ಪಡುಮುಂಡು ಕಲ್ಲುಗಣಪತಿ ದೇವಾಲಯಕ್ಕೆ ಚಿತ್ರನಟ ಶ್ರೀನಗರ ಕಿಟ್ಟಿ ಭೇಟಿ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕನ್ನಡ ಚಿತ್ರರಂಗದ ಡೈಮಂಡ್ ಸ್ಟಾರ್ ಖ್ಯಾತಿಯ ಖ್ಯಾತ ಚಿತ್ರ ನಟ ಶ್ರೀನಗರ ಕಿಟ್ಟಿ ಮೇ ೨ರಂದು ತನ್ನ ಗೆಳೆಯರೊಂದಿಗೆ ಪಡುಮುಂಡು ಕಲ್ಲುಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ, ಕಲ್ಲುಗಣಪತಿ ದೇವರಿಗೆ ಪೂಜೆ ಸಲ್ಲಿಸಿದರು.

Call us

Call us

Call us

ಅನಂತರ ಇಲ್ಲಿನ ಸುಂದರ ಪ್ರಕೃತಿ ಸೌಂದರ‍್ಯಕ್ಕೆ ಮನಸೋತು ಕೆಲಹೊತ್ತು ಅಲ್ಲಿಯೇ ವಿಶ್ರಾಂತಿ ಪಡೆದರು ಹಾಗೂ ಅಭಿಮಾನಿಗಳ ಜತೆ ಪೊಟೋಗೆ ಪೋಸ್ ನೀಡಿದರು.

ಈ ಸಂದರ್ಭ ಪತ್ರಕರ್ತರೊಂದಿಗೆ ಮಾತನಾಡಿದ ಕಿಟ್ಟಿ, ಗ್ರಾಮೀಣ ಪ್ರದೇಶದಲ್ಲಿ ಕಾಲ ಕಳೆಯುವುದು ನನಗೆ ತುಂಬ ಖುಷಿ ಎನಿಸುತ್ತದೆ ಹಾಗೂ ಇಲ್ಲಿನ ವಾತವರಣ ಕೂಡ ಉತ್ತಮವಾಗಿದೆ. ನಾನು ಇದುವರೆಗೆ ಈ ಭಾಗದಲ್ಲಿ ಇಂತಹ ಪ್ರೇಕ್ಷಣಿಯ ಸ್ಥಳವನ್ನು ನೋಡಿರಲಿಲ್ಲ. ಇಲ್ಲಿನ ಗುಹಾ ದೇವಾಲಯ ತುಂಬಾ ಪ್ರಶಾಂತವಾಗಿದೆ ಎಂದರು.

ಈ ಸಂದರ್ಭ ಸ್ಥಳೀಯ ಅಚ್ಲಾಡಿಯ ಸನ್‌ಶೈನ್ ಗೆಳೆಯರ ಬಳಗದ ವತಿಯಿಂದ ಕಿಟ್ಟಿ ಹಾಗೂ ಖ್ಯಾತ ಖಳನಟ ವಿಶ್ವ ಹಾಗೂ ಸಂಗಡಿಗರನ್ನು ಗೌರವಿಸಲಾಯಿತು.

ಸನ್‌ಶೈನ್ ಗೆಳೆಯರ ಬಳಗದ ಅಧ್ಯಕ್ಷ ಕಿರಣ್ ಕುಮಾರ್, ಗೌರವ ಸಲಹೆಗಾರ ಯೋಗೇಶ ಅಚ್ಲಾಡಿ, ಚಿತ್ತಚಂಚಲೆ ಚಿತ್ರದ ನಿರ್ದೇಶಕ ವೈ.ಕು.ಸುಂದರ್ ಎತ್ತಿನಟ್ಟಿ, ದೇವಾಲಯದ ಅರ್ಚಕ ಕೆ.ರಾಮಕೃಷ್ಣ ಅಡಿಗ, ಸುಶಾಂತ ಶೆಟ್ಟಿ ಹಾಗೂ ಊರಿನವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

five × two =