ಪಿಯುಸಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ಬೈಂದೂರು ತಾಲೂಕಿನ ವಿದ್ಯಾರ್ಥಿಗಳಿಗೆ ಸನ್ಮಾನ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ನಮ್ಮ ನಾಡ ಒಕ್ಕೂಟ ಬೈಂದೂರು ಘಟಕ ನಾಖುದಾ ವೆಲ್ಫೇರ್ ಅಸೋಸಿಯೇಷನ್ ಶಿರೂರು ಇವರ ಸಹಯೋಗದಲ್ಲಿ ವಿಧ್ಯಾರ್ಥಿಗಳಿಗೆ ಸನ್ಮಾನ ಹಾಗೂ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಇಲ್ಲಿನ ಶಿರೂರಿನ ಮದ್ರಸಾ ಮಿಫ್ತಾ ಉಲ್ ಉಲೂಮ್ ಸಭಾಂಗಣದಲ್ಲಿ ನಡೆಯಿತು.

Call us

Call us

Call us

Call us

ಬೈಂದೂರು ತಾಲೂಕಿನ ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ 19 ವಿಧ್ಯಾರ್ಥಿಗಳನ್ನು ನಮ್ಮ ನಾಡ ಒಕ್ಕೂಟ ಬೈಂದೂರು ತಾಲೂಕು ಘಟಕದ ವತಿಯಿಂದ ಸನ್ಮಾನಿಸಲಾಯಿತು.

ಸನ್ಮಾನಿಸಲ್ಪಟ್ಟ ಪಿಯುಸಿ ವಿಧ್ಯಾರ್ಥಿಗಳು:
ಮುಹಮ್ಮದ್ ಸಮಾನ್ ಶೇಖ್ಜಿ, ಶಿರೂರು (98%) ಮುಹಮ್ಮದ್ ಉವೇಝ್ ಕೆ. ಹಳಗೇರಿ (97%) ಹಮ್ದಾನ್ ಕಾರಾನಿ ಶಿರೂರು (97%) ಅಲ್ ರಿಫಾ (96%) ಮುಹಮ್ಮದ್ ಸುಲೈಮ್ ತಾರಾಪತಿ, ಬೈಂದೂರು (94.5%) ಬಿ.ಬಿ. ನಮೀರಾ, ಶಿರೂರು (94%) ಕಾಪ್ಸಿ ಮುಹಮ್ಮದ್ ಇರ್ಬಾಝ್, ಶಿರೂರು (93%) ಮಫೂಝಾ, (90.3%) ಗಂಗೊಳ್ಳಿ ಮುಹಮ್ಮದ್ ಫಾಹಿಕ್ (90%) ಶಮೀಮ್ ಬಾನು (89.3%)

ಸನ್ಮಾನಿಸಲ್ಪಟ್ಟ ಎಸ್‌ಎಸ್‌ಎಲ್‌ಸಿ ವಿಧ್ಯಾರ್ಥಿಗಳು:
ರಮೀನ್ ಕಾರಾನಿ, ಶಿರೂರು (98.2%) ನಮೀರಾ ಸಾನಿಯಾ, (96.2%) ಚೌ ನಹ್ರೀನ್, (93%) ಟಿ. ಅಬ್ದುಲ್ ಸಿಮಾನ್, ಬೈಂದೂರು (92%) ಮುಸ್ಕಾನ್ ಪರಿ, ಶಿರೂರು (90%) ಸೌಹಾ ಫಾತಿಮಾ, ಶಿರೂರು (89.2%) ಶೇಖ್ ಮುಹಮ್ಮದ್ ಅಫ್ನಾನ್, ಗೊಳಿಹೊಳೆ (89%) ಆಯಿಷಾ ನೌರಿನ್, ನಾಗೂರು (89%) ಝಾಯಿಗದ್ಕಾರ್ ಫಿಝಾ ಅಂಬರ್, ಶಿರೂರು (89%). ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಸೆಂಟ್ರಲ್ ಕಮಿಟಿ ಸಂಘಟನಾ ಕಾರ್ಯದರ್ಶಿ ಹುಸೇನ್ ಹೈಕಾಡಿ, ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೌ/ ಝಮೀರ್ ಅಹ್ಮದ್ ರಶಾದಿ, ನಮ್ಮ ನಾಡ ಒಕ್ಕೂಟ ಬೈಂದೂರು ತಾಲೂಕು ಘಟಕದ ಅಧ್ಯಕ್ಷರಾದ ಅಬ್ದುಲ್ ಸಮೀ ಹಳಗೇರಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾಧ್ಯಕ್ಷರಾದ ಜನಾಬ್ ಮುಷ್ತಾಕ್ ಅಹ್ಮದ್ ಬೆಳ್ವೆ, ಜಿಲ್ಲಾ ಉಪಾಧ್ಯಕ್ಷರಾದ ಮುಜಾವರ್ ಅಬು ಮುಹಮ್ಮದ್ ಕುಂದಾಪುರ, ಜಿಲ್ಲಾ ಜೊತೆ ಕಾರ್ಯದರ್ಶಿ ಸಯ್ಯದ್ ಅಜ್ಮಲ್ ಶಿರೂರು, ಜಿಲ್ಲಾ ಸಮಿತಿ ಸದಸ್ಯರಾದ ಶಾಬಾನ್ ಹಂಗಳೂರು, ಝಕ್ರಿಯಾ ಅಂಬಾಗಿಲು, ತಾಲೂಕು ಕಾರ್ಯದರ್ಶಿ ಅಲ್ತಾಫ್ ಮುಕ್ರಿ ಶಿರೂರು, ತಾಲೂಕು ಸಂಚಾಲಕರಾದ ಮುಹಮ್ಮದ್ ಹುಸೇನ್ ಪರಿ ಶಿರೂರು, ಮಸ್ಜಿದ್ ಎ ಅಬ್ದುಲ್ಲಾ ತಲಾಯಿ ಶಿರೂರು ಅಧ್ಯಕ್ಷರಾದ ಅಬೂಬಕರ್ ಸಾಹೇಬ್ ಹಾಗೂ ಇತರರು ಉಪಸ್ಥಿತರಿದ್ದರು.

ಕುರ್ ಆನ್ ಪಠಣದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ತಾಲೂಕು ಉಪಾಧ್ಯಕ್ಷರಾದ ಮಮ್ದು ಇಬ್ರಾಹಿಮ್ ಸಾಹೇಬ್ ಸ್ವಾಗತ ಮತ್ತು ನಿರೂಪಣೆಯನ್ನು ಮಾಡಿದರು.

Leave a Reply

Your email address will not be published. Required fields are marked *

20 − 8 =