ಪರಿಸರ ರಕ್ಷಣೆಯ ಜಾಗೃತಿ ಮೂಡದಿದ್ದರೇ ಮನುಕುಲಕ್ಕೆ ಕಂಟಕ: ಮಂಜುನಾಥ ಖಾರ್ವಿ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮೀತಿ ಮೀರಿದ ಬೇಕು ಬೇಡಗಳನ್ನು ಒಳಗೊಳ್ಳುತ್ತಾ ಸದ್ಯದ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವ ಧಾವಂತದಲ್ಲಿ ನಿರಂತರ ಪ್ರಕೃತಿ ನಾಶದತ್ತ ಮುಖಮಾಡಿರುವ ಮಾನವ ಅರ್ಥವಿಲ್ಲದ ಬದುಕು ಬದುಕುತ್ತಿದ್ದಾನೆ. ಇಂದಿನಿಂದಲೇ ಜಾಗೃತಗೊಳ್ಳದಿದ್ದರೇ ಮುಂದೊಂದು ದಿನ ಅದು ಮನುಕುಲದ ನಾಶಕ್ಕೆ ಕಾರಣವಾಗಬಹುದು ಎಂದು ಉಪ್ಪುಂದ ಸರಕಾರಿ ಪದವಿಪೂರ್ವ ಕಾಲೇಜು ಎಸ್‌ಡಿಎಂಸಿ ಉಪಾಧ್ಯಕ್ಷ ಮಂಜುನಾಥ ಖಾರ್ವಿ ಹೇಳಿದರು.

Call us

ಅವರು ರೋಟರಿ ಕ್ಲಬ್ ಬೈಂದೂರು ಆಶ್ರಯದಲ್ಲಿ ಸರಕಾರಿ ಪದವಿಪೂರ್ವ ಕಾಲೇಜು ಉಪ್ಪುಂದದ ಹರಿದ್ರಾ ಇಕೋ ಕ್ಲಬ್ ಸಹಯೋಗದೊಂದಿಗೆ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಶಾಲೆಯಲ್ಲಿ ಗೀಡ ನೆಟ್ಟು, ವನಮಹೋತ್ಸವ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ದೇವರು ನೀಡಿರುವ ಪ್ರಕೃತಿಯನ್ನು ಮುಂದಿನ ಪೀಳಿಗೆಗೂ ತಲುಪುವಂತೆ ಮಾಡುವುದು ಅಗತ್ಯವಾಗಿದೆ. ಇಲ್ಲದೇ ಹೋದರೆ ಮುಂದಾಗಲಿರುವ ದುರಂತಕ್ಕೆ ನಾವುಗಳೇ ಕಾರಣರಾಗಲಿದ್ದೇವೆ ಎಂದರು.

Call us

ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಬೈಂದೂರು ಅಧ್ಯಕ್ಷ ಕೃಷ್ಣಪ್ಪ ಶೆಟ್ಟಿ ಮಾತನಾಡಿ ವಿದ್ಯಾರ್ಥಿಗಳಿಗೆ ಪರಿಸರದ ಮಹತ್ವ ಅರಿಕೆಯಾದರೆ ಮಾತ್ರ ಅದರ ಉಳಿವು ಸಾಧ್ಯವಿದೆ. ನನ್ನೂರಿನ ಕೆರೆಗಳು ಬತ್ತುತ್ತಿವೆ. ಮರಗಳು ಮನುಷ್ಯನ ದಾಹಕ್ಕೆ ನೆಲಕ್ಕುರುಳುತ್ತಿವೆ. ಮುಂದೊಂದು ದಿನ ಜೀವಜಲಕ್ಕಾಗಿ ಪರಿತಪಿಸುವ ಸಂದರ್ಭ ಬರಬಾರದು. ಇಂದಿನಿಂದಲೇ ಎಚ್ಚರ ವಹಿಸುವುದು ಅಗತ್ಯ ಎಂದರು.

ಬೈಂದೂರು ಉಪವಲಯ ಅರಣ್ಯಾಧಿಕಾರಿ ಸದಾಶಿವ ಅವರು ಅರಣ್ಯ ರಕ್ಷಣೆಯ ಕುರಿತು ಮಾತನಾಡಿದರು. ಸ.ಪ.ಪೂ ಕಾಲೇಜಿನ ಪ್ರಾಂಶುಪಾಲ ಸೀತಾರಾಮ ಮಯ್ಯ, ಪ್ರಭಾರ ಉಪಪ್ರಾಂಶುಪಾಲ ಮಂಜು ಎ. ಪೂಜಾರಿ, ರೊಟೇರಿಯನ್ ಗೋಪಾಲ ಮೊದಲಾದವರು ಉಪಸ್ಥಿತರಿದ್ದರು. ಮಂಜುನಾಥ ಮಹಲೆ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

5 × 1 =