ಪಡುಕರೆ ಬೀಚ್ ನಲ್ಲಿ ಮರೀನಾ ನಿರ್ಮಾಣ: ಜಿಲ್ಲಾಧಿಕಾರಿ ಸೂಚನೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಪಡುಕರೆ ಬೀಚ್ ನಲ್ಲಿ ಮರೀನಾ ನಿರ್ಮಾಣ ಕುರಿತಂತೆ ಕಾರ್ಯ ಸಾಧ್ಯತಾ ವರದಿ ( ಫಿಸಿಬಲಿಟಿ ರಿಪೋರ್ಟ್) ಪಡೆಯುವ ಕುರಿತಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಅಧ್ಯಕ್ಷತೆಯಲ್ಲಿ , ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.

Click Here

Call us

Call us

ಪಡುಕರೆ ತೀರದಲ್ಲಿ ನೈಸರ್ಗಿಕ ದ್ವೀಪಗಳಿದ್ದು, ಸುಮಾರು 1.66 ಕಿಮೀ ನಿಂದ 2 ಕಿಮೀ ವರೆಗೆ ಬ್ರೇಕ್ ವಾಟರ್ ನಿರ್ಮಿಸಿ, 3.69 ಕಿಮೀ ಜಾಗದಲ್ಲಿ ಮರೀನಾ ನಿರ್ಮಿಸಬಹುದಾಗಿದ್ದು, ಈ ಕುರಿತಂತೆ ಪುಣೆಯ ಸಿ.ಡಬ್ಲೂಯ.ಪಿ.ಆರ್.ಎಸ್ ನಿಂದ ಕಾರ್ಯ ಸಾಧ್ಯತಾ ವರದಿಯನ್ನು ಪಡೆದು, ನಂತರ ವಿಸ್ತೃತಾ ಯೋಜನಾ ವರದಿ ತಯಾರಿಸುವಂತೆ ತಿಳಿಸಿದ ಜಿಲ್ಲಾಧಿಕಾರಿ ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಮೂಲಕ ಈ ಕಾರ್ಯವನ್ನು ಕೈಗೊಳ್ಳುವಂತೆ ತಿಳಿಸಿದರು.

Click here

Click Here

Call us

Visit Now

ಇಡೀ ಭಾರತದಲ್ಲಿ ಪೂರ್ಣ ಪ್ರಮಾಣದ ಮರೀನಾ ಇಲ್ಲವಾಗಿದ್ದು, ಉಡುಪಿಯ ಪಡುಕರೆಯಲ್ಲಿ ಮರೀನಾ ನಿರ್ಮಾಣವಾದಲ್ಲಿ  ಜಾಗತಿಕ ಪ್ರವಾಸಿ ತಾಣದಲ್ಲಿ ಗುರುತಿಸಿಕೊಳ್ಳುವುದರ ಜೊತೆಗೆ, ವಿಫುಲ ಉದ್ಯೋಗವಕಾಶಗಳು ಮತ್ತು ರಾಜ್ಯದ ಪ್ರವಾಸೋಧ್ಯಮ ಬೆಳವಣಿಗೆಗೆ ಅತ್ಯಂತ ಪ್ರಮುಖ ಕೊಡುಗೆಯಾಗಲಿದೆ ಎಂದ ಜಿಲ್ಲಾಧಿಕಾರಿಗಳು, ಸ್ಥಳೀಯ ಪರಿಸರಕ್ಕೆ ಯಾವುದೇ ಹಾನಿಯಾದಗಂತೆ, ಸಿ,ಆರ್.ಝಡ್. ನಿಮಯಮಗಳ ಉಲ್ಲಂಘನೆಯಾಗದಂತೆ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದರು.

ಮರಿನಾ ಯೋಜನೆಯಿಂದಾಗಿ ವಿವಿಧ ಮಾದರಿಯ ದೋಣಿಗಳು ವಿಹಾರ ನೌಕೆಗಳು ಮತ್ತು ಮನೋರಂಜನಾ ವಿಹಾರ ದೋಣಿಗಳು ತಂಗಲು ಸಾಧ್ಯವಾಗಲಿದ್ದು, ತೇಲುವ ಸೇತುವೆ ಹೋಟೆಲ್, ರೆಸ್ಟೋರೆಂಟ್ ಮನೆ ನಿರ್ಮಾಣ, ಹಾಗೂ ವಿವಿಧ ಮಳಿಗೆಗಳನ್ನು ಸ್ಥಾಪಿಸಿ ಆದಾಯ ಗಳಿಸಬಹುದು ಮರೀನಾ ಇದು ವಿಶಿಷ್ಠ ಯೋಜನೆಯಾಗಿದ್ದು, ಭಾರತದಲ್ಲಿ ಯಾವುದೇ ವಿಶ್ವ ವರ್ಗದ ಮರೀನಾ ಇಲ್ಲ, ಪ್ರಸ್ತುತ ಕೊಚ್ಚಿನ್ ಮಾತ್ರ ಮರೀನಾ ಹೊಂದಿದ್ದು, ಅದೂ ಕೂಡಾ ಅಂತಾರಾಷ್ಟ್ರೀಯ ಬೋಟ್ ಮತ್ತು ವಿಹಾರ ನೌಕೆಗಳನ್ನು ಉಳಿಸಿಕೊಳ್ಳುವ ಸೌಲಭ್ಯಗಳು ಇಲ್ಲ, ವಿವಿಧ ಕಾರಣಗಳಿಂದಾಗಿ ವಿದೇಶಿ ನೌಕೆಗಳು ಅರಬ್ಬೀ ಸಮುದ್ರ ಮಾರ್ಗವಾಗಿ ದಕ್ಷಿಣ ಏಷ್ಯಾ ದೇಶಗಳಿಗೆ ಸಾಗಿ ಅಲ್ಲಿಯೇ ಲಂಗರು ಹಾಕುತ್ತವೆ, ಒಂದು ವರ್ಷದಲ್ಲಿ ಸುಮಾರು 4000 ನೌಕೆಗಳು ಈ ಮಾರ್ಗದಲ್ಲಿ ಸಾಗಲಿದ್ದು, ಈ ಮಾರ್ಗದಲ್ಲಿ ಸೂಕ್ತ ಮರೀನಾ ದ ಕೊರೆತೆಯಿದೆ. ಪಡುಕೆರೆಯಲ್ಲಿ ನಿರ್ಮಾಣವಾಗುವ ಮರೀನಾ ಗೆ ಅಂದಾಜು 800 ಕೋಟಿ ವೆಚ್ಚವಾಗಲಿದೆ ಎಂದರು.

ಕಾರ್ಯ ಸಾಧ್ಯತಾ ವರದಿ ಮತ್ತು ವಿಸ್ತೃತಾ ಯೋಜನಾ ವರದಿಯನ್ನು ಪೆಬ್ರವರಿ ಒಳಗೆ ನೀಡಿದಲ್ಲಿ,ಮುಂದಿನ ಬಜೆಟ್ ನಲ್ಲಿ ಮರೀನಾ ನಿರ್ಮಾಣ ಕುರಿತಂತೆ ಅಗತ್ಯ ಅನುಮತಿಯನ್ನು ಪಡೆಯಲು ಸಾಧ್ಯವಾಗಲಿದೆ ಎಂದು ಶಾಸಕ ರಘುಪತಿ ಭಟ್ ಹೇಳಿದರು.

Call us

ಮರೀನಾ ಅನುಷ್ಠಾನ ಕುರಿತಂತೆ ಕಾರ್ಯ ಸಾಧ್ಯತಾ ವರದಿ ಮತ್ತು ವಿಸ್ತೃತಾ ಯೋಜನಾ ವರದಿಯನ್ನು ಶೀಘ್ರದಲ್ಲಿ ಪಡೆಯಲು ಪ್ರಯತ್ನಿಸಲಾಗುವುದು ಹಾಗೂ ಅಗತ್ಯವಿರುವ ಎಲ್ಲಾ ಸಹಕಾರವನ್ನು ನೀಡಲಾಗುವುದು ಎಂದು ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದರು.

ಮರೀನಾ ಅನುಷ್ಠಾನ ಕುರಿತ ಪ್ರಾತ್ಯಕ್ಷಿಕೆ ವರದಿಯನ್ನು ಗೋವಾದ ಅಮೋಲ್ ಮರೈನ್ ಟೆಕ್ ನ ಮಿಲಿಂದ ಪ್ರಭು ವಿವರಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಸೋಮಶೇಖರ್ ಬರ್ಯಪ್ಪ ಕಮರೂರಮನೆ , ಪ್ರವಾಸೋದ್ಯಮ ಸಮಾಲೋಚಕ ಅಮಿತ್, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲೆಯ ಪ್ರಮುಖ ಪ್ರವಾಸೋದ್ಯಮ ಸಂಘಟನೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

3 × 2 =