ಪರಿಸರ ಪ್ರೇಮ ಬೆಳೆದರೆ ಪರಿಸರದ ಉಳಿವು: ಡಾ. ಕಾಶಿನಾಥ ಪೈ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಪರಿಸರವನ್ನು ಉಳಿಸಿಬೆಳೆಸುವಲ್ಲಿ ಯುವಶಕ್ತಿಯ ಪಾತ್ರ ಅತ್ಯಂತ ಮಹತ್ವದ್ದು. ವಿದ್ಯಾರ್ಥಿಗಳು ಪರಿಸರ ಪ್ರೇಮವನ್ನು ಬೆಳೆಸಿಕೊಳ್ಳುವುದರ ಜೊತೆಗೆ ಇತರರಲ್ಲೂ ಆ ಬಗೆಗ
ಪ್ರಜ್ಞೆಯನ್ನು ಮೂಡಿಸಬೇಕು ಎಂದು ಜಿ.ಎಸ್.ವಿ.ಎಸ್ ಅಸೋಷಿಯೇಶನ್ನಿನ ಅಧ್ಯಕ್ಷರಾದ ಡಾ.ಕಾಶಿನಾಥ ಪೈ ಅಭಿಪ್ರಾಯಪಟ್ಟರು

Call us

Call us

ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಪರಿಸರದ ಅರಿವು ನೆರವು ಕಾರ‍್ಯಕ್ರಮದಲ್ಲಿ
ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು.

ವಿದ್ಯಾರ್ಥಿ ಪ್ರತಿನಿಧಿಗಳಾದ ನಿಶ್ಮಿತಾ ಮತ್ತು ಅನುಷಾ ಶೆಣೈ ಪರಿಸರ ರಕ್ಷಣೆಯ ಕುರಿತಂತೆ ವಿಚಾರಗಳನ್ನು ಮಂಡಿಸಿ ನಮ್ಮ ದಿನನಿತ್ಯದ ಸಣ್ಣ ಪುಟ್ಟ ಚಟುವಟಿಕೆಗಳಲ್ಲಿಯೂ ಕೂಡ
ಪರಿಸರಕ್ಕೆ ಪೂರಕವಾದ ಅಂಶಗಳನ್ನು ಅಳವಡಿಸಿಕೊಳ್ಳಬೇಕು. ಇರುವ ಪರಿಸರವನ್ನು ರಕ್ಷಿಸಿಕೊಳ್ಳುವುದು ನಮ್ಮ ಪ್ರಥಮ ಆದ್ಯತೆಯಾಗಬೇಕು ಎಂದು ಹೇಳಿದರು

Call us

Call us

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಕವಿತಾ ಎಮ್ ಸಿ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು.ವಿದ್ಯಾರ್ಥಿನಿ ಆಶಾ ಪ್ರಾರ್ಥಿಸಿದರು. ನಾಗರಾಜ ನಾಯಕ್ ಕಾರ‍್ಯಕ್ರಮ
ನಿರೂಪಿಸಿದರು. ನಾಗೇಂದ್ರ ಮೊಗವೀರ ವಂದಿಸಿದರು.
ವರದಿ : ನರೇಂದ್ರ ಎಸ್ ಗಂಗೊಳ್ಳಿ.

Leave a Reply

Your email address will not be published. Required fields are marked *

twenty − 13 =