ಪಿಯು ಪ್ರಶ್ನೆಪತ್ರಿಕೆ ಲೀಕೌಟ್: ಕುಂದಾಪುರದಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ದ್ವಿತೀಯ ಪಿಯುಸಿಯ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಮತ್ತೆ ಲೀಕೌಟ್ ಆಗಿರುವುದನ್ನು ಖಂಡಿಸಿ ಕುಂದಾಪುರ ವಿವಿಧ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಳು ಮಿನಿವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಿದರು.

Call us

Click Here

Click here

Click Here

Call us

Visit Now

Click here

ಕೆಮಿಸ್ಟ್ರಿ ಪ್ರಶ್ನೆ ಪತ್ರಿಕೆ ಲೀಕ್ ಆಗಿದ್ದು ತಿಳಿಯದೇ ಗ್ರಾಮೀಣ ಭಾಗದಿಂದ ಪರೀಕ್ಷಾ ಕೇಂದ್ರಕ್ಕೆ ಬಂದು, ಪರೀಕ್ಷೆ ಬರೆಯಲಾಗದೆ ಅಸಾಯಕತೆಯಿಂದ ಹೊರ ಬಂದ ವಿದ್ಯಾರ್ಥಿಗಳ ಸಹನೆ ಕಟ್ಟೆಯೊಡೆದು ವ್ಯವಸ್ಥೆಯ ವಿರುದ್ಧ ದಿಕ್ಕಾರ ಕೂಗಿದರು. ನಾವ್ಯಾಕೆ ಪರೀಕ್ಷೆ ಬರೀಬೇಕು. ಯಾರೋ ಮಾಡಿದ ತಪ್ಪಿಗೆ ನಾವ್ಯಾಕೆ ಶಿಕ್ಷೆ ಅನುಭವಿಸಬೇಕು. ಕಷ್ಟಪಟ್ಟು ಓದಿದ್ದೆಲ್ಲಾ ವೇಸ್ಟ್. ಒಮ್ಮೆ ಕೆಮೆಸ್ಟ್ರೀ ಪ್ರಶ್ನೆ ಪತ್ರಿಕೆ ಲೀಕ್ ಆಯಿತು. ಹೋಗಲಿ ಆಂತ ಮತ್ತೆ ಪರೀಕ್ಷೆ ಬರೆಯಲು ಬಂದರೆ, ಅದೂ ಲೀಕ್. ಮತ್ತೆ ಲೀಕ್ ಆಗೋದಿಲ್ಲ ಎನ್ನೋದು ಏನು ಗ್ಯಾರೆಂಟಿ ಎಂದು ಆಕ್ರೋಶ ಹೊರಗೆಡವಿದರು.

ಪದೇ ಪದೇ ಪರೀಕ್ಷೆ ಬರೆಯಬೇಕಾ. ಮುಂದೆ ಸಿಇಟಿ ಬರಬೇಕು. ಜೆಇ ಬರೆಯಬೇಕು. ಪ್ರಶ್ನೆ ಪತ್ರಿಕೆ ಲೀಕ್ ಆಗಿದ್ದರಿಂದ ಮತ್ತೆ ಪರೀಕ್ಷೆ ತಗಳೋದಾ, ಸಿಇಟಿಗೆ ಜೆಇಗೆ ತಯಾರಾಗೋದಾ ಯಾವುದೂ ಗೊತ್ತಾಗುತ್ತಿಲ್ಲ. ವಿದ್ಯಾರ್ಥಿಗಳ ಕಷ್ಟಕ್ಕೆ ನೇರೆ ಹೊಣೆ ಸರಕಾರ ಮತ್ತು ಪಿಯು ಬೋರ್ಡ್ ಎಂದು ವಿದ್ಯಾರ್ಥಿಗಳು ಆರೋಪಿಸಿ, ನಾವು ಯಾವ ಕಾರಣಕ್ಕೂ ಪರೀಕ್ಷೆ ಬರೆಯೋದಿಲ್ಲ ಎಂದು ಪಟ್ಟು ಹಿಡಿದರು.

ಪರೀಕ್ಷೆ ಕೇಂದ್ರದಿಂದ ಹೊರಟ ವಿದ್ಯಾರ್ಥಿಗಳು ಸಾಲು ಪೊಲೀಸರು ಚದುರಿಸಿದ ಮೇಲೆ ಕುಂದಾಪುರ ಮಿನಿ ವಿಧಾನ ಸೌಧ ಬಳಿ ಜಮಾಯಿಸಿದರು. ಸಮಸ್ಯೆ ಬಗೆಹರಿಸಿ, ಪ್ರಶ್ನೆ ಪತ್ರಿಕೆ ಲೀಕ್ ಆದ ಕಡೆ ಮಾತ್ರ ಮರು ಪರೀಕ್ಷೆ ನಡೆಸಿ,ಎ.3 ಮತ್ತು 4 ರಂದು ಜೆಇ ಲಿಖಿತ ಪರೀಕ್ಷೆ, ಎ.9.10 ರಂದು ಆನ್ ಲೈನ್ ಪರೀಕ್ಷೆ, ಹೀಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿ ಭವಿಷ್ಯದ ಜೊತೆ ಚೆಲ್ಲಾಟ ಬೇಡಾ. ನಾವು ಪರೀಕ್ಷೆ ಬರೆಯೋದಿಲ್ಲ ಎಂದು ಕುಂದಾಪುರ ತಹಸೀಲ್ದಾರ್ ಗಾಯತ್ರಿ ಎನ್.ನಾಯ್ಕ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಎಬಿವಿಪಿ ವಿದ್ಯಾರ್ಥಿ ಮುಖಂಡರು ಇದ್ದರು.

?????????????
?????????????

Leave a Reply

Your email address will not be published. Required fields are marked *

four × two =