ಪತಂಜಲಿ ಉತ್ಪನ್ನಗಳ ಮಳಿಗೆ ’ನಾಯಕ್ ಸ್ಟೋರ್ಸ್’ ಉದ್ಘಾಟನೆ

ಗಂಗೊಳ್ಳಿ : ಇಲ್ಲಿನ ಮುಖ್ಯರಸ್ತೆಯ ಕೆನರಾ ಬ್ಯಾಂಕ್ ಬಳಿ ಇರುವ ಕಟ್ಟಡದಲ್ಲಿ ಪತಂಜಲಿ ಉತ್ಪನ್ನಗಳ ಮಳಿಗೆ ’ನಾಯಕ್ ಸ್ಟೋರ‍್ಸ್’ನ ಉದ್ಘಾಟನೆ ಶನಿವಾರ ನಡೆಯಿತು.

ಕುಂದಾಪುರದ ಉದ್ಯಮಿ ಸುರೇಶ ಭಂಡಾರ್‌ಕಾರ್ ಅವರು ಪತಂಜಲಿ ಉತ್ಪನ್ನಗಳ ನೂತನ ಮಳಿಗೆಯನ್ನು ಉದ್ಘಾಟಿಸಿದರು. ಆಶೀರ್ವಚನ ನೀಡಿ ಮಾತನಾಡಿದ ವೇದಮೂರ್ತಿ ಜಿ.ವೇದವ್ಯಾಸ ಕೆ.ಆಚಾರ್ಯ ಅವರು, ದೇಶಾದ್ಯಂತ ಪತಂಜಲಿ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇದೆ. ಪತಂಜಲಿ ಉತ್ಪನ್ನಗಳು ಆರೋಗ್ಯಕ್ಕೆ ಉತ್ತಮವಾಗಿದ್ದು, ಇದನ್ನು ಜನರು ಹೆಚ್ಚೆಚ್ಚು ಬಳಸಬೇಕು. ಗಂಗೊಳ್ಳಿಯಲ್ಲಿ ಪತಂಜಲಿ ಉತ್ಪನ್ನಗಳು ದೊರೆಯುತ್ತಿರುವುದು ಶ್ಲಾಘನೀಯ ಎಂದರು.

ಕೆನರಾ ಬ್ಯಾಂಕಿನ ಗಂಗೊಳ್ಳಿ ಶಾಖಾ ಪ್ರಬಂಧಕ ಯು.ಜಗನ್ನಾಥ ಹಾಗೂ ಪತ್ರಕರ್ತ ಬಿ.ರಾಘವೇಂದ್ರ ಪೈ ಶುಭಾಶಂಸನೆಗೈದರು. ಎಂ.ಜಿ.ವಸಂತ ನಾಯಕ್ ಬೆಂಗಳೂರು, ವಿವೇಕ ಪೈ ಬೆಂಗಳೂರು, ಸೀಮಾ ಮೋಹನ ನಾಯಕ್, ಅಕ್ಷತಾ ವಿವೇಕ ಪೈ, ಎಂ.ಜಿ.ರಾಮಕೃಷ್ಣ ನಾಯಕ್, ಎಂ.ಜಿ.ನಾರಾಯಣ ನಾಯಕ್, ಜಿ.ರಾಧಾಕೃಷ್ಣ ನಾಯಕ್, ಉಮೇಶ ಕಾಮತ್, ಎನ್.ಮಾಲಾ ಕೆ.ನಾಯಕ್, ಮಳಿಗೆಯ ಮುಖ್ಯಸ್ಥ ಎಂ.ಜಿ. ಅಜಿತ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

3 × one =