ಪುಸ್ತಕಗಳು ಜ್ಞಾನದ ಜೊತೆಗೆ ಸಂಸ್ಕಾರವನ್ನು ಬೆಳೆಸುತ್ತೆ: ದೋಮ ಚಂದ್ರಶೇಖರ್

Call us

Call us

Click here

Click Here

Call us

Call us

Visit Now

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಓದು ಎನ್ನುವುದು ಸಹಜಕ್ರಿಯೆ, ಪ್ರತಿಯೋರ್ವರ ಜ್ಞಾನದಾಹಕ್ಕಾಗಿ ಓದಿನ ಹಸಿವನ್ನು ಬೆಳೆಸಿಕೊಳ್ಳಬೇಕು. ಓದು ಸ್ವಅನುಭವಕ್ಕಿಂತ ಭಿನ್ನವಾದುದು, ಅತ್ಯುತ್ತಮ ವೈವಿಧ್ಯಮಯ ಪುಸ್ತಕಗಳ ಓದುವಿಕೆಯಿಂದ ಅನ್ಯರ ಜೀವನಾನುಭವವನ್ನು ಗ್ರಹಿಸಬಹುದು. ಈ ತೆರನಾಗಿ ಜ್ಞಾನ , ಸಂಸ್ಕಾರ , ಪ್ರವೃತ್ತಿಗಳ ಮೂಲಕ ಸಮೃದ್ದ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಿದೆ” ಎಂದು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ದೋಮ ಚಂದ್ರಶೇಖರ್ ಹೇಳಿದರು.

Call us

Call us

ಅವರು ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಲಾದ ವಿಶ್ವ ಪುಸ್ತಕ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಕಾಲೇಜಿನ ಪ್ರಾಚಾರ್ಯರಾದ ಸಿದ್ದಪ್ಪ ಕೆ. ಎಸ್ ಪ್ರಾಸ್ತಾವಿಕವಾಗಿ ಮಾತನಾಡಿ “ವಿದ್ಯಾರ್ಥಿಗಳಲ್ಲಿ ರಚನಾತ್ಮಕ ಮನೋಭಾವ ಬೆಳೆಯಲು ಓದುವಿಕೆಯ ಹವ್ಯಾಸ ಅಡಿಪಾಯವನ್ನು ಒದಗಿಸಬಲ್ಲದು” ಎಂದರು. ಉಪನ್ಯಾಸಕರಾದ ಪ್ರವೀಣ್ ಕುಮಾರ್ ಕೆ. ಪಿ ಸ್ವಾಗತಿಸಿದರು, ಅನಂತ ಭಟ್ ನಿರೂಪಿಸಿದರು, ಉಪನ್ಯಾಸಕಿ ಡಾ. ಉಷಾರಾಣಿ ವಂದಿಸಿದರು. ಕಾಲೇಜಿನ ಎಲ್ಲಾ ಉಪನ್ಯಾಸಕರು, ಪ್ರಶಿಕ್ಷಣಾರ್ಥಿಗಳು ಮತ್ತು ಓಡಿಎಲ್ ಪ್ರಶಿಕ್ಷಣಾರ್ಥಿಗಳು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *

13 − three =