ಪಾವನ ರತ್ನ ಯಕ್ಷಗಾನ ಪ್ರದರ್ಶನ ಉದ್ಘಾಟನೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಕೋಟ: ಪಂಚವರ್ಣ ಯುವಕ ಮಂಡಲ ರಿ. ಕೋಟ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ, ಕಲಾಪೀಠ ಕೋಟ ರಿ. ಇವರಿಂದ ಗುಂಡ್ಮಿ ಪಿ.ಜಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಪಾವನ ರತ್ನ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮವನ್ನು ಸಾಸ್ತಾನ ಐರೋಡಿಯ ತಾಲೂಕು ಪಂಚಾಯತ್ ಸದಸ್ಯೆ ಜ್ಯೋತಿ ಉದಯ್ ಕುಮಾರ್ ಉದ್ಘಾಟಿಸಿದರು.

Call us

Call us

Call us

ಈ ಸಂದರ್ಭದಲ್ಲಿ ಮಾತನಾಡಿ ಹಿಂದೆ ಬರೇ ಯಕ್ಷಗಾನವನ್ನು ಮೇಳಗಳ ತಿರುಗಾಟದಲ್ಲಿ ನೋಡುತ್ತಿದ್ದೇವು ಆದರೆ ಅದು ಇಂದು ಯುವ ಯಕ್ಷ ಕುಡಿಗಳಿಂದ ನೋಡುತ್ತಿರುವುದು ಮುಂದಿನ ಪೀಳಿಗೆಗೆ ಸ್ಪೂರ್ತಿದಾಯಕವಾಗಿದೆ. ಯಕ್ಷಗಾನ ಉಳಿಸಿ ಬೇಳೆಸುವಲ್ಲಿ ಯುವಕರ ಪಾತ್ರ ಗಣನೀಯವಾದದ್ದು ಈ ನಿಟ್ಟಿನಲ್ಲಿ ಗುರುಗಳ ಪ್ರೇರಣೆಯೊಂದಿಗೆ ಯಕ್ಷಗಾನದ ಸದಭಿರುಚಿಯನ್ನು ತಮ್ಮ ರಕ್ತದಲ್ಲಿ ಮೈಗೂಡಿಸಿ ಕೊಂಡಿದ್ದು ಪ್ರಶಂಸನೀಯ.ಈ ಕಾರ್ಯ ನಿರಂತರವಾಗಿ ನೆಡೆಯುವಂತಾಗಲಿ ಎಂದು ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಪಿ.ಜಿ. ಹಿರಿಯ ಪ್ರಾಥಮಿಕ ಶಾಲೆಯ ಆಡಳಿತಾಧಿಕಾರಿ ನಾಗೇಶ ಮೈಯ, ಹಾಗೂ ಯಕ್ಷಗಾನ ಹಿತ ಚಿಂತಕಾರದ ಗುಂಡ್ಮಿಯ ವೆಂಕಟರಮಣ ನಾವುಡರು ,ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲ ಅಧ್ಯಕ್ಷ ರವೀಂದ್ರ ಕೋಟ ವಹಿಸಿದರು. ಕಲಾಪೀಠದ ಸಂಚಾಲಕ ಕೆ. ನರಸಿಂಹ ತುಂಗ ಪ್ರಾಸ್ತಾವನೆ ಗೈದು ಸ್ವಾಗತಿಸಿದರು. ಪಂಚವರ್ಣದ ಕಾರ್ಯದರ್ಶಿ ಅಜಿತ್ ಆಚಾರ್ಯ ವಂದಿಸಿದರು. ಕಾರ್ಯಕ್ರಮವನ್ನು ಶಿಕ್ಷಕ ಶ್ರೀಧರ ಶಾಸ್ತ್ರಿ ನಿರೂಪಿಸಿದರು.

Leave a Reply

Your email address will not be published. Required fields are marked *

11 + thirteen =