ಪರಿವರ್ತನ ಕೋಟದಲ್ಲಿ ಉಚಿತ ಮಾನಸಿಕ ಆರೋಗ್ಯ ತಪಾಸಣೆ ಮತ್ತು ಔಷಧ ವಿತರಣಾ ಶಿಬಿರ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಪರಿವರ್ತನ ಪುನರ್ ವಸತಿ ಕೇಂದ್ರ ಮತ್ತು ಮನಸ್ಮಿತಾ ಫೌಂಡೇಶನ್, ಕೋಟ ಇವರ ಆಶ್ರಯದಲ್ಲಿ ಕೋಟದ ಪರಿವರ್ತನ ಪುನರ್ ವಸತಿ ಕೇಂದ್ರದಲ್ಲಿ ೧೭ನೇ ಉಚಿತ ಮಾನಸಿಕ ಆರೋಗ್ಯ ತಪಾಸಣೆ ಮತ್ತು ಔಷಧ ವಿತರಣೆ ಶಿಬಿರ ನಡೆಯಿತು.

Call us

Call us

Call us

ಕೋಟ ಸಿ.ಎ ಬ್ಯಾಂಕ್‌ನ ಅಧ್ಯಕ್ಷರಾದ ತಿಮ್ಮ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿ, ಮಾನಸಿಕ ರೋಗವು ಒಂದು ಸಾಮಾಜಿಕ ಕಳಂಕವೆಂದು ಭಾವಿಸದೆ ಮನೋ ವೈದ್ಯರ ಚಿಕಿತ್ಸೆಯನ್ನು ಪಡೆಯುವ ಪ್ರವೃತ್ತಿ ಇಂದು ಜನರಲ್ಲಿ ಹೆಚ್ಚುತ್ತಿದೆ ಹಾಗೂ ಅವರಿಗೂ ಮತ್ತು ಅವರ ಕುಟುಂಬದವರಿಗೂ ಮಾನಸಿಕ ನೆಮ್ಮದಿ ಸಿಗುವಂತಾಗುತ್ತಿದೆ ಎಂದು ಹೇಳಿದರು.

ಮುಖ್ಯ ಅಥಿತಿಗಳಾಗಿ ಭಾಗವಹಿಸಿದ ಶ್ರೀಮತಿ ದೇವಕಿ .ಕೆ. ಶೆಟ್ಟಿ (ಅಧ್ಯಕ್ಷರು ಲಯನೆಸ್ ಕ್ಲಬ್ ಬ್ರಹ್ಮಾವರ ಬಾರ್ಕೂರು) ಇವರು ಮಾತನಾಡಿ ಮಾನಸಿಕ ಸಮಸ್ಯೆಗಳನ್ನು ಮುಚ್ಚಿಡದೆ ಆದಷ್ಟು ಶ್ರೀಘ್ರದಲ್ಲಿ ವೈದ್ಯರಿಗೆ ತೋರಿಸಿ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ ಎಂದು ಅಭಿಪ್ರಾಯ ಪಟ್ಟರು. ಶ್ರೀಮತಿ ಶಕುಂತಲಾ ಶೆಟ್ಟಿ (ನಿವೃತ್ತ ನರ್ಸಿಂಗ್ ಸೂಪರಿಂಟೆಂಡೆಂಟ್) ಇವರು ಈ ಪರಿಸರದ ಜನರು ಶಿಬಿರದ ಪ್ರಯೋಜನ ಪಡೆಯಬೇಕೆಂದು ತಿಳಿಸಿದರು.

ಪರಿವರ್ತನ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ. ಪ್ರಕಾಶ್ ಸಿ. ತೋಳರ್ ರವರು ಮಾತನಾಡಿ, ಈ ಶಿಬಿರವನ್ನು ಪ್ರತಿ ತಿಂಗಳು ಆಯೋಜಿಸಲಾಗುತ್ತಿದೆ. ಬಡ ರೋಗಿಗಳು ಔಷಧ ಮುಂದುವರಿಸಲು ಮತ್ತು ಇದರ ಸದುಪಯೋಗವನ್ನು ಪಡೆದುಕೊಳ್ಳಲು ತಿಳಿಸಿದರು.

ಮನಸ್ಮಿತ ಫೌಂಡೇಶನನ ನಿರ್ದೇಶಕರಾದ ಸವಿತಾ. ಪಿ ತೋಳಾರ್ ಉಪಸ್ಥಿತರಿದ್ದರು. ಆಪ್ತ ಸಮಾಲೋಚಕರಾದ ಅನುಷಾ ಶೆಟ್ಟಿ ಸ್ವಾಗತಿಸಿದರು. ಸಂಸ್ಥೆಯ ವೈದ್ಯಕೀಯ ನಿರ್ದೇಶಕರಾದ ಪ್ರಕಾಶ್ ಸಿ. ತೋಳಾರ್ ವಂದಿಸಿದರು.

Leave a Reply

Your email address will not be published. Required fields are marked *

15 + 10 =