ಪರಿವರ್ತನ ಕೋಟ: ಉಚಿತ ಮಾನಸಿಕ ಆರೋಗ್ಯ ತಪಾಸಣಿ ಮತ್ತು ಔಷಧ ವಿತರಣಾ ಶಿಬಿರ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಪರಿವರ್ತನ ಪುನರ್ವಸತಿ ಕೇಂದ್ರ, ಕೋಟ ಮತ್ತು ಮನಸ್ಮಿತಾ ಫೌಂಡೇಶನ್, ಕೋಟ ಇವರ ಆಶ್ರಯ ಹಾಗೂ ಭಾರತೀಯ ಜನತಾ ಪಾರ್ಟಿ, ಹಿಂದುಳಿದ ವರ್ಗಗಳ ಮೋರ್ಚಾ, ಕುಂದಾಪುರ ಘಟಕ ಇವರ ಸಹಯೋಗದಲ್ಲಿ ಎ.೦೫ರಂದು ಕೋಟದ ಪರಿವರ್ತನ ಪುನರ್ವಸತಿ ಕೇಂದ್ರದಲ್ಲಿ 18ನೇ ಮಾಸಿಕ ಉಚಿತ ಮಾನಸಿಕ ಆರೋಗ್ಯ ತಪಾಸಣೆ ಮತ್ತು ಔಷಧ ವಿತರಣೆ ಶಿಬಿರ ನಡೆಯಿತು.

Call us

Call us

Visit Now

ಪರಿವರ್ತನ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ. ಪ್ರಕಾಶ್ ಸಿ. ತೋಳರ್ ರವರು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಈ ಶಿಬಿರವನ್ನು ಪ್ರತಿ ತಿಂಗಳು ಆಯೋಜಿಸಲಾಗುತ್ತಿದ್ದು, ಬಡ ರೋಗಿಗಳು ತಮ್ಮ ಚಿಕಿತ್ಸೆ ಹಾಗೂ ಔಷಧಗಳನ್ನು ಮುಂದುವರಿಸಲು ಮತ್ತು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿ ದಾನಿಗಳ ಸಹಕಾರಕ್ಕಾಗಿ ಅವರನ್ನು ಅಭಿನಂದಿಸಿದರು.

Click Here

Click here

Click Here

Call us

Call us

ಕುಂದಾಪುರ ಪುರಸಭೆ ಉಪಾಧ್ಯಕ್ಷರಾದ ರಾಜೇಶ್ ಕಾವೇರಿ, ಕಾರ್ಯಕ್ರಮವನ್ನು ಉದ್ಘಾಟಿಸಿ, ಜೀವನದಲ್ಲಿ ಅವಿಭಕ್ತ ಕುಟುಂಬ ಪದ್ಧತಿ, ನಗು ಮತ್ತು ಸಂತೋಷದ ಮಹತ್ವ ಹಾಗೂ ಮಾನಸಿಕ ರೋಗಗಳಿಗೆ ಬೇಕಾಗುವ ಚಿಕಿತ್ಸೆಗಳ ಮಹತ್ವವನ್ನು ತಿಳಿಸಿ ಎಲ್ಲರೂ ಮಾನಸಿಕ ಆರೋಗ್ಯ ಹೊಂದಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಜಿಲ್ಲಾ ಪಂಚಾಯತ್ ಸದಸ್ಯ ರಾಘವೇಂದ್ರ ಕಾಂಚನ್ ಭಾರತೀಯ ಜನತಾ ಪಾರ್ಟಿ ಉಡುಪಿ ಜಿಲ್ಲೆ ಓ ಬಿ ಸಿ ಘಟಕದ ಪ್ರಧಾನ ಕಾರ್ಯದರ್ಶಿ ವಿಠ್ಠಲ್ ಪೂಜಾರಿ, ಭಾರತೀಯ ಜನತಾ ಪಾರ್ಟಿ ಕುಂದಾಪುರ ಕ್ಷೇತ್ರ ಓ ಬಿ ಸಿ ಘಟಕದ ಅದ್ಯಕ್ಷ ರವೀಂದ್ರ ತಿಂಗಳಾಯ ಉಪಸ್ತಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪರಿವರ್ತನ ಪುನರ್ವಸತಿ ಕೇಂದ್ರದ ನಿರ್ವಹಣಾಧಿಕಾರಿಗಳಾದ ಡಾ. ಸತೀಶ್ ಪೂಜಾರಿಯವರು ಶಿಬಿರ ಸಾಗಿಬಂದ ಹಾದಿ ಹಾಗೂ ಈ ಶಿಬಿರಗಳನ್ನು ಮುಂದುವರೆಸಿಕೊಂಡು ಹೋಗಲು ಸಮಾಜದಲ್ಲಿರುವ ಗಣ್ಯರ ಸಹಕಾರ ಹಾಗೂ ಭಾಗವಹಿಸುವಿಕೆಯ ಅವಶ್ಯಕತೆ ಇದೆ ಎಂದು ಅಭಿಪ್ರಾಯ ಪಟ್ಟರು. ಕಾರ್ಯಕ್ರಮದಲ್ಲಿ ಭಾರತೀಯ ಜನತಾ ಪಾರ್ಟಿ ಹಿಂದುಳಿದ ವರ್ಗಗಳ ಮೋರ್ಚಾ ಕುಂದಾಪುರ ಘಟಕದ ಪದಾಧಿಕಾರಿಗಳೂ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ನಿರೂಪಣೆ ಮತ್ತು ಸ್ವಾಗತವನ್ನು ಪರಿವರ್ತನ ಸಂಸ್ಥೆಯ ಆಪ್ತ ಸಮಾಲೋಚಕರಾದ ಮಹ್ಮದ್‌ಶಾ ರವರು ಹಾಗೂ ವಂದನಾರ್ಪಣಿಯನ್ನು ಕೇಂದ್ರದ ಆಪ್ತ ಸಮಾಲೋಚಕಿಯರಾದ ಅನುಷಾ ಶೆಟ್ಟಿಯವರು ನಿರ್ವಹಿಸಿದರು.

Leave a Reply

Your email address will not be published. Required fields are marked *

three × five =