2020ನೇ ಸಾಲಿನ ಪುಸ್ತಕ ಬಹುಮಾನಕ್ಕೆ ಕೃತಿಗಳ ಆಹ್ವಾನ

Call us

Call us

Click here

Click Here

Call us

Call us

Visit Now

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ:
ಕರ್ನಾಟಕ ಸಾಹಿತ್ಯ ಅಕಾಡೆಮಿಯ ವತಿಯಿಂದ 2020 ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗಾಗಿ ಕಾವ್ಯ, ನವಕವಿಗಳ ಪ್ರಥಮ ಕವನ ಸಂಕಲನ, ಕಾವ್ಯ ಹಸ್ತಪ್ರತಿ, ಕಾದಂಬರಿ, ಸಣ್ಣಕತೆ, ನಾಟಕ, ಲಲಿತ ಪ್ರಬಂಧ, ಪ್ರವಾಸ ಸಾಹಿತ್ಯ, ಜೀವನ ಚರಿತ್ರೆ/ ಆತ್ಮಕಥೆ, ಸಾಹಿತ್ಯ ವಿಮರ್ಶೆ, ಗ್ರಂಥ ಸಂಪಾದನೆ, ಮಕ್ಕಳ ಸಾಹಿತ್ಯ, ವಿಜ್ಞಾನ ಸಾಹಿತ್ಯ, ಮಾನವಿಕ, ಸಂಶೋಧನೆ, ವೈಚಾರಿಕ / ಅಂಕಣ ಬರಹ, ಅನುವಾದ-1 (ಇಂಗ್ಲೀಷ್ ಸೇರಿದಂತೆ ಭಾರತೀಯ ಭಾಷೆಯಿಂದ ಕನ್ನಡಕ್ಕೆ ಅನುವಾದಗೊಂಡ ಸೃಜನ/ ಸೃಜನೇತರ ಕೃತಿಗಳು), ಅನುವಾದ-2 (ಕನ್ನಡದಿಂದ ಅನ್ಯಭಾಷೆಗಳಿಗೆ ಅನುವಾದಗೊಂಡ ಸೃಜನ/ ಸೃಜನೇತರ ಕೃತಿ), ಲೇಖಕರ ಮೊದಲ ಸ್ವತಂತ್ರ ಕೃತಿ, ಕನ್ನಡದಿಂದ ಇಂಗ್ಲೀಷಿಗೆ ಅನುವಾದ, ದಾಸ ಸಾಹಿತ್ಯ ಮತ್ತು ಸಂಕೀರ್ಣ ಪ್ರಕಾರಗಳ ಕನ್ನಡ ಪುಸ್ತಕಗಳನ್ನು ಸಲ್ಲಿಸಲು ಅರ್ಜಿ ಆಹ್ವಾನಿಸಲಾಗಿದೆ.

Call us

Call us

ಪ್ರತಿ ಪ್ರಕಾರದಲ್ಲಿ ವಿಮರ್ಶಕರು ಆಯ್ಕೆ ಮಾಡುವ ಒಂದು ಕೃತಿಗೆ ಬಹುಮಾನ ನೀಡಲಾಗುವುದು. 2020 ರ ಜನವರಿ 1 ರಿಂದ ಡಿಸೆಂಬರ್ 31 ರ ಒಳಗೆ ಪ್ರಥಮ ಆವೃತ್ತಿಯಾಗಿ ಪ್ರಕಟವಾಗಿರುವ, ಕೃತಿಯಲ್ಲಿ ಪ್ರಥಮ ಮುದ್ರಣ 2020 ಎಂದು ಮುದ್ರಿತವಾಗಿರುವ ಕೃತಿಗಳನ್ನು ಬಹುಮಾನಕ್ಕೆ ಸಲ್ಲಿಸಬಹುದು.

ಪುಸ್ತಕಗಳ ತಲಾ ನಾಲ್ಕು ಪ್ರತಿಗಳನ್ನು ರಿಜಿಸ್ಟಾರ್, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡಭವನ, 2 ನೇ ಮಹಡಿ, ಜೆ.ಸಿ ರಸ್ತೆ, ಬೆಂಗಳೂರು ಇವರಿಗೆ ರಿಜಿಸ್ಟರ್ಡ್ ಅಂಚೆ, ಕೊರಿಯರ್ ಅಥವಾ ಖುದ್ದಾಗಿ ಸಲ್ಲಿಸಲು ಸೆಪ್ಟಂಬರ್ 15 ಕೊನೆಯ ದಿನ. ಕಳುಹಿಸಲ್ಪಡುವ ಕೃತಿಯ ಮೇಲೆ ತಿಳಿಸಿದ ಪ್ರಕಾರಗಳಲ್ಲಿ ಯಾವ ಸಾಹಿತ್ಯ ಪ್ರಕಾರಕ್ಕೆ ಸೇರುತ್ತದೆ ಎನ್ನುವುದನ್ನು ಸ್ಪಷ್ಟವಾಗಿ ಪುಸ್ತಕದ ಶೀರ್ಷಿಕೆ ಪುಟದಲ್ಲಿ ನಮೂದಿಸುವಂತೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಕರಿಯಪ್ಪ ಎನ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

four + four =