ಪಾಕ್‌ ಬಳಿ ಭಾರತಕ್ಕಿಂತಲೂ ಹೆಚ್ಚು ಅಣ್ವಸ್ತ್ರ!

ಪಾಕಿಸ್ತಾನದ ಬತ್ತಳಿಕೆಯಲ್ಲಿ 120 ಅಣುಬಾಂಬ್‌ಗಳಿದ್ದು, ಭಾರತಕ್ಕಿಂತಲೂ 10ರಷ್ಟು ಹೆಚ್ಚು ಬಾಂಬ್‌ಗಳನ್ನು ಹೊಂದಿದೆ ಎಂದು ಪರಮಾಣು ವಿಜ್ಞಾನಿಗಳ ವರದಿಯೊಂದು ತಿಳಿಸಿದೆ.

ಚಿಕಾಗೋ ಯುನಿವರ್ಸಿಟಿಯ ವಿಜ್ಞಾನಿಗಳು 1945ರಲ್ಲಿ ಸ್ಥಾಪಿಸಿದ್ದ ಈ ನಿಯತಕಾಲಿಕ, ಜಗತ್ತಿನ 9 ಅಣ್ವಸ್ತ್ರ ದೇಶಗಳ ಪರಮಾಣು ಬಾಂಬ್‌ಗಳ ಇತಿಹಾಸದ ಚಿತ್ರಣವನ್ನು ಕಟ್ಟಿಕೊಟ್ಟಿದೆ.

‘ದ ನ್ಯೂಕ್ಲಿಯರ್‌ ಇಂಟರಾಕ್ಟಿವ್ ಇನ್ಫೋಗ್ರಾಫಿಕ್‌’ ಹೆಸರಿನ ಈ ನಿಯತಕಾಲಿಕ 1987ರಿಂದೀಚೆಗಿನ ಜಗತ್ತಿನ ಎಲ್ಲ ಬಗೆಯ ಅಣ್ವಸ್ತ್ರಗಳ ಮಾಹಿತಿಯನ್ನು ಕಲೆಹಾಕಿದೆ.

1980ರ ದಶಕದಲ್ಲಿ 65,000ಕ್ಕೂ ಹೆಚ್ಚು ಅಣ್ವಸ್ತ್ರಗಳು ಜಗತ್ತಿನಲ್ಲಿದ್ದವು. ಆದರೆ ನಂತರದ ದಿನಗಳಲ್ಲಿ ಅಣ್ವಸ್ತ್ರಗಳ ಸಂಖ್ಯೆ 10,000ಕ್ಕೆ ಕುಸಿಯಿತು. ಹಾಗಿದ್ದರೂ ಕೆಲವು ದೇಶಗಳು ಹೊಸ ಅಣ್ವಸ್ತ್ರಗಳನ್ನು ನಿರ್ಮಿಸುತ್ತಲೇ ಇವೆ ಎಂದು ವರದಿ ಹೇಳಿದೆ.

ಇನ್ಫೋಗ್ರಾಫಿಕ್‌ ಪ್ರಕಾರ, ಅಮೆರಿಕ ಮತ್ತು ರಷ್ಯಾ ತಲಾ 5,000 ಅಣ್ವಸ್ತ್ರಗಳನ್ನು ಹೊಂದಿವೆ.

ಫ್ರಾನ್ಸ್‌ 300, ಚೀನಾ 250, ಯುನೈಟೆಡ್‌ ಕಿಂಗ್‌ಡಂ 225 ಮತ್ತು ಇಸ್ರೇಲ್‌ 80 ಅಣ್ವಸ್ತ್ರಗಳನ್ನು ಹೊಂದಿವೆ. ಉತ್ತರ ಕೊರಿಯಾ 2006, 2009 ಮತ್ತು 2013ರಲ್ಲಿ ಅಣ್ವಸ್ತ್ರಗಳ ಪರೀಕ್ಷೆ ನಡೆಸಿತ್ತು.

Leave a Reply

Your email address will not be published. Required fields are marked *

11 + thirteen =