ಪತ್ರಕರ್ತರು ವಿಶ್ವಮಾನ್ಯ ಧರ್ಮಕ್ಕೆ ಬದ್ಧರಾಗಿದ್ದಾಗ ಪ್ರಜಾಪ್ರಭುತ್ವದ ಸ್ತಂಭಗಳಿಗೆ ಶಕ್ತಿ: ಶಾಸಕ ಬಿಎಂಎಸ್

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ತಾಲ್ಲೂಕು ರಚನೆಯ ಹಿನ್ನೆಲೆಯಲ್ಲಿ ಹೊಸತಾಗಿ ಅಸ್ತಿತ್ವಕ್ಕೆ ಬಂದ ಕಾರ್ಯನಿರತ ಪತ್ರಕರ್ತರ ಸಂಘವನ್ನು ರೋಟರಿ ಸಮುದಾಯ ಭವನದಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಉದ್ಘಾಟಿಸಿದರು.

Call us

Call us

Visit Now

ಬಳಿಕ ಮಾತನಾಡಿದ ಅವರು ಪತ್ರಕರ್ತರು ತಮ್ಮ ವ್ಯಾಪ್ತಿಯ ಕುಂದು ಕೊರತೆಗಳ ಬಗ್ಗೆ ಸರ್ಕಾರ ಮತ್ತು ಜನಪ್ರತಿನಿಧಿಗಳ ಗಮನ ಸೆಳೆಯುವ ವರದಿಗಳ ಮೂಲಕ ಜನರ ನೋವಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

Click here

Call us

Call us

ಪ್ರಜಾತಂತ್ರದ ನಾಲ್ಕನೆಯ ಸ್ತಂಭ ಎಂದು ಪರಿಗಣಿಸಲಾಗುವ ಮಾಧ್ಯಮಗಳು ಅವುಗಳಿಗೆ ಸಂಬಂಧಿಸಿದ ವಿಶ್ವಮಾನ್ಯ ಧರ್ಮಕ್ಕೆ ಬದ್ಧವಾಗಿ ಕೆಲಸ ಮಾಡಿದರೆ ಉಳಿದ ಮೂರು ಸ್ತಂಭಗಳಿಗಿಂತ ಹೆಚ್ಚು ಶಕ್ತಿಯುತವೂ, ಪರಿಣಾಮಕಾರಿಯೂ ಆಗುತ್ತವೆ. ಇಂದು ಪತ್ರಿಕೆಗಳ್ನು ಓದುವವರ ಮತ್ತು ಅನ್ಯ ಸಮೂಹ ಮಾಧ್ಯಮಗಳನ್ನು ಅವಲಂಬಿಸುವವರ ಸಂಖ್ಯೆ ಅಗಾಧವಾಗಿ ಹೆಚ್ಚಿದೆ. ಅವರು ಅವುಗಳಿಂದ ನಿಷ್ಪಕ್ಷಪಾತ ನಿರ್ವಹಣೆಯನ್ನು ಅಪೇಕ್ಷಿಸುತ್ತಾರೆ ಎಂದು ಅವರು ನುಡಿದರು.

ಅತಿಥಿಯಾಗಿದ್ದ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಸಂಘ ರಚಿಸಿಕೊಂಡು ಸುಸಂಘಟಿತರಾಗಿರುವ ತಾಲ್ಲೂಕಿನ ಪತ್ರಕರ್ತರು ತಾಲ್ಲೂಕಿನ ಅಭಿವೃದ್ಧಿಗೆ ತಮ್ಮ ಕೊಡುಗೆ ನೀಡುವಂತಾಗಲಿ ಎಂದು ಆಶಿಸಿದರು.

ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶಪ್ರಸಾದ ಪಾಂಡೇಲು ಮಾಧ್ಯಮ ಕ್ಷೇತ್ರ ಈಗ ಎಡ-ಬಲಗಳೆಂದು ವಿಭಜನೆಗೊಂಡಿದೆ. ಅದರಿಂದಾಗಿ ತನ್ನ ಶಕ್ತಿ ಕಳೆದುಕೊಳ್ಳುತ್ತಿದೆ. ಅದು ತನ್ನ ನೈಜ ಹೊಣೆಯಾದ ಸಮುದಾಯದ ಒಳಿತು ಸಾಧಿಸುವ ಕಾರ್ಯ ನಡೆಸಬೇಕು ಎಂದರು.

ಇನ್ನೋರ್ವ ಅತಿಥಿ ಕುಂದಾಪುರ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ ದೇಶದಲ್ಲಿ ಪತ್ರಿಕಾ ಸ್ವಾತಂತ್ರ್ಯ ಮತ್ತು ಪತ್ರಕರ್ತರು ಅಪಾಯದಲ್ಲಿದ್ದಾರೆ. ಇಂತಹ ಸಂದರ್ಭ ಸಂಘಟನೆ ಬಲಗೊಳ್ಳಬೇಕು ಎಂದು ಹೇಳಿದರು.

ಸಂಘದ ಕೋಶಾಧಿಕಾರಿ ನರಸಿಂಹ ಬಿ. ನಾಯಕ್ ಸ್ವಾಗತಿಸಿದರು. ಅಧ್ಯಕ್ಷ ಎಸ್. ಜನಾರ್ದನ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕಾರಿ ಸಮಿತಿ ಸದಸ್ಯ ಸುನೀಲ್ ಎಚ್. ಜಿ. ವಂದಿಸಿದರು. ಜನಪ್ರತಿನಿಧಿಗಳು, ಸಂಘಟನೆಗಳ ಪ್ರಮುಖರು, ಉತ್ತರ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ ಸಮಾರಂಭದಲ್ಲಿ ಭಾಗವಹಿಸಿದ್ದರು.

 

Leave a Reply

Your email address will not be published. Required fields are marked *

15 − one =