ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ‘ಕ್ಲಾಸ್‌ರೂಂ ಟು ನ್ಯೂಸ್‌ರೂಮ್’ ವಿಶೇಷ ಕಾರ್ಯಾಗಾರ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದರೆ: ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ಸ್ನಾತಕೋತ್ತರ ವಿಭಾಗದ ವತಿಯಿಂದ ‘ಕ್ಲಾಸ್‌ರೂಮ್ ಟು ನ್ಯೂಸ್‌ರೂಮ್ ವಿಶೇಷ ಕಾರ್ಯಾಗಾರವನ್ನು ಆಯೋಜಿಸಲಾಯಿತು.

Click Here

Call us

Call us

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಹವ್ಯಾಸಿ ಪತ್ರಕರ್ತ ಚೈತನ್ಯ ಕುಡಿನಲ್ಲಿ ಪತ್ರಿಕಾ ಬರವಣಿಗೆ ಹಾಗೂ ಪುಟವಿನ್ಯಾಸದ ಕುರಿತು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಮಾಹಿತಿ ನೀಡಿದರು.

Click here

Click Here

Call us

Visit Now

ವಿದ್ಯಾರ್ಥಿಜೀವನದಲ್ಲಿ ಎಲ್ಲರೀತಿಯ ಕೌಶಲ್ಯಗಳನ್ನು ಬೆಳೆಸಿಕೊಂಡಾಗ ವೃತ್ತಿಜೀವನದಲ್ಲಿ ಸುಲಲಿತವಾಗಿ ಕೆಲಸ ಮಾಡಬಹುದು. ಪತ್ರಿಕೋದ್ಯಮ ತರಗತಿಗಳಿಂದ ವೃತ್ತಿಪರ ಮಾಧ್ಯಮದೆಡೆಗಿನ ಪಯಣದಲ್ಲಿ ಎಲ್ಲ ರೀತಿಯ ಕೌಶಲ್ಯವನ್ನು ಕಲಿತುಕೊಂಡಾಗ ಉತ್ತಮ ಪತ್ರಕರ್ತರಾಗಲು ಸಾಧ್ಯ. ಒಬ್ಬ ಪತ್ರಕರ್ತನಿಗೆ ವಿವಿಧ ವಿಷಯಗಳ ಅನುಭವ ಇರಬೇಕಾಗುತ್ತದೆ ಎಂದು ಅವರು ಸಲಹೆ ನೀಡಿದರು.

ಸೃಜನಶೀಲ ಹಾಗೂ ಸೃಜನೇತರ ಬರವಣಿಗೆ ಕುರಿತು ಮಾಹಿತಿ ನೀಡಿದ ಅವರು ಏನನ್ನೇ ವರದಿ ಮಾಡುವ ಮೊದಲು ಪೂರ್ವತಯಾರಿ ಮಾಡಿಕೊಳ್ಳಬೇಕು. ಯಾವುದೇ ಘಟನೆ ಸಂಭವಿಸಿದಾಗ ಅದನ್ನು ಯಥಾವತ್ತಾಗಿ ವರದಿ ಮಾಡುವ, ಓದುಗರಿಗೆ ಅದು ತಲುಪುವಂತೆ ಮಾಡುವ ಸಾಮರ್ಥ್ಯ ಒಬ್ಬ ಪತ್ರಕರ್ತನಿಗಿರಬೇಕು ಎಂದು ತಿಳಿಸಿದರು.

ಪತ್ರಿಕಾ ಪುಟ ವಿನ್ಯಾಸದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಅವರು ಪತ್ರಿಕೆಗಳನ್ನು ವಿನ್ಯಾಸಗೊಳಿಸುವ ಕೌಶಲ್ಯ, ಅಕ್ಷರ ಶೈಲಿ, ಅಕ್ಷರ ವಿನ್ಯಾಸ ಹಾಗೂ ಇನ್ನಿತರ ಟೂಲ್ಸ್ ಬಗ್ಗೆ ಮಾಹಿತಿ ನೀಡಿದರು. ಪುಟ ವಿನ್ಯಾಸದಲ್ಲಿ ಬಳಕೆಯಾಗುವ ತಲೆಬರಹ, ಮಗ್‌ಶಾಟ್, ಪ್ಯಾರಗ್ರಾಫ್, ಪ್ಯಾರಗ್ರಾಫ್‌ಗಾತ್ರ, ಫೋಟೊಗಳ ಬಗ್ಗೆ ಪ್ರಯೋಗಾತ್ಮಕ ಕಲಿಕೆ ಮಾಡಿಸಿದರು.

Call us

ಕಾರ್ಯಾಗಾರದಲ್ಲಿ ವಿಭಾಗದ ಸಂಯೋಜಕ ಪ್ರಸಾದ್ ಶೆಟ್ಟಿ, ಇತರ ಉಪನ್ಯಾಸಕರು, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

eighteen − 12 =