜ್ಜಾಗಿ ನಿಂತಿದ್ದರೇ, ಚುನಾವಣಾಧಿಕಾರಿಗಳು, ಸಹಾಯಕ ಕಮೀಷನರ್ ಹಾಗೂ ತಾಲೂಕು ತಹಶೀಲ್ದಾರರು ತಂಡ ಚುನಾವಣೆಗಾಗಿ ಸಕಲ ರೀತಿಯ ವ್ಯವಸ್ಥೆಗಳನ್ನೂ ಮಾಡಿದೆ.

Call us

Call us

Visit Now

ಕುಂದಾಪುರದಲ್ಲಿ ಪೊಲೀಸರು ಬುಧವಾರ ಸಂಜೆ ಸಭೆ ನಡೆಸಿದರು ನಡೆಸಿದರು. ವಿವಿಧೆಡೆಯಿಂದ ಬಂದ 450 ಕ್ಕೂ ಅಧಿಕ ಪೊಲೀಸರು ಹಾಗೂ ಗೃಹರಕ್ಷಕ ದಳದ ಸಿಬ್ಬಂಧಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ಡರು.

Click here

Call us

Call us

ಒಟ್ಟು 25 ಪಂಚಾಯತ್‌ಗಳನ್ನು ನಕ್ಸಲ್ ಪೀಡಿತ, 16 ಅತೀ ಸೂಕ್ಷ್ಮ, 36 ಸೂಕ್ಷ್ಮ 214 ಸಾಮಾನ್ಯ ಮತಗಟ್ಟೆಗಳು ಎಂದು ಗುರುತಿಸಲಾಗಿದೆ.

ಗ್ರಾಮಪಂಚಾಯತ್ ಚುನಾವಣೆ ಹಿನ್ನೆಲೆ ಕೆ.ಎಸ್.ಆರ್.ಪಿ. ತುಕಡಿಗಳು, ಡಿ.ಎ.ಆರ್. ವಾಹನ, ನಕ್ಸಲ್ ಪೀಡಿತ ಪ್ರದೇಶಕ್ಕೆ ಆರ್ಮಡ್ ಪೊಲೀಸ್ ಗಾರ್ಡ್, ಆಂಟಿ ಸಬೂಟೇಜ್ ಟೀಮ್ (ಎ.ಸಿ.) ನಿಯೋಜಿಸಲಾಗಿದೆ. ಅಲ್ಲದೇ ಒಬ್ಬರು ಡಿವೈಎಸ್ಪಿ, 6 ಇನ್ಸ್‌ಪೆಕ್ಟರ್, 20 ಸಬ್ ಇನ್ಸ್‌ಪೆಕ್ಟರ್, 32 ಎ.ಎಸ್.ಐ. ಸೇರಿದಂತೆ ಹೆಡ್‌ಕಾನ್ಸ್‌ಟೇಬಲ್, ಪೇದೆಗಳು, ಮಹಿಳಾ ಪೊಲೀಸರು ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಗಳನ್ನು ತಾಲೂಕಿನಾದ್ಯಂತ ನಿಯೋಜಿಸಲಾಗಿದೆ.

ಇನ್ನೂ ಚುನಾವಣೆಗಾಗಿ 800ಕ್ಕೂ ವಿಕ್ಕಿ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು. ಇಂದು ಬೆಳಿಗ್ಗೆ ಮತಪೆಟ್ಟಿಗೆ ಹಾಗೂ ಇನ್ನಿತರ ಚುನಾವಣಾ ಸಲಕರಣೆಗಳನ್ನು ಹೊತ್ತು ಮತಗಟ್ಟೆಗಳಿಗೆ ತೆರಳಿದ್ದಾರೆ.

ಬುಧವಾರ ಸಂಜೆ ಕುಂದಾಪುರದಲ್ಲಿ ನಡೆದ ರೋಲ್‌ಕಾಲ್ ಸಂದರ್ಭ ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ಬೈಂದೂರು ವೃತ್ತನಿರೀಕ್ಷಕ ಸುದರ್ಶನ್, ಉಪನಿರೀಕ್ಷಕರುಗಳಾದ ನಾಸೀರ್ ಹುಸೇನ್, ರವಿ, ಸಂತೋಷ್ ಕಾಯ್ಕಿಣಿ, ದೇಜಪ್ಪ, ಜಯಂತ್, ದೇವೇಂದ್ರ, ಜಯ ಮೊದಲಾದವರಿದ್ದರು.

_MG_6170 _MG_6256

Leave a Reply

Your email address will not be published. Required fields are marked *

12 + 6 =