ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ: ಗಣಪತಿ ಹೋಬಳಿದಾರ್

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ವಲಯದ ಸ. ಹಿ. ಪ್ರಾ. ಶಾಲೆ ವಸ್ರೆ ಯಲ್ಲಿ ಪರಿಸರ ಸಂರಕ್ಷಣೆಯ ಜಾಗೃತಿ ಮತ್ತು ಮಾಹಿತಿ ಕಾರ್ಯಕ್ರಮವನ್ನು ಬೈಂದೂರು ವಿಭಾಗದ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರು, ಮತು ಶಿಕ್ಷಕ ಗಣಪತಿ ಹೋಬಳಿದಾರ್ ಉದ್ಘಾಟಿಸಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ, ಇಂದಿನ ಮಕ್ಕಳೆಲ್ಲಿ ಪೋಷಕರು ಈ ಬಗ್ಗೆ ಜಾಗೃತಿಯನ್ನು ಮೂಡಿಸಿ ಎಂದು ತಿಳಿಸಿದರು .

Call us

ವಸ್ರೆ ಒಕ್ಕೂಟದ ಅಧ್ಯಕ್ಷರಾದ ರಾಮ ಗಾಣಿಗರವರು ಅಧ್ಯಕ್ಷತೆಯನ್ನು ವಹಿಸಿದರು . ಶ್ರೀ . ಕ್ಷೇ. ಧ . ಗ್ರಾ. ಯೋಜನೆಯ ಮೇಲ್ವಿಚಾರಕರಾದ ಪ್ರಕಾಶ್ರವರು ಪ್ರತಿಯೊಬ್ಬ ವ್ಯಕ್ತಿ ತಮ್ಮ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಂಡರೆ ನಮ್ಮ ಪರಿಸರ ಸ್ವಚ್ಚವಾಗಿರುತ್ತದೆಂದು ಪ್ರಾಸ್ತವಿಕ ಮಾತನ್ನು ಆಡಿದರು.

ಸಭೆಯಲ್ಲಿ ಶಿಕ್ಷಕರಾದ ವೆಂಕಟೇಶ್‌ರವರು ಒಕ್ಕೂಟದ ಪದಾಧಿಕಾರಿಗಳಾದ ಸುಮಲತಾ, ನಾಗರತ್ನ, ಲಕ್ಷಣ ಗಾಣಿಗ ಉಪಸ್ಥಿತರಿದ್ದರು.
ಗ್ರಾಮದ ಸೇವಾಪ್ರತಿನಿಧಿಯಾದ ಶೋಭಾ ಕಾರ್ಯಕ್ರಮವನ್ನು ನಿರೂಪಿಸಿದರು. ಗೋಪಾಲ ಪೂಜಾರಿಯವರು ಸ್ವಾಗತಿಸಿದರು, ಮತ್ತು ಸುಬ್ಬಯ್ಯ ಸರ್ವರನ್ನು ವಂದಿಸಿದರು.

Leave a Reply

Your email address will not be published. Required fields are marked *

1 × 1 =