ಪಡುವರಿ: ಪಡುವಣ ಪ್ರೆಂಡ್ಸ್ ರಿ. ಪಡುವರಿ ನಾಟ್ಯೋತ್ಸವ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಪಡುವಣ ಪ್ರೆಂಡ್ಸ್ ರಿ. ಪಡುವರಿ ಇದರ 9 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಹಾಗೂ ನಾಟ್ಯೋತ್ಸವ ಸೋಮೇಶ್ವರ ಬೀಚ್ ರೋಡ್ ಪಡುವರಿಯಲ್ಲಿ ನಡೆಯಿತು.

Call us

Call us

ಕಾರ್ಪೋರೇಶನ್ ಬ್ಯಾಂಕ್ ಕೊಲ್ಲೂರು ಉದ್ಯಮಿ ಚಂದ್ರಶೇಖರ ನಾವಡ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಒಂದು ಊರಿನ ಅಭಿವೃದ್ದಿಯನ್ನು ಬಿಂಬಿಸುವಂತದ್ದು ಅಲ್ಲಿನ ಯುವಕರ ಕ್ರಿಯಾಶೀಲತೆಯಾಗಿದೆ. ಪಡುವಣ ಪ್ರೆಂಡ್ಸ್ ಸಂಸ್ಥೆ ಸಮಾಜಮುಖಿ ಚಿಂತನೆಗಳಿಂದ ಹಲವು ಜನಪರ ಕಾರ್ಯಗಳನ್ನು ರೂಪಿಸಿರುವುದು ಶ್ಲಾಘನೀಯವಾಗಿದೆ. ಇಂತಹ ಕಾರ್ಯಗಳು ನಿರಂತರವಾಗಿ ಮುಂದುವರಿಯಲಿ ಎಂದರು.

ಬೈಂದೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಸ್.ಮದನ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

Call us

Call us

ಮುಖ್ಯ ಅತಿಥಿಗಳಾಗಿ ಜಿಲ್ಲಾ ಕೆ.ಡಿ.ಪಿ ಸದಸ್ಯ ಎಸ್.ರಾಜು ಪೂಜಾರಿ, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಮಹಾಪ್ರಬಂಧಕ ಎನ್.ಕೃಷ್ಣ ಬಿಲ್ಲವ, ಶಾರದಾ ಕಾಲೇಜು ಬಸ್ರೂರು ಉಪನ್ಯಾಸಕ ಪಾಂಡುರಂಗ ಮೊಗೇರ್,ಎಲ್.ಐ.ಸಿ.ಚೇರ್‌ಮನ್ ಕ್ಲಬ್ ಮೆಂಬರ್ ಈಶ್ವರ ಕೆ.ಜಿ, ಶಿವಸೇನಾ ಮುಖಂಡ ಹರೀಶ್ ತೋಳಾರ್,ನಾಗರಾಜ ತಾಂಡೇಲ್ ಅಧ್ಯಕ್ಷರು ರಾಮಕ್ಷತ್ರೀಯ ಯುವಕ ಸಮಾಜ ಬಂದೂರು, ಭರತ್‌ಸಿಂಗ್, ಪಡುವಣ ಪ್ರೆಂಡ್ಸ್ ಪಡುವರಿ ಅಧ್ಯಕ್ಷ ಗುರುರಾಜ್ ಬಿ ಪಡುವರಿ ಉಪಸ್ಥಿತರಿದ್ದರು.

ಈಸಂದರ್ಭದಲ್ಲಿ ಭಾರತೀಯ ಭೂ ಸೇನೆಯ ಸತೀಶ ಮೊಗವೀರ ಹಾಗೂ ಶಿಕ್ಷಕರು ಹಾಗೂ ಪ್ರಗತಿಪರ ಕೃಷಿಕ ಮಂಜುನಾಥ ಡಿ.ಕೆ ಯವರನ್ನು ಸಮ್ಮಾನಿಸಲಾಯಿತು.

ಕಾರ್ಯದರ್ಶಿ ರಿತೇಶ್ ಪಿ ಸಂಘದ ವರದಿ ವಾಚಿಸಿದರು.

ಗೌರವಾಧ್ಯಕ್ಷ ಸುರೇಶ್ ಹೋಬಳಿದಾರ್ ಸ್ವಾಗತಿಸಿದರು. ಆಲಂದೂರು ಮಂಜುನಾಥ ಗಾಣಿಗ ಕಾರ್ಯಕ್ರಮ ನಿರ್ವಹಿಸಿದರು. ಸಂದೀಪ್ ವಂದಿಸಿದರು.

Leave a Reply

Your email address will not be published. Required fields are marked *

six + 18 =