ಪಾಂಡೇಶ್ವರ ರಕ್ತೇಶ್ವರಿ ದೇವಳದ ವರ್ಧಂತ್ಯುತ್ಸೋವ: ಸಾಧಕರಿಗೆ ಸನ್ಮಾನ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಸಾಧನೆ ಎಂಬುವುದು ಪರಿಶ್ರಮದ ಮೂಲಕ ಹೊರಬರುವ ಮೇರು ಶಕ್ತಿ ಅದನ್ನು ಸಮರ್ಪಕವಾಗಿ ಬಳಸಿಕೊಂಡು ಇತರರಿಗೆ ಮಾದರಯಾಗಿ ಬದುಕಬೇಕು ಎಂದು ಪಾಂಡೇಶ್ವರ ರಕ್ತೇಶ್ವರಿ ದೇವಳದ ಧರ್ಮದರ್ಶಿ ಜ್ಯೋತಿಷ್ಯಿ ಕೆ.ವಿ ರಮೇಶ್ ರಾವ್ ಹೇಳಿದರು.

Click here

Click Here

Call us

Call us

Visit Now

Call us

Call us

ಅವರು ಪಾಂಡೇಶ್ವರದ ರಕ್ತೇಶ್ವರಿ, ನಾಗಾಧಿಪರಿವಾರ ದೇವಳದ ವರ್ಧಂತ್ಯುತ್ಸೋವದಲ್ಲಿ ಹಮ್ಮಿಕೊಳ್ಳಲಾದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸಾಧಕರಿಗೆ ಗೌರವಾರ್ಪಣೆ ನೀಡಿ ಮಾತನಾಡಿದರು.

ಈ ಸಮಾಜದಲ್ಲಿ ಹಲವು ರೀತಿಯ ಸಾಧಕರಿದ್ದಾರೆ. ಅವರವರ ಭಾವಕ್ಕೆ ಸರಿಯಾಗಿ ವಿವಿಧ ಕ್ಷೇತ್ರಗಳಲ್ಲಿ ಮುಂಚೂಣಿಗೆ ಬರುತ್ತಾರೆ. ಅದು ಇತರರಿಗೆ ಸ್ಪೂತಿದಾಯಕವಾಗಿ ನಿಲ್ಲುವಂತ್ತಿರಬೇಕು. ಅಲ್ಲದೆ ನಾವು ನೀಡುವ ಗೌರವ ಅರ್ಥಪೂರ್ಣವಾಗಿರಬೇಕು ತಮ್ಮ ಜೀವಿತ ಅವಧಿಯಲ್ಲಿ ಮರೆಯಲಾಗದ ದಿನಗಳನ್ನು ನೆನಪಿಸುವಂತೆ ಗೌರವಿಸಬೇಕು ಆಗಮಾತ್ರ ಅಂತಹ ಕಾರ್ಯಕ್ರಮಗಳ ಅರ್ಥಗರ್ಭಿತವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ರಕ್ತೇಶ್ವರಿ ವರ್ಧಂತಿ ಸಾಧಕ ಪುರಸ್ಕಾರವನ್ನು ಸಾಮಾಜಿಕ ಸೇವೆಗಾಗಿ ರಕ್ತದಾನಿ ದಿನೇಶ್ ಬಾಂಧವ್ಯ, ಆಟೋ ಚಾಲಕ ಶಂಭು ಪೂಜಾರಿ, ಮೆಸ್ಕಾಂ ಇಲಾಖೆಯ ಮಾಲಿಕ್ ಮುಜಾವರ್, ಪರಿಸರಸ್ನೇಹಿ ಯುವಕ ಮಂಡಲ ಕೋಟ ಪಂಚವರ್ಣ ಯುವಕ ಮಂಡಲ, ಶೌರ್ಯಪ್ರಶಸ್ತಿ ಪುರಸ್ಕ್ರತ ನಮನ ಕುಮಾರಸ್ವಾಮಿ ಇವರುಗಳನ್ನು ಗುರುತಿಸಿ ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ದೇವಳದ ಧರ್ಮದರ್ಶಿ ಕೆ.ವಿ ರಮೇಶ್ ರಾವ್, ಪತ್ರಕರ್ತ ರವೀಂದ್ರ ಕೋಟ, ರಕ್ತೇಶ್ವರಿ ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ವಿ.ನಾರಾಯಣ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರಕ್ತೇಶ್ವರಿ ಬಳಗದ ಅಭಿಜಿತ್ ಪಾಂಡೇಶ್ವರ ಸ್ವಾಗತಿಸಿ ನಿರೂಪಿಸಿ ವಂದಿಸಿದರು.

Call us

Leave a Reply

Your email address will not be published. Required fields are marked *

one − 1 =