ಪರಿಸರವಾದಿ ಮಾಧವ್ ಗಾಡ್ಗೀಳ್‌ಗೆ ಟೇಲರ್ ಪ್ರಶಸ್ತಿ

Call us

ಖ್ಯಾತ ಪರಿಸರವಾದಿ ಮಾಧವ್ ಗಾಡ್ಗೀಳ್ ಅವರಿಗೆ ಪ್ರತಿಷ್ಠಿತ 2015ನೇ ಸಾಲಿನ ‘ದಿ ಟೇಲರ್ ಅವಾರ್ಡ್’ ಪ್ರಶಸ್ತಿ ಸಂದಿದೆ. ಈ ಪುರಸ್ಕಾರಕ್ಕೆ ಭಾಜನರಾದ ಮೂರನೇ ಭಾರತೀಯ ಎಂಬ ಹೆಗ್ಗಳಿಕೆ ಗಾಡ್ಗೀಳ್ ಪಾತ್ರರಾಗಿದ್ದಾರೆ. ಈ ಹಿಂದೆ ತಮಿಳುನಾಡು ಮೂಲದವರಾದ ಕೃಷಿ ವಿಜ್ಞಾನಿ ಎಂ.ಎಸ್.ಸ್ವಾಮಿನಾಥನ್ ಅವರಿಗೆ 1991ರಲ್ಲಿ ಹಾಗೂ ಸಾಗರ ಹಾಗೂ ಭೂ ವಿಜ್ಞಾನಿ ವೀರಭದ್ರನ್ ರಾಮನಾಥನ್ ಅವರಿಗೆ 2009ರಲ್ಲಿ ಈ ಪ್ರಶಸ್ತಿ ದೊರೆತಿದೆ.

Call us

Call us

ಪರಿಸರ ಕ್ಷೇತ್ರದಲ್ಲಿನ ಅಮೋಘ ಸೇವೆಗಾಗಿ ಪುಣೆ ಮೂಲದ ಗಾಡ್ಗೀಳ್ ಅವರಿಗೆ ಈ ಗೌರವ ಲಭಿಸಿದೆ. ಸರಿಸುಮಾರು 1.24 ಕೋಟಿ ರೂ. ನಗದು ಹಾಗೂ ಪದಕವನ್ನೊಳಗೊಂಡ (2 ಲಕ್ಷ ಡಾಲರ್) ಪ್ರಶಸ್ತಿಯನ್ನು ಗಾಡ್ಗೀಳ್ ಅವರು ಅಮೆರಿಕದ ಮಹಿಳಾ ಸಾಧಕಿ, ಒರೆಗಾನ್ ಸ್ಟೇಟ್ ಯೂನಿವರ್ಸಿಟಿಯ ಸಾಗರ ವಿಜ್ಞಾನಿ ಡಾ.ಜೇನ್ ಲುಬ್ಚಿನೋ ಅವರೊಂದಿಗೆ ಹಂಚಿಕೊಳ್ಳಲಿದ್ದಾರೆ. ಲಾಸ್ ಏಂಜಲೀಸ್‌ನ ಬಿವರ್ಲಿ ಹಿಲ್ಸ್‌ನಲ್ಲಿ ಏಪ್ರಿಲ್ 23ರಂದು ನಡೆಯುವ ಕಾರ‌್ಯಕ್ರಮದಲ್ಲಿ ಇವರಿಬ್ಬರಿಗೂ ಜಂಟಿಯಾಗಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಭಾರತದಲ್ಲಿ ಪರಿಸರ ಸಂರಕ್ಷಣೆಯಲ್ಲಿನ ನಾಯಕತ್ವ ಹಾಗೂ ಸುಸ್ಥಿರ ಅಭಿವೃದ್ಧಿ ಕುರಿತ ನಿಯಮಾವಳಿಗಳನ್ನು ರೂಪಿಸುವಲ್ಲಿ ಗಾಡ್ಗೀಳ್ ಅವರದ್ದು ದೊಡ್ಡ ಸಾಧನೆ. ಅದರಲ್ಲೂ ಕಾಡುವಾಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಾಕಷ್ಟು ಮೃತುವರ್ಜಿ ವಹಿಸಿರುವುದು ವಿಶೇಷ ಎಂದು ಪ್ರಶಸ್ತಿ ಆಯ್ಕೆ ಮಂಡಳಿ ಗುಣಗಾನ ಮಾಡಿದೆ.

Call us

Call us

ಪ್ರಶಸ್ತಿ ಹಿನ್ನೆಲೆ ವಿವರ: ಅಮೆರಿಕದ ಪರಿಸರವಾದಿಗಳಾದ ಜಾನ್ ಮತ್ತು ಅಲೀಸ್ ಟೇಲರ್ ಅವರಿಂದ 1973ರಲ್ಲಿ ‘ದಿ ಟೇಲರ್ ಪ್ರೈಜ್ ಫಾರ್ ಎನ್ವೈರನಮೆಂಟಲ್ ಅಚೀವ್‌ಮೆಂಟ್ ಅವಾರ್ಡ್’ ಪ್ರಶಸ್ತಿ ಆರಂಭಗೊಂಡಿದ್ದು, ಅಂತಾರಾಷ್ಟ್ರೀಯ ಟೇಲರ್ ಪ್ರೈಸ್ ಎಕ್ಸ್‌ಕ್ಯೂಟಿವ್ ಕಮಿಟಿಯಿಂದ ಆಯ್ಕೆಗೊಳಪಡುತ್ತದೆ. ಜತೆಗೆ ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಆಡಳಿತಾತ್ಮಕ ಬೆಂಬಲವನ್ನು ಪಡೆಯಲಾಗುತ್ತದೆ. ಪರಿಸರ ವಿಜ್ಞಾನ, ಪರಿಸರ ಸಂರಕ್ಷಣೆ ಹಾಗೂ ಇಂಧನ ಕ್ಷೇತ್ರದಲ್ಲಿ ವೈಯಕ್ತಿಕವಾಗಿ ದೊಡ್ಡ ಸಾಧನೆ ಮಾಡಿದ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಪ್ರಶಸ್ತಿಯು ನಗದು ಹಾಗೂ ಪದಕವನ್ನು ಹೊಂದಿದೆ.

Leave a Reply

Your email address will not be published. Required fields are marked *

5 × four =